ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಳಸಿದ ಕಾರು ಮಾರಾಟಕ್ಕಿದೆ: ಇಲ್ಲಿದೆ ವಿವರ
ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಭಾರತದಲ್ಲಿ ಬಿಎಂಡಬ್ಲ್ಯು ಬ್ರಾಂಡ್‌ನ ಅಂಬಾಸಿಡರ್ ಆಗಿದ್ದಾರೆ. ಇದೇ ಕಾರಣಕ್ಕೆ ವೈವಿಧ್ಯಮಯ ಬಿಎಂಡಬ್ಲ್ಯು ಕಾರುಗಳನ್ನು ಅವರು ಹೊಂದಿದ್ದಾರೆ. ಐಷಾರಾಮಿ ಕಾರುಗಳ ಜೊತೆಗೆ, ಪರ್ಫಾಮೆನ್ಸ್ ಕಾರುಗಳು ಮತ್ತು ಎಸ್‌ಯುವಿಗಳನ್ನು ಸಹ ಹೊಂದಿದ್ದಾರೆ. ಅವರ ಸಂಗ್ರಹದಲ್ಲಿರುವ ಜನಪ್ರಿಯ BMW X5 M ಪ್ರಸ್ತುತ ಮಾರಾಟಕ್ಕಿದೆ. ಈ ಕಾರಿನ ಚಿತ್ರಗಳನ್ನು ಮುಂಬೈನ ಎಕ್ಸೋಟಿಕ್ ಕಾರ್ಸ್ ತಮ್ಮ ಸೋಷಿಯಲ್ ಪೋಸ್ಟ್‌ನಲ್ಲಿ ಹಂಚಿಕೊಂಡಿದೆ. ಇಲ್ಲಿ ಕಂಡುಬರುವ ಕಾರು ಈ ಹಿಂದೆ ಭಾರತದ ಮಾಜಿ ಕ್ರಿಕೆಟಿಗನ ಒಡೆತನದಲ್ಲಿತ್ತು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಈ ಬಿಎಂಡಬ್ಲ್ಯು ಕಾರು, ಮೆಲ್ಬೋರ್ನ್ ರೆಡ್ ಎಂಬ ಬಣ್ಣದಲ್ಲಿದ್ದು ಸ್ಪೋರ್ಟಿ ಡಿಸೈನ್‌ನೊಂದಿಗೆ ಕಾಣುತ್ತಿದೆ. ಉತ್ತಮವಾಗಿ ನಿರ್ವಹಿಸಲಾಗಿದ್ದು ಕಾರಿನಲ್ಲಿ ಯಾವುದೇ ಡೆಂಟ್‌ಗಳು ಹಾಗೂ ಗೀರುಗಳು ಕಾಣುತ್ತಿಲ್ಲ. ಇದು ದೇಶದ ಅತಿ ಹೆಚ್ಚು ಸ್ಪೆಸಿಫಿಕೇಶನ್ ಹೊಂದಿರುವ ಬಿಎಂಡಬ್ಲ್ಯು X5 M ಕಾರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೆಲ ವರ್ಷಗಳ ಹಿಂದೆ ಸಚಿನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಬಿಎಂಡಬ್ಲ್ಯು X5 M ಚಾಲನೆ ಮಾಡುತ್ತಾ ಅದರ ಪರ್ಫಾಮೆನ್ಸ್‌ಗೆ ಮನಸೋತಿರುವ ಬಗ್ಗೆ ಹೇಳಿಕೊಂಡಿದ್ದರು. ಹಾಗೆಯೇ ಇದೇ ವಿಡಿಯೋದಲ್ಲಿ ಕಾರಿನಲ್ಲಿದ್ದ ನ್ಯಾವಿಗೇಷನ್ ಕೆಲ ಕಾರಣಗಳಿಂದಾಗಿ ಪ್ರತಿಕ್ರಿಯಿಸಿರಲಿಲ್ಲ. ಆಗ ಆಟೋ ಚಾಲಕನ ಬಳಿ ದಾರಿ ಕೇಳಿ ಸಹಾಯ ಪಡೆದಿದ್ದರು. ವೀಡಿಯೊದಲ್ಲಿದ್ದ ಅದೇ ರೆಡ್ ಇಂಟೀರಿಯರ್ ಅನ್ನು ಈ ಕಾರಿನಲ್ಲೂ ನೋಡಬಹುದು.
ಕಾರು ಪ್ರಸ್ತುತ ಓಡೋಮೀಟರ್‌ನಲ್ಲಿ ಸುಮಾರು 30,000 ಕಿ.ಮೀ ಓಡಿದೆ. ಈ ಎಸ್‌ಯುವಿ ಪ್ರಸ್ತುತ ಅದರ ಎರಡನೇ ಮಾಲೀಕರ ಬಳಿ ಇದೆ, ಈ ಕಾರು ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಒಡೆತನದಲ್ಲಿತ್ತು ಎಂದು ಪೋಸ್ಟ್‌ನಲ್ಲಿ ಮತ್ತೆ ಉಲ್ಲೇಖಿಸಲಾಗಿದೆ. ಈ ಎಸ್‌ಯುವಿಯು ಕಂಪನಿಯ ದಾಖಲೆಗಳೊಂದಿಗೆ ಲಭ್ಯವಿದೆ ಎಂದು ತಿಳಿಸಿದ್ದಾರೆ.

ಕಾರಿನ ಹೊರಭಾಗ ಮತ್ತು ಒಳಾಂಗಣವನ್ನು ರೆಡ್ ಥೀಮ್‌ನಲ್ಲಿ ಡಿಸೈನ್ ಮಾಡಲಾಗಿದೆ. ಬ್ಲಾಕ್ ಕಿಡ್ನಿ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, LED ಟೈಲ್ ಲ್ಯಾಂಪ್‌ಗಳು ಎಸ್‌ಯುವಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಈ ಎಸ್‌ಯುವಿಯು ಮೂಲ ಬಿಎಂಡಬ್ಲ್ಯು ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಹೊರಭಾಗ ಮತ್ತು ಒಳಗೆ ಉತ್ತಮವಾಗಿ ನಿರ್ವಹಿಸಲ್ಪಟ್ಟ ವಾಹನದಂತೆ ಕಾಣುತ್ತಿದೆ.
ಬಿಎಂಡಬ್ಲ್ಯು X5 M ವೈಶಿಷ್ಟ್ಯಗಳು: ಹೆಡ್ಸ್-ಅಪ್ ಡಿಸ್ ಪ್ಲೇ, ಪನೋರಮಿಕ್ ಸನ್ ರೂಫ್, ಹೀಟೆಡ್ ಸೀಟ್ ಗಳು, ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಂ, ರಿಯರ್ ಎಂಟರ್‌ಟೈನ್ಮೆಂಟ್ ಪ್ಯಾಕ್, ಸಾಫ್ಟ್ ಕ್ಲೋಸ್ ಡೋರ್‌ಗಳು, ನೈಟ್ ವಿಷನ್ ಕ್ಯಾಮೆರಾಗಳು, ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ಆಟೋಮ್ಯಾಟಿಕ್ ಟೈಲ್ ಗೇಟ್, ವೈಯಕ್ತಿಕ ಕಂಫರ್ಟ್ ಸೀಟ್ ಪ್ಯಾಕೇಜ್, ಅಲ್ಕಾಂಟರಾ ಹೆಡ್ ಲೈನರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಬಿಎಂಡಬ್ಲ್ಯು X5 M ಕಾರಿನಲ್ಲಿ 4.4 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 560 ಬಿಹೆಚ್‌ಪಿ ಪವರ್ ಮತ್ತು 750 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಎಂ ಸ್ಟೆಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದು 2015/16ರ ಬಿಎಂಡಬ್ಲ್ಯು X5 M ಪರ್ಫಾಮೆನ್ಸ್ ಎಸ್‌ಯುವಿಯಾಗಿದೆ.
ಈ ಎಸ್‌ಯುವಿ ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದು, ಬಿಎಂಡಬ್ಲ್ಯು X5 M ಪರ್ಫಾಮೆನ್ಸ್ ಎಸ್‌ಯುವಿಯ ಬೆಲೆಯು ರೂ. 92 ಲಕ್ಷಗಳಾಗಿದೆ. ನೀವು ಈ ಎಸ್‌ಯುವಿಯಲ್ಲಿ ಆಸಕ್ತಿ ಹೊಂದಿದ್ದರೆ, ವಾಹನವನ್ನು ಅಧಿಕೃತ ಸೇವಾ ಕೇಂದ್ರದಿಂದ ಸಂಪೂರ್ಣವಾಗಿ ಪರಿಶೀಲಿಸುವುದು ಯಾವಾಗಲೂ ಒಳ್ಳೆಯದು. ಆಸಕ್ತ ಖರೀದಿದಾರರು +91 98330 46456 ಸಂಖ್ಯೆಗೆ ಕರೆ ಮಾಡಿ ಮಾರಾಟಗಾರರನ್ನು ಸಂಪರ್ಕಿಸಬಹುದು.


Click it and Unblock the Notifications








