ಐಷಾರಾಮಿ ಫೋರ್ಡ್ ಪಿಕ್-ಅಪ್ ಟ್ರಕ್ ಅನ್ನು ಸಣ್ಣ ಮನೆಯಂತೆ ಮಾಡಿಫೈಗೊಳಿಸಿದ ಸದ್ಗುರು

By Manoj Bk

ಇಶಾ ಫೌಂಡೇಶನ್‌ ಸಂಸ್ಥಾಪಕ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು ಬೈಕ್‌ಗಳ ಬಗ್ಗೆ ಹೆಚ್ಚಿನ ಕ್ರೇಜ್ ಅನ್ನು ಹೊಂದಿದ್ದಾರೆ. ಸದ್ಗುರು ಅವರು ತಮ್ಮ 63ನೇ ವಯಸ್ಸಿನಲ್ಲಿಯು ಯುವಕರನ್ನು ನಾಚಿಸುವಂತೆ ಬೈಕ್ ರೈಡ್ ಮಾಡುತ್ತಾರೆ.

ಐಷಾರಾಮಿ ಫೋರ್ಡ್ ಪಿಕ್-ಅಪ್ ಟ್ರಕ್ ಅನ್ನು ಸಣ್ಣ ಮನೆಯಂತೆ ಮಾಡಿಫೈಗೊಳಿಸಿದ ಸದ್ಗುರು

ಇವರು ಬೈಕ್ ರೈಡ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇತ್ತೀಚೆಗೆ ಸದ್ಗುರು ಜಗ್ಗಿ ವಾಸುದೇವ್‌ ಅವರು ಮಾಡಿಫೈಗೊಂಡ ಫೋರ್ಡ್ ಎಫ್150 ಪಿಕ್-ಅಪ್ ಟ್ರಕ್ ಅನ್ನು ಡ್ರೈವ್ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಇರುವ ಪಿಕ್-ಅಪ್ ಟ್ರಕ್ ಅನ್ನು ಸಂಪೂರ್ಣವಾಗಿ ಮಾಡಿಫೈಗೊಂಡಿದೆ. ಈ ಪಿಕ್-ಅಪ್ ಟ್ರಕ್ ಕೆಂಪು ಬಣ್ಣವನ್ನು ಹೊಂದಿದೆ.

ಐಷಾರಾಮಿ ಫೋರ್ಡ್ ಪಿಕ್-ಅಪ್ ಟ್ರಕ್ ಅನ್ನು ಸಣ್ಣ ಮನೆಯಂತೆ ಮಾಡಿಫೈಗೊಳಿಸಿದ ಸದ್ಗುರು

ಈ ವಿಡಿಯೋವನ್ನು ಸದ್ಗುರು ಅವರೇ ಮಾಡಿದ್ದಾರೆ. ಫೋರ್ಡ್ ಎಫ್150 ಪಿಕ್-ಅಪ್ ಟ್ರಕ್ ಮಾಡಿಫೈಗೊಳಿಸಿರುವುದನ್ನು ತೋರಿಸುವುದರ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ಸ್ಟಾಕ್ ಟೈರ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು ಆಫ್-ರೋಡ್ ಟೈರ್‌ಗಳನ್ನು ಅಳವಡಿಸಲಾಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಐಷಾರಾಮಿ ಫೋರ್ಡ್ ಪಿಕ್-ಅಪ್ ಟ್ರಕ್ ಅನ್ನು ಸಣ್ಣ ಮನೆಯಂತೆ ಮಾಡಿಫೈಗೊಳಿಸಿದ ಸದ್ಗುರು

ಸ್ಟಾಕ್ ಅಲಾಯ್ ವ್ಹೀಲ್ ಗಳನ್ನು ಸ್ಟೀಲ್ ವ್ಹೀಲ್ ಗಳೊಂದಿಗೆ ಬದಲಾಯಿಸಲಾಗಿದೆ, ಇದನ್ನು ಆಫ್-ರೋಡಿಂಗ್‌ಗೆ ಆದ್ಯತೆ ನೀಡಲಾಗುತ್ತದೆ. ಇನ್ನು ಪಿಕ್-ಅಪ್ ಟ್ರಕ್‌ನ ಮೇಲ್ಭಾಗದಲ್ಲಿ ಇರಿಸಲಾಗಿರುವ ಕ್ಯಾಂಪರ್ ಆಗಿದೆ. ಆದ್ದರಿಂದ ಎಫ್15 ಅನ್ನು ಓವರ್‌ಲ್ಯಾಂಡಿಂಗ್‌ಗೆ ಬಳಸಬಹುದು. ಈ ಪಿಕ್ ಅಪ್ ಟ್ರಕ್‌ನಲ್ಲಿ ಸದ್ಗುರು ಈಗಾಗಲೇ 5,000 ಮೈಲಿ ದೂರ ಕ್ರಮಿಸಿದ್ದಾರೆ.

ಐಷಾರಾಮಿ ಫೋರ್ಡ್ ಪಿಕ್-ಅಪ್ ಟ್ರಕ್ ಅನ್ನು ಸಣ್ಣ ಮನೆಯಂತೆ ಮಾಡಿಫೈಗೊಳಿಸಿದ ಸದ್ಗುರು

ಅವರು ಲಾಸ್ ಏಂಜಲೀಸ್'ಗೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾರೆ. ಇದು ಸಣ್ಣ ಮನೆಯ ರೀತಿಯಲ್ಲೇ ಟ್ರಕ್ ಅನ್ನು ಮಾಡಿಫೈಗೊಳಿಸಿದ್ದಾರೆ. ಎಲ್ಲಾ ಕಡೆಗಳಲ್ಲಿಯು ಕರೋನಾ ಸೋಂಕಿನ ಹಾವಳಿ ಇರುವುದರಿಂದ ಸಾಮಾಜಿಕ ಅಂತರ ಕಾಪಾಡಲು ಅವರು ಹೋಟೆಲ್ ಗಳಲ್ಲಿ ಉಳಿಯಲು ಇಷ್ಟವಿಲ್ಲವೆಂದು ಅದಕ್ಕಾಗಿ ಈ ರೀತಿ ಮಾಡಿಫೈಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಐಷಾರಾಮಿ ಫೋರ್ಡ್ ಪಿಕ್-ಅಪ್ ಟ್ರಕ್ ಅನ್ನು ಸಣ್ಣ ಮನೆಯಂತೆ ಮಾಡಿಫೈಗೊಳಿಸಿದ ಸದ್ಗುರು

ಈ ಟ್ರಕ್ ನಲ್ಲಿ 'ಆದಿಯೋಗಿ' ಎಂಬು ಹೆಸರನ್ನು ಬರೆದಿದ್ದಾರೆ. ಅವರು ಒಂದೇ ದಿನದಲ್ಲಿ 700 ರಿಂದ 800 ಮೈಲಿಗಳನ್ನು ಕ್ರಮಿಸುತ್ತಿದ್ದಾರೆ. ಅವರೇ ಸ್ವತಃ ಟ್ರಕ್‌ನಲ್ಲಿ ಟ್ರಕ್‌ನಲ್ಲಿ ಅಡುಗೆ ಮಾಡುತ್ತಿದ್ದಾನೆ. ಅವರು ಈಗಾಗಲೇ 13 ದಿನಗಳಲ್ಲಿ 5,000 ಮೈಲಿಗಳನ್ನು ಕ್ರಮಿಸಿದ್ದಾರೆ.

ಐಷಾರಾಮಿ ಫೋರ್ಡ್ ಪಿಕ್-ಅಪ್ ಟ್ರಕ್ ಅನ್ನು ಸಣ್ಣ ಮನೆಯಂತೆ ಮಾಡಿಫೈಗೊಳಿಸಿದ ಸದ್ಗುರು

ನಾವು ಸೂಕ್ಷ್ಮವಾಗಿ ಗಮನಿಸಿದರೆ ಫೋರ್ಡ್ ಪಿಕ್ ಅಪ್‌ಗೆ ಇತರ ಮಾಡಿಫೈ ಕೂಡ ಇವೆ ಎಂದು ನಾವು ನೋಡಬಹುದು. ಮುಂಭಾಗದಲ್ಲಿ ಆಫ್ಟರ್ ಮಾರ್ಕೆಟ್ ಸ್ಟೀಲ್ ಬಂಪರ್ ಮತ್ತು ಗ್ರಿಲ್ ಅನ್ನು ಅಳವಡಿಸಲಾಗಿದೆ. ಆಫ್-ರೋಡ್ ಮಾಡುವಾಗ ಕಲ್ಲು ಅಥವಾ ಇತರ ವಸ್ತುಗಳು ತಗಲಾದ ರೀತಿ ಈ ಸ್ಟೀಲ್ ಬಂಪರ್ ಗಳು ರಕ್ಷಣೆ ನೀಡುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಇನ್ನು ಮುಂಭಾಗದ ಗ್ರಿಲ್ ಕೆಲವು ಆಕ್ಸ್ ಲ್ಯಾಂಪ್ ಗಳನ್ನು ಸಹ ಇರಿಸಲಾಗಿದೆ. ಸದ್ಗುರು ಅವರು ಡ್ರೈವ್ ಮಾಡುತ್ತಿರುವುದು ಎಫ್150 ಪಿಕ್-ಅಪ್ ಟ್ರಕ್'ನ ಕಿಂಗ್ ರಾಂಚ್ ವೆರೊಯೆಂಟ್ ಆಗಿದೆ. ಈ ಕಿಂಗ್ ರಾಂಚ್ ಎಫ್150 ಪಿಕ್-ಅಪ್ ಟ್ರಕ್'ನ ಸ್ಪೆಷಲ್ ಎಡಿಷನ್ ಆಗಿದೆ. ಇದರ ಮುಂಭಾಗದ ತ್ತು ಹಿಂಭಾಗದ ಬಂಪರ್‌ಗಳಲ್ಲಿ ಕಿಂಗ್ ರಾಂಚ್ ಫೆಂಡರ್ ಬ್ಯಾಡ್ಜ್‌ಗಳನ್ನು ಹೊಂದಿವೆ.

ಐಷಾರಾಮಿ ಫೋರ್ಡ್ ಪಿಕ್-ಅಪ್ ಟ್ರಕ್ ಅನ್ನು ಸಣ್ಣ ಮನೆಯಂತೆ ಮಾಡಿಫೈಗೊಳಿಸಿದ ಸದ್ಗುರು

ಫೋರ್ಡ್ ಎಫ್150 ಪಿಕ್-ಅಪ್ ಟ್ರಕ್ ನಲ್ಲಿ 5.0-ಲೀಟರ್ ಕೊಯೊಟೆ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಇದರೊಂದಿಗೆ ಫೋರ್ಡ್ 3.0-ಲೀಟರ್ ಪವರ್ ಸ್ಟ್ರೋಕ್ ಟರ್ಬೊಡೈಸೆಲ್, 3.5-ಲೀಟರ್ ಪವರ್‌ಬೂಸ್ಟ್ ಹೈಬ್ರಿಡ್ ವಿ6 ಮತ್ತು 3.5-ಲೀಟರ್ ಇಕೋಬೂಸ್ಟ್ ವಿ6 ಎಂಜಿನ್ ಹೊಂದಿರುವ ಮಾದರಿಗಳ ಆಯ್ಕೆಗಳಿವೆ.

Most Read Articles

Kannada
English summary
Jaggi ‘Sadhguru’ Vasudev’s Modified Ford F150 Pick Up Truck. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X