ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಹೊಸ ಐಷಾರಾಮಿ ಕಾರಿನ ಸ್ಪೆಷಲ್ ಏನು?
ಸದ್ಯ ಭಾರತೀಯ ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದ್ದು, ಪತ್ನಿ ಸಾಕ್ಷಿ ಧೋನಿಯವರು ಹೊಸ ಅತಿಥಿಯ ಆಗಮನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಹೌದು, ಕಾರು ಪ್ರಿಯ ಎಂ.ಎಸ್ ಧೋನಿ ಮನೆಗೆ ಹೊಸದೊಂದು ಅತಿಥಿ ಬಂದಿದ್ದು, ಐಷಾರಾಮಿ ವಾಹನಗಳ ಕುರಿತು ಸಾಕಷ್ಟು ಆಸಕ್ತಿ ಹೊಂದಿರುವ ಧೋನಿ ಗ್ಯಾರೇಜ್‌ನಲ್ಲಿ ಇದೀಗ ಜೀಪ್ ಸಂಸ್ಥೆಯ ಹೊಸ ಕಾರೊಂದು ಭಾರೀ ಸದ್ದು ಮಾಡುತ್ತಿದೆ. ಧೋನಿ ಮನಮೆಚ್ಚಿದ ಐಷಾರಾಮಿ ಗ್ರ್ಯಾಂಡ್ ಚರೋಕಿ ಎಸ್‌ಯುವಿ ಕಾರು ಧೋನಿ ಗ್ಯಾರೇಜ್ ಪ್ರವೇಶ ಪಡೆದಿದ್ದು, ಹೊಸ ಕಾರಿನ ಫೋಟೋವನ್ನು ಪತ್ನಿ ಸಾಕ್ಷಿಯವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಧೋನಿಯವರನ್ನು ನೆನೆದು ಪತ್ನಿ ಸಾಕ್ಷಿ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಸಂದೇಶವೊಂದನ್ನು ಬರೆದುಕೊಂಡಿದ್ದು, ನಿಮ್ಮ ಮನಮೆಚ್ಚಿದ ಅತಿಥಿ ಬಂದಾಗಿದೆ ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೆ ಧೋನಿ ಮನೆಗೆ ಬಂದಿರುವ ಜೀಪ್ ಗ್ರ್ಯಾಂಡ್ ಚೆರೋಕಿ ಎಸ್‌ಯುವಿ ಕಾರಿನ ಬೆಲೆಯು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.97 ಲಕ್ಷ ಆರಂಭಿಕ ಬೆಲೆಯೊಂದಿಗೆ ಟಾಪ್ ಎಂಡ್ ಮಾದರಿಯು ರೂ. 1.40 ಕೋಟಿ ಬೆಲೆ ಪಡೆದುಕೊಂಡಿದೆ. ಇದರಲ್ಲಿ ಟಾಪ್ ಎಂಡ್ ಎಸ್ಆರ್‌ಟಿ ಮಾದರಿಯು ಇದೀಗ ಧೋನಿ ಗ್ಯಾರೇಜ್‌ಗೆ ಲಗ್ಗೆಯಿಟ್ಟಿದ್ದು, ಹಲವಾರು ಅತ್ಯಾಧುನಿಕ ಡ್ರೈವ್ ಸೌಲಭ್ಯಗಳು ಈ ಕಾರಿನಲ್ಲಿವೆ.

ಮತ್ತೊಂದು ವಿಶೇಷ ಅಂದ್ರೆ, ಗ್ರ್ಯಾಂಡ್ ಚರೋಕಿಯ 2019ರ ಪ್ರಥಮ ಆವೃತ್ತಿಯು ಮೊದಲಿಗೆ ಧೋನಿ ಗ್ಯಾರೇಜ್ ಪಾಲಾಗಿದ್ದು, ಅಮೆರಿಕದ ಪ್ರಸಿದ್ದ ಕಾರು ನಿರ್ಮಾಣ ಸಂಸ್ಥೆ ಜೀಪ್ ನಿರ್ಮಾಣದ ವಿಶೇಷ ಕಾರುಗಳಲ್ಲಿ ಇದು ಕೂಡಾ ಒಂದಾಗಿದೆ. 2017ರಿಂದಲೇ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿರುವ ಗ್ರ್ಯಾಂಡ್ ಚರೋಕಿ ಆಫ್ ರೋಡ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಗ್ರ್ಯಾಂಡ್ ಚೆರೊಕೀ ಕಾರು ಮಾದರಿಯನ್ನು ಜೀಪ್ ಸಂಸ್ಥೆಯ ತನ್ನ ಬ್ರ್ಯಾಂಡ್ ಅನ್ನು ಉತ್ತಮಗೊಳಿಸಲು ಕಂಪ್ಲೀಟ್ ಬಿಲ್ಟ್ ಯೂನಿಟ್ (CBU) ಮಾರ್ಗದ ಮೂಲಕ ಭಾರತಕ್ಕೆ ಆಮದುಮಾಡಿಕೊಂಡು ಮಾರಾಟ ಮಾಡುತ್ತಿದ್ದು, ಕಡಿಮೆ ಪ್ರಮಾಣದ ಮಾರಾಟ ಪ್ರಮಾಣವನ್ನು ಹೊಂದಿದ್ದರೂ ಸಹ ಭಾರತದಲ್ಲಿ ಈ ಕಾರಿಗೆ ವಿಶೇಷ ಬೇಡಿಕೆಯಿದೆ.

ಬಾಲಿವುಡ್‌ನ ಹಲವು ನಟ-ನಟಿಯರ ಕಾರ್ ಗ್ಯಾರೇಜ್‌ನಲ್ಲಿ ಗ್ರ್ಯಾಂಡ್ ಚರೋಕಿ ಸ್ಥಾನ ಪಡೆದಿದ್ದು, ಐಷಾರಾಮಿ ಆಫ್ ರೋಡ್ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ. ಗ್ರ್ಯಾಂಡ್ ಚೆರೋಕಿ ಎಸ್‍ಯುವಿ ಕಾರು ಲಿಮಿಟೆಡ್ 4x4 ಡೀಸೆಲ್, ಸಮ್ಮಿಟ್ ಪೆಟ್ರೋಲ್ ಮತ್ತು ಎಸ್ಆರ್‌ಟಿ 4x4 ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿಸಬಹುದಾಗಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಗ್ರ್ಯಾಂಡ್ ಚೆರೋಕಿ ಕಾರಿನ ಪೆಟ್ರೋಲ್ ಮಾದರಿಗಳು 3.0-ಲೀಟರ್ ಮತ್ತು 3.6-ಲೀಟರ್ ಪೆಂಟಾಸ್ಟರ್ ವಿ6 ಎಂಜಿನ್ ಸಹಾಯದಿಂದ 289-ಬಿಹೆಚ್‍ಪಿ ಹಾಗೂ 347-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹಾಗೆಯೇ ಡೀಸೆಲ್ ಆವೃತ್ತಿಯ ಗ್ರ್ಯಾಂಡ್ ಚರೋಕಿ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಣೆಯೊಂದಿಗೆ 3.0-ಲೀಟರ್ ವಿ6 ಇಕೋಡೀಸೆಲ್ ಎಂಜಿನ್ ಮೂಲಕ 243-ಬಿಎಚ್‌ಪಿ ಮತ್ತು 570-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಗ್ರ್ಯಾಂಡ್ ಚರೋಕಿ ಮಾದರಿಯು ವಿಶೇಷವಾಗಿ ಆಫ್ ರೋಡ್ ಕೌಶಲ್ಯ ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾಗಿದ್ದು, ಸ್ಪೋರ್ಟಿ ಬಂಪರ್, ಮಲ್ಟಿ ಡ್ರೈವ್ ಮೋಡ್, ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಅರಾಮದಾಯಕ ಪ್ರಯಾಣಕ್ಕಾಗಿ 20-ಇಂಚಿನ ಸ್ಪೋರ್ಟಿ ಅಲಾಯ್ ಚಕ್ರಗಳು, 9-ಏರ್‌ಬ್ಯಾಗ್‌ಗಳು, ಡ್ಯುಯಲ್ ಪನೋರಮಿಕ್ ಸನ್‌ರೂಫ್, ನಪ್ಪಾ ಲೆದರ್ ಆಸನಗಳು, ಹೆಚ್ಐಡಿ ಹೆಡ್‌ಲ್ಯಾಂಪ್‌ಗಳು, ಬ್ಲ್ಯೂ ರೇ ಎಂಟರ್‌ಟೈನ್‌ಮೆಂಟ್ ಸಿಸ್ಟಂ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.


Click it and Unblock the Notifications








