ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್' ಹಿಂದಿರುವ ಗುಟ್ಟೇನು?

By Nagaraja

ಜರ್ಮನಿ ಮೂಲದ ಮರ್ಸಿಡಿಸ್ ಬೆಂಝ್ ನಿರ್ಮಿಸುತ್ತಿರುವ ಅತ್ಯಂತ ಶಕ್ತಿಶಾಲಿ ಮಿಲಿಟರಿ ಸಾಮರ್ಥ್ಯದ ವಾಹನಗಳಲ್ಲಿ ಜಿ-ಕ್ಲಾಸ್ ಶ್ರೇಣಿಗಳ ಕಾರುಗಳು ಸೇರಿವೆ. ಈಗ ರಷ್ಯಾ ವಾಹನ ಉತ್ಸಾಹಿಯೊಬ್ಬರು ಜಿ-ಕ್ಲಾಸ್ ಕ್ರೀಡಾ ಬಳಕೆಯ ವಾಹನದ ಸುರಕ್ಷಾ ಶಕ್ತಿಯನ್ನು ತೋರಿಸಲು ಭೂಗತ ಅಡಗುದಾಣದೊಳಗೆ ಕಾರನ್ನು ಅಡಗಿಸಿಡುವ ಪ್ರಯತ್ನ ಮಾಡಿದ್ದಾರೆ.

ರಷ್ಯಾ ವಾಹನ ಉತ್ಸಾಹಿ ವಲೆರಿ ಲಿಝುನೋವಾ ಎಂಬವರೇ ಇಂತಹದೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರಷ್ಯಾದ ಕಲುಗ ಪ್ರದೇಶದಲ್ಲಿ ನಡೆಯುತ್ತಿರುವ ಪ್ರದರ್ಶನ ಮೇಳದ ಭಾಗವಾಗಿ ಇದನ್ನು ಹಮ್ಮಿಕೊಂಡಿದ್ದಾರೆ.

ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್'

ಬಲ್ಲ ಮೂಲಗಳ ಪ್ರಕಾರ ಆಫ್ ರೋಡ್ ಸಾಮರ್ಥ್ಯದ ಶಕ್ತಿಶಾಲಿ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಚಾಲನೆ ಮಾಡುತ್ತಿರುವ ವೇಳೆ ಇಂತಹದೊಂದು ಯೋಚನೆಯು ವಲೆರಿ ಮನದಲ್ಲಿ ಹೊಳೆದಿತ್ತು.

ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್'

ಕಾರಿನೊಳಗೆ ಹೆಚ್ಚಿನ ಭದ್ರತೆಯನ್ನು ಮನಗಂಡ ಅವರು ಕಾರೆಷ್ಟು ಸುರಕ್ಷಿತ ಎಂಬುದನ್ನು ಜಗತ್ತಿಗೆ ತಿಳಿಯಪಡಿಸಲು ಬಯಸಿದ್ದರು. ಇದಕ್ಕಾಗಿ ಭೂಗತ ಅಡಗುದಾಣದ ಮೊರೆ ಹೋಗಿದ್ದರು.

ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್'

ಬೆಂಝ್ ಜಿ ಕ್ಲಾಸ್ ನಿಲ್ಲಲು ಬೇಕಾದಷ್ಟು ಹೊಂಡ ತೋಡಿರುವ ಅವರು ಬದಿಯಲ್ಲಿ ಮರದ ಆವರಣವನ್ನು ಕಟ್ಟಿದರು.

ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್'

ಕಾರಿನ ಮೇಲ್ಛಾವಣಿ ಹೊರ ಜಗತ್ತಿಗೆ ಕಾಣಿಸುವಂತಿದೆ. ಆದರೆ ಇದನ್ನು ಮಿಲಿಟರಿ ಶೈಲಿಯನ್ನು ಮರೆಮಾಚಲಾಗುವುದು ಎಂಬುದನ್ನು ವಿವರಿಸುತ್ತಾರೆ.

ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್'

ಭೂಗತಗೊಂಡಿರುವ ಕಾರಿನೊಳಗೆ ಉಸಿರಾಟದ ವ್ಯವಸ್ಥೆಯನ್ನು ಒದಗಿಸಲಾಗಿದೆ. ಅಲ್ಲದೆ ಮೇಲ್ಮೆಯಿಂದ ಸಂಪೂರ್ಣವಾಗಿ ಮರೆಮಾಚಿರುವುದರಿಂದ ಶತ್ರು ಪಾಳೇಯದಿಂದ ಪತ್ತೆ ಹಚ್ಚುವುದು ಅಸಾಧ್ಯ.

ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್'

ಇನ್ನು ಗಾಡಿ ಸ್ಟ್ಯಾರ್ಟ್ ಮಾಡಿದಾಗ ಹೊಗೆ ಹೊರಕ್ಕೆ ಹೋಗಲು ವಿಶೇಷ ಎಕ್ಸಾಸ್ಟ್ ಕೊಳವೆಯನ್ನು ಲಗತ್ತಿಸಲಾಗಿದೆ.

ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್'

ಮಿಲಿಟರಿಗೆ ಅತಿ ಹೆಚ್ಚಿನ ಪ್ರಾಮುಖ್ಯ ಕೊಡುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಇದನ್ನು ನೋಡಿ ಮುಂದಿನ ದಿನಗಳಲ್ಲಿ ಇಂತಹ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟರೆ ಅಚ್ಚರಿಪಡಬೇಕಾಗಿಲ್ಲ.

ರಷ್ಯಾ ಭೂಗತ ಅಡಗುದಾಣದಲ್ಲಿ 'ಜಿ-ಕ್ಲಾಸ್'

ಅಂದ ಹಾಗೆ 4.0 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್ ಎಎಂಜಿ, 610 ಎನ್ ಎಂ ತಿರುಗುಬಲದಲ್ಲಿ 415 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು 5.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 210 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

Article Published On: Monday, August 1, 2016, 17:45 [IST]
English summary
Russian Turns Mercedes G-Class SUV Into An Underground Bunker
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+