199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ರಷ್ಯಾ ಪೊಲೀಸರು ರಷ್ಯಾದ ಜನಪ್ರಿಯ ಮಹಿಳೆಯೊಬ್ಬರ ಲ್ಯಾಂಬೊರ್ಗಿನಿ ಕಾರನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆ ಮಹಿಳೆಗೆ 199 ಬಾರಿ ಚಲನ್ ನೀಡಲಾಗಿದೆ.

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ಇಷ್ಟು ಬಾರಿ ಚಲನ್ ನೀಡಿದರೂ ದಂಡ ಪಾವತಿಸಲು ವಿಫಲವಾದ ಕಾರಣಕ್ಕೆ ಮಹಿಳೆಯ ಲ್ಯಾಂಬೊರ್ಗಿನಿ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆ ಮಹಿಳೆ ರಷ್ಯಾದ ಜನಪ್ರಿಯ ನಟಿ ನಾಸ್ಟಿಯಾ ಇವ್ಲೆವಾ ಎಂಬುದು ವಿಶೇಷ. ಈ ಬಗ್ಗೆ ಅವರೇ ತಮ್ಮ ಇನ್ಸ್ಟಾಗ್ರಾಮ್ ಪೇಜ್'ನಲ್ಲಿ ಮಾಹಿತಿ ನೀಡಿದ್ದಾರೆ.

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ನಾಸ್ಟಿಯಾ ಇವ್ಲೆವಾ ಟಿವಿ ನಿರೂಪಕಿಯಾಗಿ ಹಾಗೂ ನಟಿಯಾಗಿ ಜನಪ್ರಿಯರಾಗಿದ್ದಾರೆ. ದಂಡ ಪಾವತಿಸಲು ವಿಫಲವಾದ ಕಾರಣ ಪೊಲೀಸರು ತಮ್ಮ ಕಾರನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಅವರು ಇನ್ಸ್ಟಾಗ್ರಾಮ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ನಾಸ್ಟಿಯಾ ಇವ್ಲೆವಾ ಅವರು ಇನ್ಸ್ಟಾಗ್ರಾಮ್'ನಲ್ಲಿ 18.7 ಮಿಲಿಯನ್ ಫಾಲೋವರ್'ಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ ಒಂದೇ ವರ್ಷ ಅವರಿಗೆ ಈ ಎಲ್ಲಾ 199 ಚಲನ್ ನೀಡಲಾಗಿದೆ. ಅವರು ಎಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗಿತ್ತು ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ನಾಸ್ಟಿಯಾ ಇವ್ಲೆವಾ ಅವರ ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರ್ ಅನ್ನು ಅವರಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ದುಬಾರಿ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ನಾಸ್ಟಿಯಾ ಇವ್ಲೆವಾ ಹೇಳಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ದಂಡ ಪಾವತಿಸಿ ಕಾರನ್ನು ಮರಳಿ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ವಿವಿಧ ಸಂಚಾರ ಉಲ್ಲಂಘನೆಗಳನ್ನು ಉಲ್ಲಂಘಿಸಿದ ಕಾರಣಕ್ಕೆ ನಾಸ್ಟಿಯಾ ಇವ್ಲೆವಾ ಅವರಿಗೆ ದಂಡ ವಿಧಿಸಲಾಗಿದೆ.

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ನಾಸ್ಟಿಯಾ ಇವ್ಲೆವಾ ಅವರಿಂದ ಮುಟ್ಟುಗೋಲು ಹಾಕಿಕೊಂಡಿರುವ ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರ್ ಅನ್ನು ಎಸ್, ಎಸ್ ರೋಡ್'ಸ್ಟರ್ ಹಾಗೂ ಪ್ರೀಮಿಯಂ ಎಸ್‌ವಿಜೆ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರಿನಲ್ಲಿ 6.5-ಲೀಟರ್ ವಿ 12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 690 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಎಸ್‌ವಿಜೆ ಮಾದರಿಯಲ್ಲಿ ಅಳವಡಿಸಿರುವ ಎಂಜಿನ್ 759 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ಈ ಎಂಜಿನ್ 690 ಎನ್ಎಂನಿಂದ 720 ಎನ್ಎಂವರೆಗಿನ ಟಾರ್ಕ್ ಉತ್ಪಾದಿಸುತ್ತದೆ. ಇಷ್ಟು ಪರ್ಫಾಮೆನ್ಸ್ ನೀಡುವ ಕಾರು ಸಂಚಾರ ಉಲ್ಲಂಘನೆಯ ದಂಡದ ಮೊತ್ತವನ್ನು ಪಾವತಿಸದೆ ಪೊಲೀಸರು ವಶಕ್ಕೆ ಪಡೆದಿರುವುದು ವಿಪರ್ಯಾಸ.

199 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ನಟಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು

ಈ ರೀತಿ ತೊಂದರೆಯಾಗುವುದನ್ನು ತಪ್ಪಿಸಲು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಿ. ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ದಂಡ ಪಾವತಿಸುವುದನ್ನು ಮಾತ್ರವಲ್ಲದೇ ರಸ್ತೆ ಅಪಘಾತಗಳಾಗುವುದನ್ನು ಸಹ ತಪ್ಪಿಸಬಹುದು.

Most Read Articles

Kannada
English summary
Russia police seizes actress Lamborghini Aventador car for not paying challan. Read in Kannada.
Story first published: Thursday, April 15, 2021, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X