ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರವರು ಬಳಸುತ್ತಿದ್ದ Rolls Royce ಕಾರು ಸೇರಿದಂತೆ 17 ಐಷಾರಾಮಿ ಕಾರುಗಳನ್ನು ಬೆಂಗಳೂರಿನಲ್ಲಿವಶಕ್ಕೆ ಪಡೆದಿದ್ದ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು. ಈ ಐಷಾರಾಮಿ ಕಾರುಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿ‌ಒ) ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬೇರೆ ರಾಜ್ಯದ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರಣಕ್ಕೆ ಈ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

Audi R8, Jaguar XJL, Range Rover, Porsche, Ferrari ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ವಶಕ್ಕೆಪಡೆಯಲಾಗಿದ್ದ ಈ ಕಾರುಗಳನ್ನು ಬೆಂಗಳೂರಿನ ಯಲಹಂಕ ಆರ್‌ಟಿ‌ಒ ಕಚೇರಿಯಲ್ಲಿ ನಿಲ್ಲಿಸಲಾಗಿತ್ತು. ಈಗ ಈ ಕಾರುಗಳಿಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರ ಬಂದಿದೆ. ಈ ಸುದ್ದಿಯ ಪ್ರಕಾರ ಆರ್‌ಟಿ‌ಒ ಅಧಿಕಾರಿಗಳ ವಶದಲ್ಲಿದ್ದ Rolls Royce ಕಾರ್ ಅನ್ನು ಮಾಲೀಕರಿಗೆ ಹಿಂದಿರುಗಿಸಲಾಗಿದೆ.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ಈ Rolls Royce ಕಾರಿನ ಮಾಲೀಕರಿಗೆ ರೂ. 5,500 ದಂಡ ವಿಧಿಸಲಾಗಿದೆ. Rolls Royce ಕಾರಿನ ಬೆಲೆ ಕೋಟ್ಯಂತರ ರೂಪಾಯಿಗಳಾಗುತ್ತದೆ. ಅಮಿತಾಬ್ ಬಚ್ಚನ್ ರವರು ಬಳಸುತ್ತಿದ್ದ ಈ ಕಾರ್ ಅನ್ನು ಬೆಂಗಳೂರಿನ ಉದ್ಯಮಿಯೊಬ್ಬರು ಖರೀದಿಸಿದ್ದರು. ಸೆಕೆಂಡ್ ಹ್ಯಾಂಡ್ ಕಾರ್ ಆದರೂ ಈ ಕಾರಿನ ಬೆಲೆ ಹಲವು ಕೋಟಿಗಳಾಗುತ್ತದೆ.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ಕೋಟ್ಯಂತರ ರೂಪಾಯಿ ನೀಡಿ ಈ ಕಾರು ಖರೀದಿಸುವವರಿಗೆ ಆರ್‌ಟಿಒ ಅಧಿಕಾರಿಗಳು ವಿಧಿಸಿರುವ ರೂ. 5,500 ಗಳ ದಂಡ ಅತ್ಯಲ್ಪವೆಂದೇ ಹೇಳಬಹುದು. ಈ ಹಿಂದೆ ಅಮಿತಾಬ್ ಬಚ್ಚನ್ ಬಳಸುತ್ತಿದ್ದ ಈ Rolls Royce ಕಾರ್ ಅನ್ನು ಆರ್‌ಟಿಒ ಅಧಿಕಾರಿಗಳು ವಾಯು ಮಾಲಿನ್ಯ ಪ್ರಮಾಣಪತ್ರ ಹಾಗೂ ವಿಮೆ ಸೇರಿದಂತೆ ಕಾರಿನ ಮಾಲೀಕತ್ವದ ದಾಖಲೆಗಳನ್ನು ಹೊಂದಿಲ್ಲವೆಂಬ ಕಾರಣಕ್ಕೆ ವಶಕ್ಕೆ ಪಡೆದಿದ್ದರು.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ಬಿಳಿ ಬಣ್ಣದಲ್ಲಿರುವ ಈ Rolls Royce ಕಾರು Phantom ಮಾದರಿಯಾಗಿದೆ. ಈ ಕಾರು ಖರೀದಿಸಿದ್ದವರು ಅಮಿತಾಬ್ ಬಚ್ಚನ್ ರವರು ಬಳಸುತ್ತಿದ್ದ MH 02 BB 2 ಫ್ಯಾನ್ಸಿ ನಂಬರ್ ನೊಂದಿಗೆ ಬಳಸುತ್ತಿದ್ದರು. ಹೊಸ ಮಾಲೀಕರು ಈ ಕಾರ್ ಅನ್ನು ಆರ್‌ಟಿಒ ಅಧಿಕಾರಿಗಳು ತಪಾಸಣೆಗಾಗಿ ತಡೆದು ನಿಲ್ಲಿಸಿದಾಗ ಕಾರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ಈ Rolls Royce Phantom ಕಾರ್ ಅನ್ನು ವಿಮೆ ಇಲ್ಲದೆ ಬಳಸಲಾಗುತ್ತಿತ್ತು. ಈಗ ದಂಡ ವಿಧಿಸಿರುವ ಒಟ್ಟು ರೂ. 5,500 ಗಳಲ್ಲಿ ರೂ. 3,000 ಗಳನ್ನು ವಾಯು ಮಾಲಿನ್ಯ ಪ್ರಮಾಣ ಪತ್ರ ಹೊಂದದ ಕಾರಣಕ್ಕೆ, ರೂ. 2,000 ಗಳನ್ನು ವಿಮೆ ಇಲ್ಲದ ಕಾರಣಕ್ಕೆ ಹಾಗೂ ರೂ. 500 ಗಳನ್ನು ಹೊರ ರಾಜ್ಯದ ವಾಹನವನ್ನು ನಮ್ಮ ರಾಜ್ಯದಲ್ಲಿ ನೋಂದಣಿ ಮಾಡದೇ ಇರುವುದಕ್ಕೆ ದಂಡ ವಿಧಿಸಲಾಗಿದೆ.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ಈ ಬಗ್ಗೆ ಮಾತನಾಡಿರುವ ಆರ್‌ಟಿಒ ಅಧಿಕಾರಿಗಳು ನಾವು ಯಾವುದೇ ತೊಂದರೆ ಇಲ್ಲದೆ ಈ ಕಾರುಗಳನ್ನು ವಶಪಡಿಸಿಕೊಂಡಿದ್ದೆವು. ಆದರೆ ಹಿರಿಯ ಅಧಿಕಾರಿಗಳ ಒತ್ತಡದಿಂದಾಗಿ ನಾವು ಈ ಕಾರುಗಳನ್ನು ಬಿಡುಗಡೆ ಮಾಡಿದ್ದೇವೆ. ಇದರಿಂದ ನಾವು ನಿಜವಾಗಿಯೂ ಹತಾಶರಾಗಿದ್ದೇವೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ಬೇರೆ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡ ದಿನಾಂಕದಿಂದ 11 ತಿಂಗಳ ಒಳಗೆ ಅವುಗಳನ್ನು ಸಂಬಂಧಿಸಿದ ರಾಜ್ಯಗಳಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಇಂತಹ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವುದಿಲ್ಲವೆಂದು ಅವರು ಹೇಳಿದ್ದಾರೆ.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ಕಾರು ಮಾಲೀಕರು ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಕಾರಣ ನಾವು ಕಾರುಗಳನ್ನು ವಶಕ್ಕೆ ಪಡೆದಿದ್ದೆವು. ಕಾರುಗಳ ಬಿಡುಗಡೆಗೆ ಯಾವುದೇ ಒತ್ತಡ ಬಂದಿಲ್ಲವೆಂದು ಬೆಂಗಳೂರು ಹೆಚ್ಚುವರಿ ಸಾರಿಗೆ ಆಯುಕ್ತ ನರೇಂದ್ರ ಹೋಲ್ಕರ್ ಹೇಳಿದ್ದಾರೆ.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ವಶಪಡಿಸಿಕೊಂಡ 17 ಐಷಾರಾಮಿ ಕಾರುಗಳಲ್ಲಿ ಅಮಿತಾಬ್ ಬಚ್ಚನ್ ಅವರು ಬಳಸುತ್ತಿದ್ದ Rolls Royce ಕಾರಿಗೆ ಕೇವಲ ರೂ. 5,500 ದಂಡ ವಿಧಿಸಲಾಗಿದೆ. ಕೆಲವು ಕಾರು ಮಾಲೀಕರು ತಮ್ಮ ನಿರ್ಲಕ್ಷ್ಯಕ್ಕಾಗಿ ಲಕ್ಷಾಂತರ ರೂಪಾಯಿ ದಂಡ ಪಾವತಿಸಿದ್ದಾರೆ. ವರದಿಗಳ ಪ್ರಕಾರ ಕೆಲವು ಕಾರು ಮಾಲೀಕರಿಗೆ ಗರಿಷ್ಠ ರೂ. 30 ಲಕ್ಷ ದಂಡ ವಿಧಿಸಲಾಗಿದೆ.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ನಟ ಅಮಿತಾಬ್ ಬಚ್ಚನ್ ರವರಿಗೆ 2007 ರಲ್ಲಿ ನಿರ್ಮಾಪಕ ವಿನೋದ್ ಚೋಪ್ರಾ ಈ Rolls Royce Phantom ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ನಂತರ 2019 ರಲ್ಲಿ ಅಮಿತಾಬ್ ಬಚ್ಚನ್ ಅವರು ಯಾವುದೇ ಕಸ್ಟಮೈಸೇಶನ್ ಇಲ್ಲದೆ ಈ ಕಾರ್ ಅನ್ನು ರೂ. 3.5 ಕೋಟಿಗಳಿಗೆ ಮಾರಾಟ ಮಾಡಿದ್ದರು.

ವಶಕ್ಕೆ ಪಡೆದಿದ್ದ ಅಮಿತಾಬ್ ಬಚ್ಚನ್ ಹಸರಿನಲ್ಲಿದ್ದ ಕಾರ್ ಅನ್ನು ಹಿಂದಿರುಗಿಸಿದ ಆರ್‌ಟಿ‌ಒ ಅಧಿಕಾರಿಗಳು

ಈ Rolls Royce Phantom ಕಾರ್ ಅನ್ನು ಮಾರಾಟ ಮಾಡಿದ್ದರೂ, ಅಮಿತಾಬ್ ಬಚ್ಚನ್ ಇನ್ನೂ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರು ಈಗ Mercedes Benz, Toyota Camry, Mini Cooper, Audi A 8 L, Bentley Continental GT, Mercedes Benz V Class ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Rto officials returns rolls royce car to owner details
Story first published: Friday, September 3, 2021, 10:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X