ಕ್ರಿಕೆಟ್ ದೇವರ ಮನೆಗೆ ಬಂತು ಹೊಸ ಕಾರು: ಬೆಲೆ ಎಷ್ಟು ಗೊತ್ತಾ?
ಕ್ರಿಕೆಟ್ ಎಂಬ ಪದ ಕೇಳಿದ ತಕ್ಷಣ ಅಭಿಮಾನಿಗಳ ಮನಸ್ಸಿಗೆ ಬರುವ ಮೊದಲ ಹೆಸರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ನಿವೃತ್ತಿಯಾಗಿ ದಶಕ ಕಳೆದರೂ ಮಾಸ್ಟರ್ ಬ್ಲಾಸ್ಟರ್ ಅವರ ಆಟ ಮತ್ತು ಅವರ ಬ್ಯಾಟಿಂಗ್ ಶೈಲಿಯು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ನವೆಂಬರ್ 1989 ರಲ್ಲಿ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಪಾದಾರ್ಪಣೆ ಮಾಡಿದ ಅವರು ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ಕೆಲವು ದಾಖಲೆಗಳ ಹತ್ತಿರ ಯಾರೂ ಕೂಡ ಈವರೆಗೂ ಬಂದಿಲ್ಲ. ಸಚಿನ್ 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಬಳಿಕ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರಾಗಿದ್ದರು. 2014 ರಲ್ಲಿ, ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಲಾಯಿತು.

ಇತ್ತೀಚೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿಎಂಡಬ್ಲ್ಯು 3 ಸೀರಿಸ್ ಅವರ ಗ್ಯಾರೇಜ್‌ನಲ್ಲಿ ಹೊಸ ಅತಿಥಿಯಾಗಿದೆ. ಕ್ರಿಕೆಟ್ ನಂತರ ಕಾರುಗಳ ಮೇಲೆ ಹೆಚ್ಚಿನ ಕ್ರೇಜ್ ಹೊಂದಿರುವ ಸಚಿನ್ ಈಗಾಗಲೇ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಕ್ರಿಕೆಟ್ ದೇವರು ಹೊಸದಾಗಿ ಬಿಎಂಡಬ್ಲ್ಯು 3 ಸೀರಿಸ್ M340i xDrive ರೂಪಾಂತರವನ್ನು ಆಯ್ಕೆ ಮಾಡಿದ್ದಾರೆ.
ಸಚಿನ್ ತಮ್ಮ ಹೊಸ ಐಷಾರಾಮಿ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ವಾಹನ ಖರೀದಿಸಿದ ಮಾಹಿತಿ ಬಹಿರಂಗವಾಗಿದೆ. ವೀಡಿಯೊದಲ್ಲಿ, ಸಚಿನ್ ಕಾರಿನ ಟ್ರಂಕ್‌ನಿಂದ ಬ್ಯಾಗ್ ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ದಾರಿಯಲ್ಲಿ ಅವರನ್ನು ಮಾಧ್ಯಮದವರು ಮತ್ತು ಅನೇಕ ಅಭಿಮಾನಿಗಳು ಸ್ವಾಗತಿಸುವುದನ್ನು ಕಾಣಬಹುದು. ತಾಳ್ಮೆಯಿಂದ ಫೋಟೋಗೆ ಪೋಸ್ ಕೊಡಲು ಸಚಿನ್ ಮರೆಯಲಿಲ್ಲ.

ಸಚಿನ್ ತೆಂಡೂಲ್ಕರ್ ಅವರ ಹೊಸ ಕಾರ್ 3 ಸೀರಿಸ್ M340i xDrive ಬಗ್ಗೆ ಹೇಳುವುದಾದರೆ, ಈ ಐಷಾರಾಮಿ ಕಾರಿನಲ್ಲಿ 3.0 ಲೀಟರ್ B58 6-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 370 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
ಹೊಸ ಬಿಎಂಡಬ್ಲ್ಯು M340i xDrive ಕಾರು 4.4 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆಯಬಹುದು. ಈ ಬಿಎಂಡಬ್ಲ್ಯು 3 ಸಿರೀಸ್ M340i xDrive ಐಷಾರಾಮಿ ಕಾರಿನ ಬೆಲೆಯು ಭಾರತದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ.74.90 ಲಕ್ಷವಾಗಿದೆ. ಅದೇ ಸಮಯದಲ್ಲಿ, ಸೆಡಾನ್‌ನ ಆನ್-ರೋಡ್ ಬೆಲೆಯು ತೆರಿಗೆ, ವಿಮೆ ಮತ್ತು ಇತರ ವೆಚ್ಚಗಳನ್ನು ಒಳಗೊಂಡಂತೆ 90 ಲಕ್ಷವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಈ ಹೊಸ ಬಿಎಂಡಬ್ಲ್ಯು M340i xDrive ಕಾರಿನಲ್ಲಿ ಡ್ರೈವರ್ ಡಿಸ್‌ಪ್ಲೇಗಾಗಿ 12.3-ಇಂಚಿನ ಯುನಿಟ್, ಫ್ರೇಮ್‌ಲೆಸ್ 14.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೂರು-ಝೋನ್ ಕ್ಲೈಮೆಂಟ್ ಕಂಟ್ರೋಲ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪನರೊಮಿಕ್ ಸನ್‌ರೂಫ್, ಲೆದರ್ ಅಪ್ಹೋಲ್ಸ್ಟರಿ, ಹರ್ಮನ್ ಕಾರ್ಡನ್ ಸ್ಟೀರಿಯೋ ಸಿಸ್ಟಮ್ ಮತ್ತು ಪಾರ್ಕಿಂಗ್ ಅಸಿಸ್ಟ್ ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








