ಸದ್ದಿಲ್ಲದೇ ರೇಂಜ್ ರೋವರ್ ಕಾರು ಖರೀದಿಸಿದ ಸಚಿನ್ ತೆಂಡೂಲ್ಕರ್.. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ?

ಭಾರತದ ಕ್ರಿಕೆಟ್ ಇತಿಹಾಸದ ಬಗ್ಗೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರೇಳದೆ ಮಾತನಾಡಲು ಸಾಧ್ಯವಿಲ್ಲ. 16ನೇ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು, 2013ರಲ್ಲಿ ನಿವೃತ್ತಿಯಾಗುವವರೆಗೂ ಭರ್ತಿ 24 ವರ್ಷಗಳ ಕಾಲ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹತ್ತಾರು ದಾಖಲೆಗಳನ್ನು ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಸಾಧನೆಗೆ ಭಾರತ ರತ್ನ, ಪದ್ಮವಿಭೂಷಣ, ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿಗಳು ಕೂಡ ಸಂದಿವೆ.

ಇದೇ ಸಚಿನ್ ತೆಂಡೂಲ್ಕರ್ ಅವರಿಗೆ ಕ್ರಿಕೆಟ್‌ನಂತೆ ಕಾರುಗಳ ಮೇಲೆಯೂ ವಿಶೇಷವಾದ ಪ್ರೀತಿಯಿದೆ. ಅವರು ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರು ಸಹ ಆಗಿದ್ದಾರೆ. ಇತ್ತೀಚೆಗೆ, ಸಚಿನ್ ತೆಂಡೂಲ್ಕರ್ ಹೊಚ್ಚ ಹೊಸ ರೇಂಜ್ ರೋವರ್ ಎಸ್‌ಪಿ ಎಡಿಷನ್ (Range Rover SV Edition) ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.

Sachin Tendulkar Buys New Range Rover SV Edition Full Details

'ಕಾರ್ಸ್ ಫಾರ್ ಯು' ಯು ಚಾನಲ್‌ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್, ಮುಂಬೈನ ವಿಮಾನ ನಿಲ್ದಾಣದಿಂದ ಹೊರಗಡೆ ಬಂದು ಪತ್ನಿ ಅಂಜಲಿ ಅವರೊಂದಿಗೆ ನೂತನ ಕಾರನ್ನು ಹತ್ತುತ್ತಿರುವುದನ್ನು ಕಾಣಬಹುದು. ವಿಶೇಷವಾಗಿ ಸಚಿನ್ ಅವರೇ ಈ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವುದನ್ನು ಕೂಡ ನೋಡಬಹುದು.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಸ 'ರೇಂಜ್ ರೋವರ್ ಎಸ್‌ಪಿ ಎಡಿಷನ್' ಎಸ್‌ಯುವಿ ದುಬಾರಿ ಬೆಲೆಯನ್ನು ಹೊಂದಿದೆ. ಬರೋಬ್ಬರಿ ರೂ.2.36 ಕೋಟಿಯಿಂದ ರೂ.4.98 ಕೋಟಿ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಈ ಕಾರು 5 ಅಥವಾ 7 ಆಸನ ಆಯ್ಕೆ ವ್ಯವಸ್ಥೆವನ್ನು ಒಳಗೊಂಡಿದೆ.

Sachin Tendulkar Buys New Range Rover SV Edition Full Details

ಈ ಕಾರು 3.0-ಲೀಟರ್ 6 ಮೈಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 394 ಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 550 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದೆ. ಕೇವಲ 5.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ನೂತನ ರೇಂಜ್ ರೋವರ್ ಎಸ್‌ಪಿ ಎಡಿಷನ್ ಎಸ್‌ಯುವಿ ಹತ್ತಾರು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. 13.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, ಡಿಜಿಟಲ್ ಡ್ರೈವರ್ಸ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್ ಕಮಾಂಡ್‌ಗಳು, ಹೆಡ್-ಅಪ್ ಡಿಸ್‌ಪ್ಲೇ, ಡಿಜಿಟಲ್ ಆಡಿಯೋ ಬ್ರಾಡ್‌ಕಾಸ್ಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಪ್ರೀಮಿಯಂ ಮೆರಿಡಿಯನ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Sachin Tendulkar Buys New Range Rover SV Edition Full Details

ಇದು ಮಾತ್ರವಲ್ಲದೆ, ಸಚಿನ್ ತೆಂಡೂಲ್ಕರ್ ವಿವಿಧ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಲಂಬೋರ್ಗಿನಿ ಉರುಸ್, ವೋಲ್ವೋ ಎಸ್80, ಬಿಎಂಡಬ್ಲ್ಯೂ ಐ8, ಎಂಜಿ ಜಡ್ಎಸ್ ಇವಿ, ಪೋರ್ಷೆ ಕೇಯೆನ್ನೆ ಟರ್ಬೊ, ಬಿಎಂಡಬ್ಲ್ಯೂ 3-ಸೀರೀಸ್ ಜಿಟಿ, ಬಿಎಂಡಬ್ಲ್ಯೂ 5-ಸೀರೀಸ್, ಬಿಎಂಡಬ್ಲ್ಯೂ ಎಕ್ಸ್5 ಎಂ ಹಾಗೂ ಆಡಿ ಕ್ಯೂ7 ಸೇರಿದಂತೆ ಹಲವು ಕಾರುಗಳು ಕೂಡ ಅವರ ಮನೆಗೆ ಗ್ಯಾರೇಜ್‌ನಲ್ಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 31, 2024, 12:27 [IST]
English summary
Sachin tendulkar buys new range rover sv edition full details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+