ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

Written By:

ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರಿಗೆ ಐಷಾರಾಮಿ ಬಿಎಂಡಬ್ಲ್ಯು ಕಾರೊಂದನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಉಡುಗೊರೆಯಾಗಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

ಸಚಿನ್ ತಂಡೊಲ್ಕರ್ ನೀಡಿರುವ ದುಬಾರಿ ಗಿಫ್ಟ್ ವಿವರವನ್ನು ಸ್ವತ: ವೀರೇಂದ್ರ ಸೆಹ್ವಾಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ತಮಗೆ ಬಿಎಂಡಬ್ಲ್ಯು ಐಷಾರಾಮಿ ಕಾರು ಉಡುಗೊರೆಯಾಗಿ ನೀಡಿರುವ ಸಚಿನ್ ಅವರಿಗೆ ಧನ್ಯವಾದ ಎಂದಿದ್ದಾರೆ.

ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

ಇನ್ನು ದುಬಾರಿ ಬೆಲೆಯ ಬಿಎಂಡಬ್ಲ್ಯು 7 ಸಿರೀಸ್ 730 ಎಲ್‌ಡಿ ಕಾರನ್ನು ವೀರು ಅವರಿಗೆ ಉಡುಗೊರೆಯಾಗಿ ನೀಡಲಾಗಿದ್ದು, ಕಾರಿನೊಂದಿಗಿನ ಚಿತ್ರವನ್ನು ವೀರೇಂದ್ರ ಸೆಹ್ವಾಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

ಹಲವು ವಿಶೇಷತೆ ಕೂಡಿರುವ ಬಿಎಂಡಬ್ಲ್ಯು 7 ಸಿರೀಸ್ 730ಎಲ್‌ಡಿ ಕಾರು ಬರೋಬ್ಬರಿ 1.20 ಕೋಟಿ ರೂಪಾಯಿಗಳಷ್ಟು ದುಬಾರಿಯಾಗಿದ್ದು, ಭಾರತದ ಪ್ರಮುಖ ಉದ್ಯಮಿಗಳು ಮತ್ತು ನಟರ ಬಳಿಯೂ ಇದೆ ಮಾದರಿಯ ಕಾರುಗಳಿವೆ.

ಗಿಫ್ಟ್ ನೀಡಲು ಕಾರಣ?

ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತಂಡೊಲ್ಕರ್ ಅವರು ಬಹಳ ಹಿಂದಿನಿಂದಲೂ ಉತ್ತಮ ಸ್ನೇಹಿತರಾಗಿದ್ದು, ಇತ್ತೀಚೆಗೆ ವಯಕ್ತಿಕ ಭೇಟಿ ಸಂದರ್ಭದಲ್ಲಿ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

Recommended Video
Tata Nexon Price And Features Variant-wise - DriveSpark
ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

7 ಸೀರಿಸ್ 730 ಡಿ ವಿಶೇಷತೆ ಏನು?

2993 ಸಿಸಿ ಸಾಮರ್ಥ್ಯದ 6 ಸಿಲಿಂಡರ್ ಡಿಸೇಲ್ ಎಂಜಿನ್ ಹೊಂದಿರುವ 7 ಸೀರಿಸ್ 730 ಡಿ ಮಾದರಿಯು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹಾಗೂ 152ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

ಜೊತೆಗೆ 258-ಬಿಎಚ್‌ಪಿ ಮತ್ತು 560-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಒದಗಿಸಲಾಗಿದ್ದು, ಕೇವಲ 6 ಸೇಕೆಂಡುಗಳಲ್ಲಿ 100 ಕಿಮಿ ವೇಗವನ್ನು ಪಡೆದುಕೊಳ್ಳುವ ಮೂಲಕ ಪ್ರತಿ ಲೀಟರ್‌ ಡೀಸೆಲ್‌ಗೆ ಕೇವಲ 13 ಕಿಮಿ ಮೈಲೇಜ್ ಸಾಮರ್ಥ್ಯ ಹೊಂದಿದೆ.

ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

ಐಷಾರಾಮಿ ವೈಶಿಷ್ಟ್ಯತೆಗಳ ಜೊತೆ ಜೊತೆಗೆ ಸುರಕ್ಷೆತೆಗೂ 7 ಸೀರಿಸ್ 730 ಮಾದರಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಪವರ್ ಸ್ಟಿರಿಂಗ್, 6 ಏರ್‌ಬ್ಯಾಗ್ ಮತ್ತು ಕ್ರೂಸ್ ಕಂಟ್ರೋಲರ್ ವ್ಯವಸ್ಥೆಯನ್ನು ಒದಗಿಸಲಾಗಿದೆ.

English summary
Read in Kannada about Sachin Tendulkar Gifts BMW Luxury Car to Virender Sehwag.
Story first published: Wednesday, September 27, 2017, 17:38 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark