ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

By Praveen Sannamani

ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು 44ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಸಚಿನ್'ಗೆ ಭರಪೂರ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿವೆ. ಬರ್ತ್ ಡೇ ಸ್ಪೆಷಲ್ ಹಿನ್ನೆಲೆ ಡ್ರೈವ್ ಸ್ಪಾರ್ಕ್ ತಂಡವು ಸಹ ಸಚಿನ್ ಇಷ್ಟದ ಕಾರ್ ಕಲೆಕ್ಷನ್ ಕುರಿತಾದ ವಿಶೇಷ ಲೇಖನವನ್ನು ಪ್ರಕಟಿಸುತ್ತಿದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಕ್ರಿಕೆಟ್ ಬಳಿಕ ನಿವೃತ್ತಿ ಜೀವನದಲ್ಲೂ ಒಂದಲ್ಲ ಒಂದು ಕಾರ್ಯ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಕೇವಲ ಬ್ರಾಂಡ್ ಅಂಬಾಸಿಡರ್ ಆಗಿ ಅಷ್ಟೇ ಅಲ್ಲದೇ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ತಮ್ಮ ಜನಪ್ರಿಯತೆಯಿಂದಲೇ ಹತ್ತಾರು ಬಗೆಯ ವಿಲಾಸಿ ಕಾರ್ ಕಲೆಕ್ಷನ್ ಹೊಂದಿರುವ ಸಚಿನ್ ತೆಂಡೂಲ್ಕರ್, ವಿಶ್ವದ ಇತರೆ ಕ್ರಿಕೆಟ್ ದಿಗ್ಗಜರಿಂತಲೂ ಒಂದು ಹೆಜ್ಜೆ ಮುಂದೆಯೇ ಇದ್ದಾರೆ ಎಂದ್ರೆ ನೀವು ನಂಬಲೇಬೇಕು.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಅಂದರೆ ಕ್ರಿಕೆಟ್ ದೇವರು ಅನ್ನೋ ಮಾತು ಅತಿಶಯೋಕ್ತಿಯಲ್ಲ . ಹಾಗೇನೇ ಅವರು ವೇಗದ ಮತ್ತು ವಿಲಾಸಿ ಕಾರುಗಳ ಶೋಕೀವಾಲಾ ಎಂದರೂ ತಪ್ಪಾಗಲಿಕ್ಕಿಲ್ಲ . ಏಕೆಂದರೆ ಕಾರು ಓಡಿಸುವುದು ಅವರಿಗೆ ಭಾರಿ ಕ್ರೇಜ್.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಮಾರುತಿ 800

ಅತಿ ದುಬಾರಿ ಬೆಲೆಯ ಕಾರು ಕಲೆಕ್ಷನ್ ಹೊಂದಿರುವ ಸಚಿನ್ ಅವರಿಗೆ ಎಂಟ್ರಿ ಲೆವಲ್ ಮಾರುತಿ 800 ಮೇಲೂ ಎಲ್ಲಿಲ್ಲ ವ್ಯಾಮೊಹ. ಆದ್ರೆ ಸಚಿನ್ ನೆಚ್ಚಿನ ಮಾರುತಿ 800 ಕಾರು ಸದ್ಯಕ್ಕೆ ಅವರ ಕಾರ್ ಕಲೆಕ್ಷನ್‌ನಲ್ಲಿಲ್ಲ ಎಂಬುವುದೇ ಬೇಸರದ ಸಂಗತಿ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಫೆರಾರಿ 360 ಮೊಡೆನಾ

ಫೆರಾರಿ 360 ಎಂ ಎಂಬುದಾಗಿಯೂ ಅರಿಯಲ್ಪಡುವ ಪ್ರಸ್ತುತ ಐಕಾನಿಕ್ ಕಾರನ್ನು ಸ್ವತ: ರೇಸ್ ದಿಗ್ಗಜ ಮೈಕಲ್ ಶುಮೇಕರ್ ಅವರು ಸಚಿನ್ ಗೆ ನೀಡಿದ್ದರು. ಸುದ್ದಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಕಾರನ್ನು ಬಳಿಕ ಸಚಿನ್ ಮಾರಾಟ ಮಾಡಿದ್ದರು.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ನಿಸ್ಸಾನ್ ಜಿಟಿಆರ್

ಬಿಎಂಡಬ್ಲ್ಯು ಹೊರತಾಗಿ ಸಚಿನ್ ತೆಂಡೂಲ್ಕರ್ ಗ್ಯಾರೇಜ್ ನಲ್ಲಿ ಇತರ ಹಲವಾರು ಐಕಾನಿಕ್ ಕಾರುಗಳು ನಿಮಗೆ ಕಾಣಸಿಗುವುದು. ಅವುಗಳೆನ್ನೆಲ್ಲ ಇಲ್ಲಿ ಪಟ್ಟಿ ಮಾಡುವುದು ಕಷ್ಟಸಾಧ್ಯವಾಗಿರುವುದರಿಂದ ಕೆಲವು ಐಕಾನಿಕ್ ಕಾರುಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ. ಇವುಗಳಲ್ಲಿ ಮೊದಲ ಸ್ಥಾನ ನಿಸ್ಸಾನ್ ಜಿಟಿಆರ್ ಗೆ ಸಲ್ಲುತ್ತದೆ. ಇದರಲ್ಲಿರುವ ವಿ6 ಟ್ವಿನ್ ಟರ್ಬೊ ಎಂಜಿನ್ ಬರೋಬ್ಬರಿ 545 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, 2.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದ್ರೆ ಇದೀಗ ಈ ಕಾರು ಸಚಿನ್ ಮಾರಾಟ ಮಾಡಿದ್ದಾರೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಎಕ್ಸ್5ಎಂ

ಬಿಎಂಡಬ್ಲ್ಯು ಶಕ್ತಿಶಾಲಿ ಎಂ ವಿಭಾಗದ ಕ್ರೀಡಾ ಬಳಕೆಯ ಕಾರುಗಳನ್ನು ಭಾರತದಲ್ಲಿ ಕೆಲವೇ ಕೆಲವು ಗಣ್ಯ ವ್ಯಕ್ತಿಗಳು ಹೊಂದಿದ್ದಾರೆ. ಅವರಲ್ಲಿ ಸಚಿನ್ ಕೂಡಾ ಒಬ್ಬರು. ಎಕ್ಸ್ ಶೋರಂ ಪ್ರಕಾರ ಬರೋಬ್ಬರಿ 2 ಕೋಟಿ ಬೆಲೆ ಬಾಳುವ ಬಿಎಂಡಬ್ಲ್ಯು ಎಕ್ಸ್5ಎಂ ಕಾರುಗಳು 3.0 ಲೀಟರ್ 6 ಸಿಲಿಂಡರ್ ಟರ್ಬೊ ಚಾರ್ಜ್ಡ್ ಎಂಜಿನ್ 740 ಎನ್ ಎಂ ತಿರುಗುಬಲದಲ್ಲಿ 381 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಕೇವಲ 5.3 ಸೆಕಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಎಂ5

ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯು ಪ್ರೀತಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವರು '30 ಜಾಹ್ರೆ ಎಂ5' ವಿಶೇಷ ಆವೃತ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಮ್ಮ ಮಾಹಿತಿಗಾಗಿ, ಬಿಎಂಡಬ್ಲ್ಯು ಎಂ5 ಶ್ರೇಣಿಯ 30 ವರ್ಷಾಚರಣೆಯನ್ನು ಆಚರಿಸಿಕೊಳ್ಳಲು ಸೀಮಿತ 300ರಷ್ಟು ವಿಶೇಷ ಆವೃತ್ತಿಯನ್ನು ನಿರ್ಮಿಸಲಾಗಿತ್ತು. ಭಾರತದಲ್ಲಿ ಈ ಕಾರನ್ನು ಹೊಂದಿರುವ ಏಕ ಮಾತ್ರ ವ್ಯಕ್ತಿ ಸಚಿನ್ ಅವರಾಗಿದ್ದಾರೆ. ಇದರ ವಿ8 ಟ್ವಿನ್ ಟರ್ಬೊ ಚಾರ್ಜ್ಡ್ ಎಂಜಿನ್ 700 ಎನ್ ಎಂ ತಿರುಗುಬಲದಲ್ಲಿ 600 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 3.9 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ

ಕ್ರಿಕೆಟ್ ಬಳಿಕದ ಬಿಡುವಿಲ್ಲದ ನಿವೃತ್ತಿ ಜೀವನ ನಡೆಸುತ್ತಿರುವ ಸಚಿನ್ ತೆಂಡೂಲ್ಕರ್, ಬಿಎಂಡಬ್ಲ್ಯು ಅತಿ ವಿಶಿಷ್ಟ ಫ್ರಾಜನ್ ಸಿಲ್ವರ್ ಬಣ್ಣದ ಎಂ6 ಗ್ರ್ಯಾನ್ ಕೂಪೆ ಕಾರನ್ನು ಹೊಂದಿರುತ್ತಾರೆ. ಇದರಲ್ಲಿರುವ ಶಕ್ತಿಶಾಲಿ ವಿ8 ಎಂಜಿನ್ 680 ಎನ್ ಎಂ ತಿರುಗುಬಲದಲ್ಲಿ 560 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ ಕಾರು ದೇಶದಲ್ಲಿ 1.85 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಸಚಿನ್ ಎಡಿಷನ್

ಸ್ವತ: ತಮ್ಮ ದಿವ್ಯ ಹಸ್ತಗಳಿಂದ ಬಿಎಂಡಬ್ಲ್ಯು 530ಡಿ ವಿಶೇಷ ಆವೃತ್ತಿಯನ್ನು ನಿರ್ಮಿಸಲು ಸಚಿನ್ ತೆಂಡೂಲ್ಕರ್ ನೆರವಾಗಿದ್ದರು. ಈ ಮೂಲಕ ಚೆನ್ನೈನ ಘಟಕದಲ್ಲಿ ಶೇಕಡಾ 50ರಷ್ಟು ಸ್ಥಳೀಯವಾಗಿ ಕಾರು ಜೋಡಣೆ ಮಾಡುವ ತನ್ನ ಬದ್ಧತೆಯನ್ನು ಬಿಎಂಡಬ್ಲ್ಯು ಪ್ರದರ್ಶಿಸಿತ್ತು. ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿರುವ ಸಚಿನ್ "ಇದು ನಿಜಕ್ಕೂ ವಿಶಿಷ್ಟ ಹಾಗೂ ಅವಿಸ್ಮರಣೀಯ" ಎಂದಿದ್ದರು.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಐ8

ಪ್ರಶಸ್ತಿ ವಿಜೇತ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಸಚಿನ್ ತೆಂಡೂಲ್ಕರ್ ಸಾನಿಥ್ಯದಲ್ಲಿ ಭಾರತ ಪ್ರವೇಶ ಪಡೆದಿತ್ತು ಎಂಬುದನ್ನು ನಾವು ಯಾರು ಮರೆಯಬಾರದು. ಇದು ದೇಶದಲ್ಲಿರುವ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ. ಇದು 1.5 ಲೀಟರ್ 3 ಸಿಲಿಂಡರ್ ಜೊತೆಗೆ ಎಲೆಕ್ಟ್ರಿಕ್ ಮೋಟಾರನ್ನು ಪಡೆದಿದ್ದು, 570 ಎನ್ ಎಂ ತಿರುಗುಬಲದಲ್ಲಿ 357 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ ಕಾರು ದೇಶದಲ್ಲಿ 2.65 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಮರ್ಸಿಡಿಸ್ ಬೆಂಝ್ ಸಿ36 ಎಎಂಜಿ

ಸಚಿನ್ ಹೊಂದಿರುವ ಹಳೆಯ ಕಾರುಗಳಲ್ಲಿ ಮರ್ಸಿಡಿಸ್ ಬೆಂಝ್ ಸಿ36 ಎಎಂಜಿ ಒಂದಾಗಿತ್ತು. ಆದರೆ ಈಗ ಸಚಿನ್ ಬಳಿಯಲ್ಲಿಲ್ಲ. ಇದರ 3.6 ಲೀಟರ್ 6 ಸಿಲಿಂಡರ್ ಎಂಜಿನ್ 280 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಕೇವಲ ಇವಷ್ಟೇ ಅಲ್ಲದೇ ಸಚಿನ್ ತೆಂಡೂಲ್ಕರ್ ಇನ್ನು ಹಲವಾರು ಕಾರುಗಳ ಸಂಗ್ರಹವೇ ಇದೆ. ಅವುಗಳಲ್ಲಿ ಆಡಿ ಮತ್ತು ಪೋರ್ಷೆ ಸಹ ಇದ್ದು, ಬಹುತೇಕ ಕಾರುಗಳು ಉಡುಗೊರೆಯಾಗಿ ಸಿಕ್ಕಿವೆ ಎನ್ನಬಹುದು.

Kannada
English summary
Sachin Tendulkar’s wicked car collection.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more