ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಿದ ಆರ್‌ಟಿಓ

ವ್ಯಕ್ತಿಯೊಬ್ಬ ತನ್ನ ಸಮಸ್ಯೆ ಕುರಿತು ದ್ವಿಚಕ್ರ ವಾಹನದಲ್ಲಿ ಡ್ರೈವಿಂಗ್ ಮಾಡುತ್ತಾ ಲೈವ್ ವಿಡಿಯೋ ಮಾಡಿ ಸಾರ್ವಜನಿಕರಿಗೆ ತಲುಪಿಸಲು ಪ್ರಯತ್ನಿಸಿ ಮತ್ತೆ ಸಮಸ್ಯೆಗೆ ಸಿಲುಕಿದ್ದಾನೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ಲಭ್ಯವಿಲ್ಲದಿರುವ ಬಗ್ಗೆ ದೂರು ನೀಡುವುದಾಗಿ ಫೇಸ್‌ಬುಕ್ ಲೈವ್ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಸ್ಥಳೀಯ ಆರ್‌ಟಿಒ ಗಮನಕ್ಕೆ ಬಂದಿದ್ದು, ಆತನ ಡ್ರೈವಿಂಗ್ ಲೈಸೆನ್ಸ್ ಅನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಿದೆ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ಸೋಷಿಯಲ್ ಮೀಡಿಯಾ, ಇದೊಂದು ಇದ್ದರೇ ಇಂದಿನ ಯುವಪೀಳಿಗೆ ಜಗತ್ತನ್ನೇ ಮರೆತುಬಿಡುತ್ತೆ. ನಿಜ ಜೀವನವನ್ನು ಮರೆತು ಇಲ್ಲದ ಜಗತ್ತನ್ನು ಕಾಣಲು ಮೊಬೈಲ್‌ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿ ಶೇರ್ ಮಾಡುವುದೇ ಇಂದಿನ ಯುವಕರ ಕಾಯಕವಾಗಿಬಿಟ್ಟಿದೆ. ಸೋಷಿಯಲ್ ಮೀಡಿಯಾದಿಂದ ಕೇವಲ ಸಮಸ್ಯೆಗಳೇ ಎದುರಾಗುತ್ತವೆ ಎಂಬುದು ನಮ್ಮ ಉದ್ದೇಶವಲ್ಲ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ಒಳ್ಳೆಯ ವಿಚಾರಗಳಿಗಾಗಿಯು ಇದನ್ನು ಬಳಸಿಕೊಳ್ಳಬಹುದು, ಆದರೆ ಅದಕ್ಕೂ ಸಮಯ, ಸಂದರ್ಭವಿರುತ್ತದೆ. ಇವೆರಡನ್ನು ಮರೆತರೆ ನೀವು ಸಮಸ್ಯೆಗೆ ಸಿಲುಕುವುದು ಖಚಿತ ಎಂಬುದಕ್ಕೆ ಈ ವ್ಯಕ್ತಿಯೇ ಉತ್ತಮ ಉದಾಹರಣೆ. ವಿಷಯಕ್ಕೆ ಬಂದರೆ, ಕೇರಳದ ಇಡುಕ್ಕಿ ಜಿಲ್ಲೆಯ ಚೆರುತೋನಿ ಗ್ರಾಮದಲ್ಲಿ ಇತ್ತೀಚಿಗೆ ವ್ಯಕ್ತಿಯೊಬ್ಬ ಫೇಸ್‌ಬುಕ್ ಲೈವ್ ಮಾಡಿದ್ದ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ಇದರ ಹಿಂದಿನ ಕಾರಣ, ಆ ವ್ಯಕ್ತಿ ಫೆಸ್‌ಬುಕ್ ಲೈವ್‌ ಬರುವ ಮೊದಲು ಪೆಟ್ರೋಲ್ ಪಂಪ್‌ವೊಂದರಲ್ಲಿ ಪೆಟ್ರೋಲ್ ಲಭ್ಯವಿಲ್ಲದಿರುವ ಬಗ್ಗೆ ದೂರು ನೀಡಲು ಈ ಲೈವ್‌ಗೆ ಬಂದಿರುವುದಾಗಿ ತಿಳಿದುಬಂದಿದೆ. ಮಲಯಾಳಂ ಸುದ್ದಿಗಳು ಮತ್ತು ಟ್ರೆಂಡಿಂಗ್ ವಿಷಯಗಳನ್ನು ಒಳಗೊಂಡಿರುವ ಶಾಜಿ ಪಪ್ಪನ್ ಎಂಬ ಫೇಸ್‌ಬುಕ್ ಪುಟದಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ತನ್ನ ಸಮಸ್ಯೆಯು ಜನರ ಗಮನಕ್ಕೆ ಬರುತ್ತದೆ ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ವ್ಯಕ್ತಿಯು ನಿರೀಕ್ಷಿಸಿದ್ದರೂ, ವೀಡಿಯೊ ಸ್ಥಳೀಯ ಆರ್‌ಟಿಒ ಗಮನಕ್ಕೆ ಬಂದಿದ್ದರಿಂದ ಅದು ಆತನನ್ನು ಮತ್ತೊಮ್ಮೆ ತೊಂದರೆಗೆ ಸಿಲುಕಿಸಿತು. ಅಧಿಕಾರಿಗಳು ವ್ಯಕ್ತಿಯನ್ನು ಗುರುತಿಸಿ, ಕಚೇರಿಗೆ ಕರೆಸಿ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ಮೂರು ತಿಂಗಳ ಕಾಲ ಆತನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ. ದಂಡನಾತ್ಮಕ ಕ್ರಮಗಳ ಭಾಗವಾಗಿ ಸ್ಥಳೀಯ ಇಡುಕ್ಕಿ ವೈದ್ಯಕೀಯ ಕಾಲೇಜಿನಲ್ಲಿ ಸಮುದಾಯ ಸೇವೆಯಲ್ಲಿ ಭಾಗವಹಿಸುವಂತೆಯೂ ಸೂಚಿಸಲಾಗಿದೆ. ಇಂತಹ ಪ್ರಕರಣ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು, ವ್ಯಕ್ತಿಗೆ ತನ್ನ ಸ್ವಂತ ಖರ್ಚಿನಲ್ಲಿ ಕೇರಳದ ಮಲಪ್ಪುರಂನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಡ್ರೈವರ್ ಟ್ರೈನಿಂಗ್ ಅಂಡ್ ರಿಸರ್ಚ್‌ನಲ್ಲಿ ಡ್ರೈವಿಂಗ್ ತರಬೇತಿಯನ್ನು ಪಡೆಯಲು ಸೂಚಿಸಲಾಗಿದೆ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ವೈರಲ್ ಆಗಿರುವ ವೀಡಿಯೋದಲ್ಲಿ, ಆ ವ್ಯಕ್ತಿ ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ತನ್ನನ್ನು ತಾನೇ ರೆಕಾರ್ಡ್ ಮಾಡುತ್ತಾ ಅದರಿಂದ ವಿಚಲಿತನಾಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಆತ ತನ್ನ ಮುಂದಿರುವ ರಸ್ತೆಯನ್ನು ಸರಿಯಾಗಿ ನೋಡದೇ ಬೈಕ್ ಚಾಲನೆ ಮಾಡುತ್ತಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ಘಟನೆ ನಡೆದ ಇಡುಕ್ಕಿಯ ಆರ್‌ಟಿಒ ಆರ್.ರಮಣನ್ ಈ ಬಗ್ಗೆ ಮಾತನಾಡಿ, ಈ ರೀತಿಯ ಡ್ರೈವಿಂಗ್ ಆತನ ಮುಂದಿರುವ ಪ್ರಯಾಣಿಕರಿಗೆ ಹಾನಿಯನ್ನುಂಟುಮಾಡಬಹುದು ಮತ್ತು ತೀವ್ರ ಅಪಘಾತಗಳಿಗೆ ಕಾರಣವಾಗಬಹುದು. ಬೈಕ್ ಚಲಾಯಿಸುವಾಗ ಫೇಸ್‌ಬುಕ್ ಲೈವ್ ಮಾಡುವುದು ಡ್ರೈವಿಂಗ್ ಮಾಡುವಾಗ ಫೋನ್ ಮಾಡುವುದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ಇದೊಂದೆ ಪ್ರಕರಣವಲ್ಲ ದೇಶದಲ್ಲಿ ಇಂತಹ ಹಲವು ಪ್ರಕರಣಗಳಲ್ಲಿ ಕೆಲವೊಮ್ಮೆ ಜೀವವನ್ನೇ ಕಳೆದುಕೊಂಡಿದ್ದಾರೆ. ಆಯಾ ರಾಜ್ಯ ಸರ್ಕಾರಗಳು ಈ ಬಗ್ಗೆ ಎಷ್ಟೇ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೂ ಪದೆ ಪದೇ ಮರುಕಳಿಸುತ್ತಿವೆ. ನಮ್ಮ ರಾಜ್ಯದಲ್ಲೂ ಪೊಲೀಸ್ ಇಲಾಖೆ ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾರಣ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲಿ ಕಡಿಮೆ.

ಫೇಸ್‌ಬುಕ್ ಲೈವ್‌ನಲ್ಲಿ ಸಮಸ್ಯೆ ಹೇಳಿಕೊಂಡವನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಟಿಓ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಾರ್ವಜನಿಕರು ಎಚ್ಚೆತ್ತುಕೊಳ್ಳುವ ವಿಷಯದ ಕುರಿತು ಸೋಷಿಯಲ್ ಮೀಡಿಯಾವನ್ನು ಬಳಸಿಕೊಳ್ಳುವುದು ತಪ್ಪೇನಲ್ಲ. ಆದರೆ ಸಮಯ, ಸಂದರ್ಭವಲ್ಲದ ವೇಳೆ ಫೇಸ್‌ಬುಕ್ ಲೈವ್ ಮಾಡುವುದು ತಪ್ಪು. ಕೇರಳದ ವ್ಯಕ್ತಿ ಮಾಡಿರುವ ಕೆಲಸಕ್ಕೆ ಅಲ್ಲಿನ ಆರ್‌ಟಿಓ ತೆಗೆದುಕೊಂಡಿರುವ ಕ್ರಮ ಶ್ಲಾಘನೀಯ. ಇಂತಹ ಕ್ರಮಗಳಿಂದ ಮತ್ತೊಮ್ಮೆ ಇಂತಹ ಪ್ರಕರಣಗಳು ಮರುಕಳಿಸದಂತೆ ಮಾಡುತ್ತವೆ.

Most Read Articles

Kannada
English summary
RTO cancels license of bike rider who claims problem on Facebook Live
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X