ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಈ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಪಾರ್ಕಿಂಗ್ ಮಾಡುವಾಗ ಎಚ್ಚರದಿಂದಿರ ಬೇಕಾಗುತ್ತದೆ. ಅದರಲ್ಲೂ ಬಹು ಮಹಡಿ ಕಟ್ಟಡಗಳಲ್ಲಿ ಈ ಕಾರ್ ಅನ್ನು ಪಾರ್ಕಿಂಗ್ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ ಅಪಾಯವಾಗುವುದು ಖಚಿತ.

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಮಕಾನ್, ಪೋರ್ಷೆ ಕಂಪನಿಯ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದು. ಬಹುಮಹಡಿ ಕಟ್ಟಡದಲ್ಲಿ ಮಕಾನ್ ಕಾರ್ ಅನ್ನು ಪಾರ್ಕಿಂಗ್ ಮಾಡುವ ಸಂದರ್ಭದಲ್ಲಿ ರಷ್ಯಾದ ಜನಪ್ರಿಯ ಐಸ್ ಹಾಕಿ ಆಟಗಾರ ಡೆನಿಸ್ ಕಾಜಿಯೊನೊವ್ ಅಪಾಯಕ್ಕೆ ಸಿಲುಕಿದ್ದರು.

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಅವರು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಶಾಪಿಂಗ್'ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ಡೆನಿಸ್ ಹಾಗೂ ಅವರ ಪತ್ನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದರೆ, ಅವರ ಮಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಅವರು ಬಹುಮಹಡಿ ಕಟ್ಟಡದಲ್ಲಿ ಕಾರ್ ಅನ್ನು ಪಾರ್ಕಿಂಗ್ ಮಾಡಲು ಹೋಗಿದ್ದಾರೆ. ಮೂರನೇ ಮಹಡಿಯಲ್ಲಿ ಪಾರ್ಕಿಂಗ್ ಮಾಡುವ ಸಂದರ್ಭದಲ್ಲಿ ಪೋರ್ಷೆ ಮಕಾನ್ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಕಟ್ಟಡದ ಕಿಟಕಿಯ ಗಾಜು ಮುರಿದು ಹೊರಬಂದಿದೆ.

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಈ ಕಟ್ಟಡದಲ್ಲಿ ಲೋಹದ ಬ್ಯಾರಿಕೇಡ್‌ಗಳು ಇದ್ದ ಕಾರಣಕ್ಕೆ ಭಾರೀ ದುರಂತ ಸಂಭವಿಸುವುದು ತಪ್ಪಿದೆ. ಕಾರು ಕಿಟಕಿಯಿಂದ ಹೊರ ಬಂದ ತಕ್ಷಣವೇ ಎಚ್ಚೆತ್ತ ಡೆನಿಸ್, ಕಾರನ್ನು ಅಲ್ಲಿಯೇ ನಿಲ್ಲಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಆದರೆ ಕಾರಿನ ಮುಂಭಾಗ ಗಾಜಿನ ಕಿಟಕಿಯಿಂದ ಹೊರಬಂದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲವೆಂದು ವರದಿಗಳು ತಿಳಿಸಿವೆ.ಈ ಘಟನೆಯ ಬಗ್ಗೆ ಡೆನಿಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ನಾನು ಬ್ರೇಕ್ ಒತ್ತುತ್ತಿದ್ದರೂ ಕಾರು ನಿಲ್ಲದೇ ಚಲಿಸುತ್ತಲೇ ಇತ್ತು. ಕಾರು ಕಟ್ಟಡದ ಗಾಜನ್ನು ಹೊಡೆದು ಹೊರಬಂದಿದೆ. ಈ ವೇಳೆ ನಮಗೆ ತುಂಬಾ ಆತಂಕವಾಗಿತ್ತು ಎಂದು ಹೇಳಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಈ ಘಟನೆಯ ವೀಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಟ್ಟಡದ ಗಾಜಿನಿಂದ ಹೊರ ಬಂದು ನೇತಾಡುತ್ತಿದ್ದ ಕಾರ್ ಅನ್ನು ಸ್ಥಳಕ್ಕೆ ಧಾವಿಸಿದ ಪೊಲೀಸರು ಹೊರ ತೆಗೆದಿದ್ದಾರೆ.

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಪೋರ್ಷೆ ಮಕಾನ್ ಕಾರಿನ ಆರಂಭಿಕ ಬೆಲೆ ರೂ. 69.98 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.83.95 ಲಕ್ಷಗಳಾಗಿದೆ. ಈ ಕಾರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರು 180 ಕಿ.ವ್ಯಾ ಹಾಗೂ 242 ಬಿ‌ಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪೋರ್ಷೆ ಮಕಾನ್ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 225 ಕಿ.ಮೀಗಳಾಗಿದೆ.

ಪಾರ್ಕಿಂಗ್ ವೇಳೆ ಸಂಭವಿಸಿದ ಅವಘಡ, ಕಟ್ಟಡದ ಗಾಜು ತೂರಿ ಹೊರ ಬಂದ ಐಷಾರಾಮಿ ಕಾರು

ಈ ಕಾರು 6.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನಲ್ಲಿ 2.9 ಲೀಟರ್ ಟ್ವಿನ್ ಟರ್ಬೊ ವಿ 6 ಎಂಜಿನ್ ಅಳವಡಿಸಲಾಗಿದೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕಾರ್ ಅನ್ನು ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Russian ice hockey player loses control while parking. Read in Kannada.
Story first published: Sunday, March 14, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X