ಒಲಿಂಪಿಕ್ ಸಾಧಕರಿಗೆ ಸಚಿನ್ ಬಿಎಂಡಬ್ಲ್ಯು ಕಾರು ಉಡುಗೊರೆ

By Nagaraja

ಇತ್ತೀಚೆಗಷ್ಟೇ ಬ್ರೆಜಿಲ್ ನಲ್ಲಿ ಸಾಗಿದ ರಿಯೊ ಒಲಿಂಪಿಕ್ಸ್ 2016 ಜಾಗತಿಕ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ಹಾಗೂ ಗಮನಾರ್ಹ ಪ್ರದರ್ಶನ ನೀಡಿರುವ ಭಾರತೀಯ ಕ್ರೀಡಾಪಟುಗಳಿಗೆ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಗೌರವಿಸಿದ್ದಾರೆ.

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿ.ವಿ. ಸಿಂಧು ಹಾಗೂ ಈಕೆಯ ಕೋಚ್ ಪುಲ್ಲೇಲಾ ಗೋಪಿಚಂದ್, ಕಂಚಿನ ಪದಕ ಗೆದ್ದಿರುವ ಕುಸ್ತಿ ಪಟು ಸಾಕ್ಷಿ ಮಲಿಕ್ ಹಾಗೂ ಜಿಮ್ನಾಸ್ಟಿಕ್ ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೆ ಅರ್ಹವಾಗಿರುವ ದೀಪಾ ಕರ್ಮಾಕರ್ ಅವರಿಗೆ ಬಿಎಂಡಬ್ಲ್ಯು ಕಾರುಗಳ ಕೀಲಿಗಳನ್ನು ಹಸ್ತಾಂತರಿಸಲಾಗಿದೆ.

ಒಲಿಂಪಿಕ್ ಸಾಧಕರಿಗೆ ಸಚಿನ್ ಬಿಎಂಡಬ್ಲ್ಯು ಕಾರು ಉಡುಗೊರೆ

ನಿಮ್ಮೆಲ್ಲರ ಮಾಹಿತಿಗಾಗಿ, 2016 ಒಲಿಂಪಿಕ್ಸ್ ಭಾರತೀಯ ಪಡೆಯ ಸದ್ಭಾವನಾ ರಾಯಭಾರಿಯಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ನೇಮಕಗೊಂಡಿದ್ದರು.

ಒಲಿಂಪಿಕ್ ಸಾಧಕರಿಗೆ ಸಚಿನ್ ಬಿಎಂಡಬ್ಲ್ಯು ಕಾರು ಉಡುಗೊರೆ

ಭಾರತದಲ್ಲಿ ಅತಿ ಹೆಚ್ಚಿನ ಜನಪ್ರಿಯತೆ ಕಾಯ್ದುಕೊಂಡಿರುವ ಬಿಎಂಡಬ್ಲ್ಯು 3 ಸಿರೀಸ್ ಲಗ್ಷುರಿ ಸೆಡಾನ್ ಹಾಗೂ ಬಿಎಂಡಬ್ಲ್ಯು ಎಕ್ಸ್1 ಕ್ರಾಸೋವರ್ ಕಾರುಗಳನ್ನು ನೀಡಲಾಗಿದೆ.

ಒಲಿಂಪಿಕ್ ಸಾಧಕರಿಗೆ ಸಚಿನ್ ಬಿಎಂಡಬ್ಲ್ಯು ಕಾರು ಉಡುಗೊರೆ

ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಚಾಮುಂಡೇಶ್ವರನಾಥ್, ಬಿಎಂಡಬ್ಲ್ಯು ಕೀಲಿಗಳನ್ನು ಹಸ್ತಾಂತರಿಸಿದರು. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಾಗಲೂ ಚಾಮುಂಡೇಶ್ವರನಾಥ್ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಒಲಿಂಪಿಕ್ ಸಾಧಕರಿಗೆ ಸಚಿನ್ ಬಿಎಂಡಬ್ಲ್ಯು ಕಾರು ಉಡುಗೊರೆ

ಇದಕ್ಕೂ ಮೊದಲು ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಮಾಲಿಕ ಆನಂದ್ ಮಹೀಂದ್ರ, ಸಾಕ್ಷಿ ಹಾಗೂ ಸಿಂಧು ಅವರಿಗೆ ಕಸ್ಟಮೈಸ್ಡ್ ಮಹೀಂದ್ರ ಥಾರ್ ಕಾರನ್ನು ನೀಡುವುದಾಗಿ ಘೋಷಿಸಿದ್ದರು.

ಒಲಿಂಪಿಕ್ ಸಾಧಕರಿಗೆ ಸಚಿನ್ ಬಿಎಂಡಬ್ಲ್ಯು ಕಾರು ಉಡುಗೊರೆ

ಎರಡು ಲೀಟರ್ ಟರ್ಬೊ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಿಎಂಡಬ್ಲ್ಯು 3 ಸಿರೀಸ್ 400 ಎನ್ ಎಂ ತಿರುಗುಬಲದಲ್ಲಿ 188 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಬಿಎಂಡಬ್ಲ್ಯು 3 ಸಿರೀಸ್ ರಿಯರ್ ವೀಲ್ ಚಾಲನಾ ವ್ಯವಸ್ಥೆಯನ್ನು ಹೊಂದಿದ್ದರು, ಎಕ್ಸ್1 ಫ್ರಂಟ್ ವೀಲ್ ಹಾಗೂ ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಪಡೆದಿದೆ.

ಒಲಿಂಪಿಕ್ ಸಾಧಕರಿಗೆ ಸಚಿನ್ ಬಿಎಂಡಬ್ಲ್ಯು ಕಾರು ಉಡುಗೊರೆ

ಅಂದ ಹಾಗೆ ಬಿಎಂಡಬ್ಲ್ಯು 3 ಸಿರೀಸ್ ದೇಶದಲ್ಲಿ 36.9 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅದೇ ಹೊತ್ತಿಗೆ ಬಿಎಂಡಬ್ಲ್ಯು ಎಕ್ಸ್1 ಮಾದರಿಯು 29.9 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ.

More from DriveSpark

Article Published On: Monday, August 29, 2016, 15:31 [IST]
English summary
Sachin presents BMW cars to India’s Olympic heroes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+