ನಡುರಸ್ತೆಯಲ್ಲಿ ಗಡಿಕಾಯುವ ದೇವರೊಂದಿಗೆ ಸಚಿನ್‌ ತೆಂಡೋಲ್ಕರ್ ಬ್ಯಾಟಿಂಗ್: ಕ್ರಿಕೆಟ್‌ ದೇವರೂ ಖುಷ್‌

ಕ್ರಿಕೆಟ್‌ ದೇವರು ಎಂದೇ ಹೆಸರುವಾಸಿಯಾಗಿರುವ ಸಚಿನ್ ತೆಂಡೋಲ್ಕರ್‌‌ (Sachin Tendulkar) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎರಡು ದಶಕಗಳಿಗೂ ಅಧಿಕ ಕಾಲ ಕ್ರಿಕೆಟ್‌ ಲೋಕವನ್ನು ಆಳಿದ ಈ ಸ್ಟಾರ್‌, ಕ್ರಿಕೆಟ್‌ನಿಂದ ನಿವೃತ್ತತಿ ತೆಗೆದುಕೊಂಡು ವರ್ಷಗಳೇ ಕಳೆದರೂ, ಇವರ ಬ್ರ್ಯಾಂಡ್‌ ವ್ಯಾಲ್ಯೂ ಮಾತ್ರ ಎಳ್ಳಷ್ಟೂ ಕಡಿಮೆ ಆಗಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಟುವಟಿಕೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಚಿನ್‌ ಆಗಾಗ ಸುದ್ದಿಯಲ್ಲಿರುತ್ತಾರೆ. ಸದ್ಯಕ್ಕೆ ಕಾಶ್ಮೀರ ಪ್ರವಾಸದಲ್ಲಿರುವ ಸಚಿನ್‌, ಫಾರ್ಚ್ಯೂನರ್ ಕಾರಿನಲ್ಲಿ ಸುತ್ತಾಡುತ್ತಿದ್ದಾರೆ. ನಿನ್ನೆಯಷ್ಟೇ ಸಚಿನ್‌ರ ಈ ಫಾರ್ಚ್ಯೂನರ್‌ ಕಾರು ಮಂಜುಗಡ್ಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದನ್ನು ನಾವು ವರದಿ ಮಾಡಿದ್ದೆವು. ಇದೀಗ ಸಚಿನ್‌ರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇಂದಿನ ಲೇಖನದಲ್ಲಿ ನಾವು ಈ ಕುರಿತಾಗಿ ಮಾತನಾಡಲಿದ್ದೇವೆ.

Sachin Tendulkar Played Cricket On The Kashmir Road With Locals And Army Men

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೋಲ್ಕರ್‌, ಕಾಶ್ಮೀರದಲ್ಲಿ ತಮ್ಮ ಫಾರ್ಚ್ಯೂನರ್‌ನಲ್ಲಿ ಸುತ್ತಾಡುತ್ತಿದ್ದಾಗ ರಸ್ತೆ ಮಧ್ಯೆ ಕ್ರಿಕೆಟ್‌ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೌದು, ಈ ವಿಡಿಯೋವನ್ನು ಸ್ವತಃಸಚಿನ್‌ ಅವರೇ ತಮ್ಮ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್‌ ಮಾಡಿದ್ದು, ಸುಮಾರು ನಾಲ್ಕು ಲಕ್ಷ ಲೈಕ್‌ಗಳು ಈ ವಿಡಿಯೋವನ್ನು ಹುಡುಕಿಕೊಂಡು ಬಂದಿದೆ.

ವಿಡಿಯೋದಲ್ಲಿ ಕಾಣುವಂತೆ ಬ್ಯಾಟ್ ಹಿಡಿದುಕೊಂಡಿರುವ ಸಚಿನ್‌ ರಸ್ತೆಯಲ್ಲಿ ಕ್ರಿಕೆಟ್‌ ಆಡುವುದನ್ನು ನೋಡಬಹುದು. ರಸ್ತೆಯಲ್ಲಿ ಬಾಕ್ಸ್‌ ಅನ್ನು ಇಟ್ಟು ವಿಕೆಟ್‌ ಆಗಿ ಬಳಸುತ್ತಿದ್ದು, ಸಚಿನ್‌ ಕೈಯಲ್ಲಿ ಬ್ಯಾಟ್‌ ಹಿಡಿದುಕೊಂಡು ಯಾರು ನಿಮ್ಮ ಬೌಲರ್‌ ಎಂದು ಕೇಳುತ್ತಿದ್ದಾರೆ. ವಿಡಿಯೋದಲ್ಲಿ ಸಚಿನ್‌, ಅಲ್ಲಿನ ಸ್ಥಳೀಯರು ಮತ್ತು ಸೈನಿಕರ ಜೊತೆ ಸೇರಿಕೊಂಡು ಬ್ಯಾಟಿಂಗ್‌ ಮಾಡುತ್ತಿದ್ದ, ತನ್ನತ್ತ ಬಂದ ಚೆಂಡುಗಳನ್ನು ನಿರಾಯಾಸವಾಗಿ ಬೀಸುತ್ತಿದ್ದಾರೆ.

ಕಂಪು ಬಣ್ಣದ ಬಾಲ್‌ ಮಾತ್ರವಲ್ಲದೇ, ಅಲ್ಲಿದ್ದವರು ಸಚಿನ್‌ ಕಡೆ ಟೆನ್ನಿಸ್ ಬಾಲನ್ನು ಸಹ ಎಸೆಯುತ್ತಿರುವುದನ್ನು ಕಾಣಬಹುದು. ತನ್ನತ್ತ ಮುನ್ನುಗ್ಗಿ ಬಂದ ಟೆನ್ನಿಸ್‌ ಬಾಲ್‌ಗೆ ಅಷ್ಟೇ ವೇಗವಾಗಿ ಸಚಿನ್‌ ಬೀಸಿ ಹೊಡೆಯುವುದನ್ನು ಕಾಣಬಹುದಾಗಿದ್ದು, ಅಲ್ಲಿರುವವರು ಸಚಿನ್‌ನ ಬ್ಯಾಟಿಂಗ್‌ ವೈಖರಿ ಕಂಡು ಬೆರಗಾಗಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾಗಿ ವರುಷಗಳೇ ಕಳೆದರೂ, ಬ್ಯಾಟಿಂಗ್‌ನ ಮೊನಚು ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಇನ್ನು ಕ್ರಿಕೆಟ್‌ ದೇವರ ಬ್ಯಾಟಿಂಗ್‌ ಅನ್ನು ನೊಡಲು ಅಲ್ಲಿದ್ದ ಸ್ಥಳೀಯರು ತುಂಬಾ ಉತ್ಸುಕರಾಗಿದ್ದುದು ಕಂಡು ಬರುತ್ತದೆ. ಪ್ರತಿ ಸಾರಿಯೂ ಸಚಿನ್‌ ಬ್ಯಾಟ್‌ ಬೀಸಿದಾಗ ಅಲ್ಲಿ ಸುತ್ತ ಇದ್ದವರು ಖುಷಿಯಿಂದ ಸಚಿನ್‌ ಅನ್ನು ನೋಡುವುದು, ಪ್ರೋತ್ಸಾಹಿಸುವುದನ್ನು ನಾವು ಕಾಣಬಹುದು. ಅಲ್ಲಿದ್ದ ಸೈನಿಕರೂ ಸಹ ಸಚಿನ್‌ ಅನ್ನು ಹುರಿದುಂಬಿಸುತ್ತಿದ್ದು, ಎಲ್ಲರೂ ಸಹ ಖುಷಿಯಾಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

Sachin Tendulkar Played Cricket On The Kashmir Road With Locals And Army Men

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಏಕದಿನ, ಟೆಸ್ಟ್ ಹಾಗೂ ಟಿ20ಯ ಎಲ್ಲಾ ಮಾದರಿಗಳಲ್ಲೂ ಒಟ್ಟಾರೆಯ ಶತಕಗಳಲ್ಲೂ ಶತಕದ ದಾಖಲೆ ಬರೆದಿರುವ ಕ್ರಿಕೆಟ್ ದೇವರು, ಟೀಂ ಇಂಡಿಯಾ ಪರ ನೂರಾರು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದು, ಹತ್ತಾರು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. 1990ರಲ್ಲಿ 17 ವರ್ಷ 112 ದಿನಗಳ ವಯಸ್ಸಿನ ಯುವ ಪ್ರತಿಭೆ ಟೀಂ ಇಂಡಿಯಾ ಪರ ಉತ್ತಮ ಬ್ಯಾಟಿಂಗ್ ಮೂಲಕ ಸೋಲಿನಿಂದ ತಂಡವನ್ನು ಮೇಲಕ್ಕೆತ್ತಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 22, 2024, 17:56 [IST]
English summary
Sachin tendulkar played cricket on the kashmir road with locals and army men
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+