ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದರ ಜೊತೆಗೆ ದಿನಂಪ್ರತಿ ಕೆಲವು ಅಹಿತಕರ ಘಟನೆಗಳು ಸಂಭವಿಸುತ್ತಿವೆ. ದೇಶದಲ್ಲಿ ಅಪಘಾತ, ಕೊಲೆ, ದರೋಡೆಯಂತಹ ಪ್ರಕರಣಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ.

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ಕ್ರಿಕೆಟ್ ದಂತಕಥೆಗಳಿಬ್ಬರು ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಸಲಹೆ ನೀಡುತ್ತಿರುವ ವೀಡಿಯೊ ವೈರಲ್ ಆಗಿದೆ. ಕ್ರಿಕೆಟ್ ದಂತಕಥೆಗಳಾದ ಭಾರತದ ಸಚಿನ್ ತೆಂಡೂಲ್ಕರ್ ಹಾಗೂ ವೆಸ್ಟ್ ಇಂಡೀಸ್'ನ ಬ್ರಿಯಾನ್ ಲಾರಾ ಅವರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ದ್ವಿಚಕ್ರ ವಾಹನ ಸವಾರರು ಸುರಕ್ಷಿತವಾಗಿ ವಾಹನ ಚಾಲನೆ ಮಾಡುವಂತೆ ಈ ವೀಡಿಯೊದಲ್ಲಿ ಸಲಹೆ ನೀಡಲಾಗಿದೆ. ದ್ವಿಚಕ್ರ ವಾಹನ ಸವಾರರು ಮಾತ್ರವಲ್ಲದೇ, ಹಿಂಬದಿಯ ಸವಾರರು ಸಹ ಹೆಲ್ಮೆಟ್ ಧರಿಸಬೇಕು ಎಂಬುದನ್ನು ತಿಳಿಸಲು ಈ ವೀಡಿಯೊ ಬಿಡುಗಡೆಗೊಳಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಕುಳಿತ ಸಚಿನ್ ತೆಂಡೂಲ್ಕರ್ ಸವಾರಿ ಹೊರಡಲು ತಯಾರಾಗುತ್ತಾರೆ. ಆ ವೇಳೆ ಸಚಿನ್ ತೆಂಡೂಲ್ಕರ್ ಅಲ್ಲಿಗೆ ಬರುವ ಬ್ರಿಯಾನ್ ಲಾರಾರನ್ನು ತಮ್ಮೊಂದಿಗೆ ಬರುವಂತೆ ತಿಳಿಸುತ್ತಾರೆ.

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ಸ್ಕೂಟರ್ ಹತ್ತಲು ಬರುವ ಲಾರಾರಿಗೆ ನಿಮ್ಮ ಹೆಲ್ಮೆಟ್ ಎಲ್ಲಿ ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡುವ ಬ್ರಿಯಾನ್ ಲಾರಾ ಹೆಲ್ಮೆಟ್ ಧರಿಸಬೇಕಾ ಎಂದು ಕೇಳುತ್ತಾರೆ. ಹೆಲ್ಮೆಟ್ ಧರಿಸಬೇಕೆಂದು ಸಚಿನ್ ಹೇಳುತ್ತಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರ ಬಳಿ ಲಾರಾರವರಿಗಾಗಿ ಹೆಲ್ಮೆಟ್ ಪಡೆಯುತ್ತಾರೆ. ನಂತರ ಸ್ಕೂಟರಿನ ಹೆಲ್ಮೆಟ್ ಬಳಿಯಿದ್ದ ಕ್ರಿಕೆಟ್ ಹೆಲ್ಮೆಟ್ ಬದಲು ದ್ವಿಚಕ್ರ ವಾಹನ ಚಾಲನೆ ಮಾಡುವ ವೇಳೆ ಧರಿಸುವ ಹೆಲ್ಮೆಟ್ ನೀಡಬೇಕೆಂದು ಕೇಳುತ್ತಾರೆ.

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ಬ್ರಿಯಾನ್ ಲಾರಾ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರೂ ಹೆಲ್ಮೆಟ್ ಧರಿಸಿದ ನಂತರ ಸ್ಕೂಟರಿನಲ್ಲಿ ಪ್ರಯಾಣವನ್ನು ಆರಂಭಿಸುತ್ತಾರೆ. ಈ ವೇಳೆ ದ್ವಿಚಕ್ರ ವಾಹನ ಸವಾರರು ಮಾತ್ರವಲ್ಲದೇ ಹಿಂಬದಿ ಸವಾರರು ಸಹ ಹೆಲ್ಮೆಟ್ ಧರಿಸುವಂತೆ ಸಲಹೆ ನೀಡುತ್ತಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ರಸ್ತೆ ಸುರಕ್ಷತೆ ಬಗೆ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿರುವ ವೀಡಿಯೊ ವೈರಲ್ ಆಗಿದೆ. ಸಚಿನ್ ರವರು ಕ್ರಿಕೆಟ್'ಗೆ ವಿದಾಯ ಹೇಳಿದ್ದರೂ ಈಗಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ರೈತರ ಪ್ರತಿಭಟನೆಯ ಬಗ್ಗೆ ವಿದೇಶಿ ಹಸ್ತಕ್ಷೇಪದ ಕುರಿತು ಟ್ವೀಟ್ ಮಾಡಿದ್ದರು. ಸಚಿನ್ ಅವರ ಈ ಟ್ವೀಟ್'ಗೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ಸಚಿನ್ ತೆಂಡೂಲ್ಕರ್ ಅವರಂತೆಯೇ, ಬ್ರಿಯಾನ್ ಲಾರಾ ಸಹ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಈ ಇಬ್ಬರು ದಿಗ್ಗಜರು ಕಾಣಿಸಿಕೊಂಡಿರುವ ವೀಡಿಯೊ ಅವರ ಅಭಿಮಾನಿಗಳನ್ನು ತಲುಪುವುದು ಖಚಿತ.

ಅಂದ ಹಾಗೆ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ಕಾಣಿಸಿಕೊಂಡಿದ್ದು ಹೋಂಡಾ ಆಕ್ಟಿವಾ ಸ್ಕೂಟರ್ ಜೊತೆಗೆ. ಈ ಸ್ಕೂಟರ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರಸ್ತೆ ಸುರಕ್ಷತೆ ವೀಡಿಯೊದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದಿಗ್ಗಜರು

ಹೋಂಡಾ ಕಂಪನಿಯು ಈ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿ 20 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಸ್ಕೂಟರಿನ ವಿಶೇಷ ಆವೃತ್ತಿಯನ್ನುಬಿಡುಗಡೆಗೊಳಿಸಲಾಗಿದೆ. ಈ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.71,522ಗಳಿಂದ ರೂ.73,268ಗಳಾಗಿದೆ.

Most Read Articles

Kannada
English summary
Sachin Tendulkar and Brian Lara video about road safety. Read in Kannada.
Story first published: Monday, March 22, 2021, 17:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X