ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಟ್ರಾಫಿಕ್ ನಿಯಮ ಉಲ್ಲಂಘಿಸುವವರನ್ನು ದಾರಿಗೆ ತರಲು ಕೇಂದ್ರ ಸರ್ಕಾರ ಈ ಬಾರಿ ವಿಭಿನ್ನ ಆಲೋಚನೆಯೊಂದಿಗೆ ಬಂದಿದೆ. ರಸ್ತೆಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಿಂಘಿಸುವವರ ಫೋಟೋ ತೆಗೆದು ಕಳುಹಿಸುವವರಿಗೆ ಬಹುಮಾನ ನೀಡುವ ಹೊಸ ಯೋಜನೆಯನ್ನು ತರಲಿದ್ದು, ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ನೋ ಪಾರ್ಕಿಂಗ್‌ನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವಾಹನ ಚಾಲಕರಿಂದ ನಿತ್ಯ ಸಂಚಾರ ನಿಯಮಗಳ ಉಲ್ಲಂಘನೆಯಾಗುತ್ತಲೇ ಇದೆ. ಇದಕ್ಕೆ ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸವಾರರು ಪದೇ ಪದೇ ನಿಯಮಗಳನ್ನು ಲೆಕ್ಕಸುತ್ತಿಲ್ಲ. ಇವು ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ದೇಶದ ಪ್ರತಿ ನಗರಗಳಲ್ಲೂ ಹಲವರು ರಸ್ತೆಗಳನ್ನು ಆಕ್ರಮಿಸಿಕೊಂಡು ವಾಹನಗಳನ್ನು ನಿಲ್ಲಿಸಿದರೆ, ಇನ್ನೂ ಕೆಲವರು ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟು ಮಾಡುತ್ತಿದ್ದಾರೆ. ಇದರಿಂದ ಇತರೆ ವಾಹನಗಳು ಸಂಚರಿಸಲಾಗದೇ ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಕೆಲವೊಮ್ಮೆ ಆಂಬುಲನ್ಸ್‌ ಹಾಗೂ ಅಗ್ನಿ ಶಾಮಕದಳ ವಾಹನಗಳಿಗೆ ದಾರಿ ಸಿಗುತ್ತಿಲ್ಲ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಮಸ್ಯೆ ಬಗೆಹರಿಸಲು ಕ್ರಿಯಾ ಯೋಜನೆ ರೂಪಿಸಿದ್ದಾರೆ. ಈ ಯೋಜನೆಗೆ ಸಂಬಂಧಿಸಿದಂತೆ ಅವರು ಸೂಚಿಸಿರುವ ಕೆಲವು ಸೂಚನೆಗಳು ಎಲ್ಲರ ಗಮನ ಸೆಳೆದಿವೆ. ಈ ನಿಯಮಗಳನ್ನು ಪಾಲಿಸುವ ಮೂಲಕ ನಾವು ಕೂಡ ಹಣ ಸಂಪಾದನೆ ಮಾಡಬಹುದು.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಯಾವುದೇ ವಾಹನ ಮಾಲೀಕರು ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಫೋಟೋ ತೆಗೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗರೀಕರಲ್ಲಿ ಮನವಿ ಮಾಡಿದ್ದಾರೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದರೂ ಫೋಟೋ ಕಳುಹಿಸಬೇಕು ಎಂದು ಸೂಚಿಸಿದ್ದಾರೆ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಫೋಟೋ ಕಳುಹಿಸುವವರಿಗೆ 500 ರೂಪಾಯಿ ಬಹುಮಾನ ನೀಡುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ನಿಯಮ ಉಲ್ಲಂಘಿಸಿದವರಿಗೆ 1,000 ರೂ. ದಂಡ ವಿಧಿಸಿದರೆ, ಫೋಟೋ ಕಳುಹಿಸುವವರಿಗೆ 500 ರೂ. ಬಹುಮಾನ ದೊರೆಯಲಿದೆ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿ, 'ದೊಡ್ಡ ನಗರಗಳಲ್ಲಿ ವಾಹನ ನಿಲುಗಡೆ ಸಮಸ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಹೊಸ ಕಾನೂನನ್ನು ತರಲಿದ್ದೇನೆ. ಈ ಕಾನೂನಿನ ಪ್ರಕಾರ, ತಪ್ಪಾದ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ 1,000 ರೂ. ದಂಡ ವಿಧಿಸಿದರೆ, ಫೋಟೋ ಕಳುಹಿಸಿದ ವ್ಯಕ್ತಿಗೆ 500 ರೂ. ನೀಡುವುದಾಗಿ ತಿಳಿಸಿದ್ದಾರೆ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಇದರಿಂದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದರೆ ಈ ಕಾನೂನು ಯಾವಾಗ ಜಾರಿಗೆ ಬರಲಿದೆ? ಎಂಬುದರ ಬಗ್ಗೆ ಸದ್ಯಕ್ಕೆ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಹೇಳಿದ್ದಾರೆಯೇ ವಿನಹ ಯಾವಾಗ, ಹೇಗೆ ಎಂಬುದನ್ನು ತಿಳಿಸಿಲ್ಲ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಹಿರಂಗವಾಗಿ ಮಾತನಾಡಬಲ್ಲರು ಎಂಬುದು ನಮಗೆ ತಿಳಿದಿದೆ. ಅವರು ರಸ್ತೆ ಸುರಕ್ಷತೆಗಾಗಿ ವಿವಿಧ ಸೃಜನಶೀಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳಿವೆ. ಹೀಗಾಗಿ ಪಾರ್ಕಿಂಗ್ ನಿಯಮಾವಳಿಗೆ ಸಂಬಂಧಿಸಿದಂತೆ ಈಗ ಅವರು ಪ್ರಕಟಿಸಿರುವ ಹೊಸ ಕಾನೂನು ಶೀಘ್ರವೇ ಜಾರಿಗೆ ಬಂದರೂ ಅಚ್ಚರಿಪಡಬೇಕಾಗಿಲ್ಲ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಸುರಕ್ಷತೆ ಮತ್ತು ಕಚ್ಚಾ ತೈಲ ಆಮದು ಕಡಿಮೆ ಮಾಡಲು ಪರ್ಯಾಯ ಇಂಧನದಲ್ಲಿ ಚಲಿಸುವ ವಾಹನಗಳಿಗೆ ಬದಲಾಯಿಸುವ ಬಗ್ಗೆ ವಿವಿಧ ಸ್ಥಳಗಳಲ್ಲಿ ಮಾತನಾಡುತ್ತಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ ಅವರ ಸಚಿವಾಲಯವು ಭಾರತವನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಮೂಲಸೌಕರ್ಯಗಳನ್ನು ಸುಧಾರಿಸಲು ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ತ್ವರಿತ ವೇಗ, ಸಂಚಾರ ನಿಯಮಗಳನ್ನು ಬಿಗಿಗೊಳಿಸುವುದು ಮತ್ತು ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ವಾಹನಗಳ ಹೆಚ್ಚಿಸಲು ಪ್ರಯತ್ನಗಳನ್ನು ವೇಗಗೊಳಿಸುತ್ತಿದ್ದಾರೆ. ಈ ನಡುವೆ ಎಲೆಕ್ಟ್ರಿಕ್ ವಾಹನಗಳಲ್ಲಿ ಪ್ರಮಾಣಿತ ಬ್ಯಾಟರಿ ಅಳವಡಿಕೆಗೆ ಎಚ್ಚರಿಕೆ ನೀಡಿದ್ದಾರೆ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಅಲ್ಲದೇ ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಇವಿಗಳ ಮೇಲೆ ಹೆಚ್ಚಿನ ನಂಬಿಕೆ ಬರಲು ತಯಾರಕರ ಗುಣಮಟ್ಟದ ಉತ್ಪನ್ನಗಳಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ವಾಹನ ತಯಾರಕರು ಬ್ಯಾಟರಿಗಳ ಅಳವಡಿಕೆಯಲ್ಲಿ ಯಾವುದೇ ಸಮಸ್ಯೆ ಇರದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ವಾಹನಗಳಲ್ಲಿನ ಬೆಂಕಿ ಅವಘಡಗಳು ಮತ್ತೆ ಕಾಣಿಸಿಕೊಂಡರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದವರ ಫೋಟೋ ತೆಗೆದು ಕಳುಹಿಸಿದವರಿಗೆ ರೂ.500 ಬಹುಮಾನ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಭಾರತದ ಪಾರ್ಕಿಂಗ್ ಸಮಸ್ಯೆಗೆ ಶೀಘ್ರದಲ್ಲೇ ಉತ್ತಮ ಪರಿಹಾರವನ್ನು ಕಂಡುಕೊಳ್ಳಲಿದೆ ಎಂಬ ನಿರೀಕ್ಷೆಯಿದೆ. ಗಡ್ಕರಿ ಅವರ ಘೋಷಣೆಗೆ ಪ್ರಸ್ತುತ ದೊಡ್ಡ ನಗರಗಳಲ್ಲಿ ಟ್ರಾಫಿಕ್ ದಟ್ಟಣೆ ಸಮಸ್ಯೆಯಿಂದ ಬಳಲುತ್ತಿರುವವರು ಶ್ಲಾಘಿಸುತ್ತಿದ್ದಾರೆ. ಅವರ ಹೊಸ ನಿಯಮಗಳು ಜಾರಿಯಾದ ನಂತರ ಯಾವ ಮಟ್ಟಿಗೆ ಯಶಸ್ವಿಯಾಗಲಿವೆ ಕಾದುನೋಡಬೇಕಿದೆ.

Most Read Articles

Kannada
English summary
Rs 500 Reward for sending a photo of people who parked in wrong place
Story first published: Friday, June 17, 2022, 10:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X