Just In
- 28 min ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
- News
BBC ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಕೇಂದ್ರಕ್ಕೆ ಸುಪ್ರೀಂ ನೋಟೀಸ್
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಅರ್ಧಕೋಟಿಗೂ ಅಧಿಕ ಬೆಲೆಯಲ್ಲಿ ಈ ಹಳೇ ಐಫೋನ್ ಮಾರಾಟ!..ಅದ್ಹೇಗೆ ಸಾಧ್ಯ ಅಂತೀರಾ!?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
4 ಕಿ.ಮೀ ಪ್ರಯಾಣಕ್ಕೆ 861 ರೂ. ಬಿಲ್: ಓವರ್‌ಚಾರ್ಜ್ ಮಾಡಿದ ಓಲಾಗೆ 95,000 ರೂ.ದಂಡ
ಅಧಿಕ ಶುಲ್ಕ ವಿಧಿಸಿದ್ದಕ್ಕಾಗಿ ಮತ್ತು ಸೇವೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಗ್ರಾಹಕನಿಗೆ 95,000 ರೂ.ಗಳನ್ನು ಪಾವತಿಸುವಂತೆ ಹೈದರಾಬಾದ್‌ನ ಗ್ರಾಹಕ ನ್ಯಾಯಾಲಯವು ಓಲಾ ಕ್ಯಾಬ್ಸ್‌ಗೆ ಸೂಚಿಸಿದೆ.
Recommended Video
200 ರೂ. ಆಗುವ 4-5 ಕಿ.ಮೀ ಪ್ರಯಾಣಕ್ಕೆ ಬರೋಬ್ಬರಿ 861 ರೂ. ಬಿಲ್ ಮಾಡಿದ್ದಾರೆ ಎಂದು ಆರೋಪಿಸಿ, ಗ್ರಾಹಕರೊಬ್ಬರು ಓಲಾ ಕ್ಯಾಬ್ಸ್ ವಿರುದ್ಧ ನ್ಯಾಯ ದೊರಕಿಸಿಕೊಡುವಂತೆ ಹೈದರಾಬಾದ್‌ನ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ಬಳಿಕ ಪ್ರಯಾಣಿಕರಿಂದ ಅಧಿಕ ಶುಲ್ಕ ವಿಧಿಸಿದ್ದಕ್ಕಾಗಿ ಓಲಾ ಕ್ಯಾಬ್ಸ್‌ಗೆ ಗ್ರಾಹಕ ನ್ಯಾಯಾಲಯ ಭಾರಿ ದಂಡ ವಿಧಿಸಿದೆ.

ಅಕ್ಟೋಬರ್ 19, 2021 ರಂದು ಹೈದರಾಬಾದ್‌ನ ಜಬೆಜ್ ಸ್ಯಾಮ್ಯುಯೆಲ್ ಅವರು ತಮ್ಮ ಕುಟುಂಬದೊಂದಿಗೆ ಪ್ರಯಾಣಿಸಲು 4 ಗಂಟೆಗಳ ಪ್ಯಾಕೇಜ್ ಅಡಿಯಲ್ಲಿ ಓಲಾ ಕ್ಯಾಬ್ಸ್ ಮೂಲಕ ಕಾರನ್ನು ಬುಕ್ ಮಾಡಿದ್ದರು. ಬಳಿಕ ಪಿಕಪ್ ಪಾಯಿಂಟ್‌ಗೆ ಬಂದ ಓಲಾ ಚಾಲಕ ಜಬೆಜ್ ಸ್ಯಾಮುವೆಲ್ ಕುಟುಂಬದೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಸ್ಯಾಮುವೆಲ್ ಆರೋಪಿಸಿದ್ದಾರೆ.

ನಂತರ ಕಾರು ಏರಿದ ಬಳಿಕ ಒಳಾಂಗಣವು ತುಂಬಾ ಕೆಟ್ಟದಾಗಿತ್ತು. ಜಬೆಜ್ ಸ್ಯಾಮುಯೆಲ್ ಅವರು ಎಸಿ ಆನ್ ಮಾಡುವಂತೆ ಹೇಳಿದರೂ ಚಾಲಕ ನಿರ್ಲಕ್ಷ್ಯ ತೋರಿದ್ದಲ್ಲದೇ ದುರುಸಾಗಿ ವರ್ತಿಸಿದ್ದಾನೆ ಎಂದು ಹೇಳಿದ್ದಾರೆ. ಹಾಗಾಗಿ ಪಿಕಪ್ ಪಾಯಿಂಟ್‌ನಿಂದ 4-5 ಕಿ.ಮೀ ದೂರ ಬಂದು ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ.

ಆರಾಮವಿಲ್ಲದೆ ಪ್ರಯಾಣ ಮುಂದುವರಿಸಲು ಮನಸ್ಸಿಲ್ಲದ ಕಾರಣ ಪ್ಯಾಕೇಜ್ ಬುಕಿಂಗ್ ರದ್ದುಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಈ ಕಡಿಮೆ ದೂರದ ಪ್ರಯಾಣಕ್ಕೆ ಓಲಾ ಬರೋಬ್ಬರಿ ರೂ. 861 ಶುಲ್ಕ ವಿಧಿಸಿದೆ. ಇದನ್ನು ಕೇಳಿದ ಜಬಸ್ ಸ್ಯಾಮ್ಯುಯೆಲ್ ಕುಟುಂಬ ಸದಸ್ಯರೆಲ್ಲರೂ ಶಾಕ್ ಆಗಿದ್ದಾರೆ.

ಅಪೂರ್ಣ ಪ್ರಯಾಣ ಮಾಡಿದರೂ, ರೂ 861 ಬಿಲ್ ಕೇಳಿದ್ದಕ್ಕೆ, ತಾನು supportolacabs.com ಗೆ ಇಮೇಲ್ ಮೂಲಕ ದೂರು ನೀಡಿದ್ದೇನೆ ಮತ್ತು ಗ್ರಾಹಕ ಆರೈಕೆ ಕಾರ್ಯನಿರ್ವಾಹಕರಿಂದ ಕರೆಯನ್ನು ಸ್ವೀಕರಿಸಿದ್ದು, ಅವರು ಉನ್ನತ ಅಧಿಕಾರಿಗೆ ಕರೆಯನ್ನು ವರ್ಗಾಯಿಸಲು ವಿಫಲವಾಗಿದ್ದಾರೆ.

ನಂತರ ಈ ಬಿಲ್ ಪಾವತಿಸಲು ನಿರಾಕರಿಸಿದ್ದರೂ ಕಾಲಕಾಲಕ್ಕೆ ಜಬೆಜ್ ಸ್ಯಾಮುಯೆಲ್‌ಗೆ ಕರೆ ಮಾಡಿ ಬಿಲ್ ಪಾವತಿಸಲು ಒತ್ತಾಯಿಸಿದ್ದಾರೆ. ಇದರಿಂದ ತೀವ್ರ ನೊಂದಿರುವ ಜಬೆಜ್ ಹೈದರಾಬಾದ್ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಘಟನೆಯ ತನಿಖೆ ನಡೆಸಿದ್ದ ನ್ಯಾಯಾಲಯವು ಓಲಾಗೆ ಹಾಜರಾಗುವಂತೆ ಆದೇಶಿಸಿತ್ತು.

ಆದರೆ, ಕಂಪನಿ ಪರವಾಗಿ ಯಾರೂ ಕಾಣಿಸಿಕೊಂಡಿಲ್ಲ. ಈ ಹಂತದಲ್ಲಿಯೇ ಜಬೆಜ್ ಸ್ಯಾಮ್ಯುಯೆಲ್‌ನ ದೂರಿನ ಹಿಂದಿನ ಸಮರ್ಥನೆ ಅರಿವಾಯಿತು. ಆತನ ಮಾನಸಿಕ ಸಂಕಟಕ್ಕೆ ಸಾಂತ್ವನ ಹೇಳಲು ರೂ. 88,000 ಪರಿಹಾರ ನೀಡುವಂತೆ ಓಲಾ ಕ್ಯಾಬ್ಸ್‌ಗೆ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.

ಇದಲ್ಲದೇ ತನಿಖಾ ಶುಲ್ಕ ರೂ. 7 ಸಾವಿರ ಪಾವತಿಸುವಂತೆಯೂ ಆದೇಶಿಸಿದೆ. ಇದನ್ನೆಲ್ಲ 45 ದಿನಗಳಲ್ಲಿ ಪಾವತಿಸುವಂತೆ ಓಲಾಗೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಉಲ್ಲಂಘನೆಯಾದಲ್ಲಿ ಕಂಪನಿಯು ಬಡ್ಡಿಯೊಂದಿಗೆ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಕಂಪನಿ ಎಚ್ಚರಿಕೆ ನೀಡಿದೆ. ಜೊತೆಗೆ ಶುಲ್ಕವಾಗಿ ಸಂಗ್ರಹಿಸಿದ 861 ರೂ.ಗಳನ್ನು ಶೇ.12 ಬಡ್ಡಿ ಸಹಿತ ವಾಪಸ್ ನೀಡುವಂತೆಯೂ ಆದೇಶಿಸಲಾಗಿದೆ.

ಒಟ್ಟಾರೆಯಾಗಿ 95,000 ರೂಪಾಯಿ ಪಾವತಿಸಲು ಓಲಾಗೆ ಆದೇಶಿಸಿದೆ. ಪ್ರಯಾಣದ ದಿನಾಂಕದಿಂದ ಬಡ್ಡಿಯನ್ನು ಲೆಕ್ಕ ಹಾಕಬೇಕು. ಈ ಆದೇಶವನ್ನು ಅನುಸರಿಸಲು ವಿಫಲವಾದರೆ ಹೆಚ್ಚುವರಿ ಬಡ್ಡಿ ಮತ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಸುಂಕ ಉಲ್ಲಂಘನೆಯಲ್ಲಿ ತೊಡಗಿರುವ ಓಲಾ ಕಂಪನಿ ವಿರುದ್ಧ ಗ್ರಾಹಕ ನ್ಯಾಯಾಲಯ ಕ್ರಮ ಕೈಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆಟೋಗಳು ಮತ್ತು ಕಾರುಗಳು ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಕೊಡುಗೆ ನೀಡುತ್ತವೆ. ಈ ಖಾಸಗಿ ಸಾರಿಗೆ ಸೇವೆಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹಲವು ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತವೆ. ಈಗಿನಂತೆ ಆಟೋಗಳಲ್ಲಿ ಮೊದಲ 1.8 ಕಿ.ಮೀ ಪ್ರಯಾಣ ರೂ. 25 ಮತ್ತು ನಂತರದ ಪ್ರತಿ ಕಿ.ಮೀ.ಗೆ ರೂ. 12ರ ವರೆಗೆ ಕೂಡ ಶುಲ್ಕ ವಸೂಲಿ ಮಾಡಬೇಕು ಎನ್ನಲಾಗಿದೆ.

ಆದರೆ ಬಹುತೇಕ ಆಟೋ ಚಾಲಕರು ಕೇವಲ ಒಂದೆರಡು ಕಿ.ಮೀ.ಗೆ ನೂರರಷ್ಟು ಶುಲ್ಕ ವಿಧಿಸುತ್ತಾರೆ. ಆಟೋ ಗ್ಯಾಸ್ ಬೆಲೆಗಳಲ್ಲಿ ಇತ್ತೀಚಿನ ಏರಿಕೆಯನ್ನು ಉಲ್ಲೇಖಿಸಿ ಕೆಲವರು ಮೀಟರ್‌ನಲ್ಲಿ ಹೆಚ್ಚುವರಿ ಶುಲ್ಕವನ್ನು ಕೇಳುವುದನ್ನು ನಾವು ನೋಡಬಹುದು. ಈ ಹಂತದಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಓಲಾ ಆಡಳಿತ ಮಂಡಳಿ ವಿರುದ್ಧ ಗ್ರಾಹಕ ನ್ಯಾಯಾಲಯ ಕಠಿಣ ಕ್ರಮ ಕೈಗೊಂಡಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ದೇಶದಲ್ಲಿ ಕಾಲ್ ಟ್ಯಾಕ್ಸಿ ಕಂಪನಿಗಳ ವಿರುದ್ಧ ದೂರುಗಳು ಹೆಚ್ಚಾಗತೊಡಗಿವೆ. ಆರಂಭದಲ್ಲಿ ಕೈಗೆಟಕುವ ದರದಲ್ಲಿ ಸೇವೆ ನೀಡುತ್ತಿದ್ದ ಟ್ಯಾಕ್ಸಿ ಕಂಪನಿಗಳಾದ ಓಲಾ ಮತ್ತು ಉಬರ್ ಈಗ ಎರಡು ಕಿಲೋಮೀಟರ್ ಗಿಂತ ಕಡಿಮೆ ಪ್ರಯಾಣಕ್ಕೆ ನೂರಾರು ರೂಪಾಯಿ ಶುಲ್ಕ ವಿಧಿಸುತ್ತಿವೆ. ಅಲ್ಲದೇ ಗ್ರಾಹಕರ ದೂರುಗಳಿಗೂ ಸರಿಯಾಗಿ ಸ್ಪಂಧಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದೀಗ ಹೈದರಾಬಾದ್ ಗ್ರಾಹಕ ನ್ಯಾಯಾಲಯ ಕಂಪನಿ ವಿರುದ್ಧ ತೆಗೆದುಕೊಂಡ ಕ್ರಮ ಶ್ಲಾಘನೀಯವಾಗಿದೆ.