ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇದೀಗ ದುಬಾರಿ ಬೆಲೆಯ ಸೂಪರ್ ಕಾರೊಂದನ್ನು ಖರೀದಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಮರ್ಸಿಡಿಸ್ ಬೆಂಝ್ ನಿರ್ಮಾಣದ ದುಬಾರಿ ಎಸ್‌ಯವಿ ಕಾರು ಖರೀದಿಸಿದ್ದ ಹಾರ್ದಿಕ್ ಇದೀಗ ಲಂಬೋರ್ಗಿನಿ ಸೂಪರ್ ಕಾರಿನ ಮಾಲೀಕರಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಟೀ ಇಂಡಿಯಾದಲ್ಲಿ ಅಲ್‌ರೌಂಡರ್ ಆಗಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಸದ್ಯ ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿಯಲ್ಲಿದ್ದು, ಸಹೋದರ ಕುನಾಲ್ ಪಾಂಡ್ಯ ಜೊತೆಗೂಡಿ ಹೊಚ್ಚ ಹೊಸ ಲಂಬೋರ್ಗಿನಿ ಹ್ಯುರಕಾನ್ ಇವಿಒ ಸೂಪರ್ ಕಾರನ್ನು ಖರೀದಿಸಿದ್ದಾರೆ. ಸೂಪರ್ ಕಾರುಗಳಲ್ಲೇ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮಾದರಿ ಇದಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಲಂಬೋರ್ಗಿನಿ ಕಾರುಗಳಲ್ಲಿ ಹ್ಯುರಕಾನ್ ಆವೃತ್ತಿಯು ಇದೀಗ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಸ್ಥಾನ ಪಡೆದಿದೆ.

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ತಾಂತ್ರಿಕವಾಗಿ ಬಲಿಷ್ಠವಾಗಿರುವ ಹ್ಯುರಕಾನ್ ಕಾರು ಟು ಸೀಟರ್ ಸೌಲಭ್ಯದೊಂದಿಗೆ ಪೂರ್ಣ ಪ್ರಮಾಣದ ಪರ್ಫಾಮೆನ್ಸ್ ಆವೃತ್ತಿಯಾಗಿ ಮಿಂಚುತ್ತಿದ್ದು, ಆನ್‌ರೋಡ್ ಪ್ರಕಾರ ಹೊಸ ಕಾರಿನ ಬೆಲೆಯು ರೂ. 4.55 ಕೋಟಿ ನಿಗದಿ ಮಾಡಲಾಗಿದೆ.

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಹ್ಯುರಕಾನ್ ಇವಿಒ ಕಾರು 5,204-ಸಿಸಿ ಸಾಮಾರ್ಥ್ಯದ ವಿ10 ಪೆಟ್ರೋಲ್ ಎಂಜಿನ್ ಹೊಂದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 640-ಬಿಎಚ್‌ಪಿ ಮತ್ತು 600-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಈ ಮೂಲಕ 2.9 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗದ ಮೀತಿ ಸಾಧಿಸಲಿರುವ ಹ್ಯುರಕಾನ್ ಸೂಪರ್ ಕಾರು ಪ್ರತಿ ಗಂಟೆಗೆ 325 ಕಿ.ಮಿ ಟಾಪ್ ಸ್ಪೀಡ್ ಸಾಮರ್ಥ್ಯವನ್ನು ಹೊಂದಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಅತ್ಯುತ್ತಮ ಡ್ರೈವ್ ಸೌಲಭ್ಯವನ್ನು ಪಡೆದುಕೊಂಡಿದೆ. ಹೀಗಾಗಿ ಇದು ಸಂಪೂರ್ಣ ಟ್ರಾಕ್ ಪರ್ಫಾಮೆನ್ಸ್‌ಗಾಗಿಯೇ ವಿಶೇಷವಾಗಿ ಸಿದ್ದಪಡಿಸಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಇದರ ಇಂಧನ ಕಾರ್ಯಕ್ಷಮತೆ ಕೇವಲ 7.2 ಕಿ.ಮಿ ಮಾತ್ರ.

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಇದೇ ಕಾರಣಕ್ಕೆ ಪರ್ಫಾಮೆನ್ಸ್ ಕಾರುಗಳನ್ನು ಇಷ್ಟಪಡುವ ಹಾರ್ದಿಕ್ ಪಾಂಡ್ಯ ಅವರು ಮೊದಲ ಬಾರಿಗೆ ಲಂಬೋರ್ಗಿನಿ ಸೂಪರ್ ಕಾರನ್ನು ಖರೀದಿಸಿದ್ದು, ಹೊಸ ಕಾರು ಸದ್ಯ ಮುಂಬೈ ರಸ್ತೆಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಇನ್ನು ಹಾರ್ದಿಕ್ ಪಾಂಡ್ಯ ಬಳಿ ಈಗಾಗಲೇ ಹಲವಾರು ಐಷಾರಾಮಿ ಕಾರುಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿದ್ದು, ಕಳೆದ ತಿಂಗಳ ಹಿಂದಷ್ಟೇ ಮರ್ಸಿಡಿಸ್ ಬೆಂಝ್ ನಿರ್ಮಾಣದ ದುಬಾರಿ ಕಾರು ಎಎಂಜಿ ಜಿ63 ಎಸ್‌ಯುವಿ ಕಾರನ್ನು ಖರೀದಿಸಿದ್ದರು.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಆಪ್ ರೋಡಿಂಗ್ ಕೌಶಲ್ಯ ಹಾಗೂ ಸುಧಾರಿತ ತಂತ್ರಜ್ಞಾನ ಪ್ರೇರಿತ ಮರ್ಸಿಡಿಸ್ ಎಎಂಜಿ ಜಿ63 ಕಾರು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.19 ಕೋಟಿ ಬೆಲೆ ಹೊಂದಿದ್ದು, ಆಪ್ ರೋಡಿಂಗ್ ಬಗೆಗೆ ಸಾಕಷ್ಟು ಕ್ರೇಜ್ ಹೊಂದಿರುವ ಹಾರ್ದಿಕ್ ಪಾಂಡ್ಯ ಅವರು ಹೊಸ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸುವ ಬಗ್ಗೆ ಈ ಹಿಂದೊಮ್ಮೆ ಸುಳಿವು ನೀಡಿ ತಮ್ಮ ಕನಸಿನ ಕಾರನ್ನು ಖರೀದಿಸಿದ್ದರು.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

5.5-ಲೀಟರ್ ಟ್ವಿನ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಹೊಂದಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು 571-ಬಿಎಚ್‌ಪಿ ಮತ್ತು 560-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಕಠಿಣ ಪರಿಸ್ಥಿತಿಯಲ್ಲೂ ಉತ್ತಮ ಕೌಶಲ್ಯ ಪ್ರದರ್ಶನ ಮಾಡಬಲ್ಲವು.

MOST READ: ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಜೊತೆಗೆ 4x4 ಡ್ರೈವ್ ಟೆಕ್ನಾಲಜಿ ಹೊಂದಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು ಕೇವಲ 5.4 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗ ಪಡೆದುಕೊಳ್ಳುವುದಲ್ಲದೇ ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್ ಸಾಧಿಸುವ ಗುಣ ಹೊಂದಿವೆ.

ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಹೀಗಾಗಿಯೇ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಕೇವಲ 5 ಕಿಮಿ ಮೈಲೇಜ್ ನೀಡುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು ದೈನಂದಿನ ಬಳಕೆಗಿಂತ ಆಪ್ ರೋಡ್‌ಗೆ ಹೆಚ್ಚು ಸೂಕ್ತವಾಗಿದ್ದು, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇದೇ ಉದ್ದೇಶಕ್ಕಾಗಿ ಎಎಂಜಿ ಜಿ63 ಕಾರನ್ನು ಖರೀದಿ ಮಾಡಿದ್ದಾರೆ.

More from DriveSpark

Article Published On: Saturday, August 17, 2019, 19:19 [IST]
English summary
Hardik Pandya Spotted Driving New Lamborghini Huracan EVO Supercar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+