ಮಳೆ ನೀರಿನಲ್ಲಿ ಮುಳುಗಿದವು ವಿತರಣೆಗೆ ಸಿದ್ಧವಾಗಿದ್ದ ಹೊಸ ಕಾರುಗಳು

ಭಾರೀ ಮಳೆಯಿಂದ ದೇಶದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೆಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನದಿ ನೀರಿನಂತೆ ಉಕ್ಕಿ ಹರಿಯುತ್ತಿದೆ. ಇನ್ನೂ ಕೆಲವೆಡೆ ರಸ್ತೆಗಳಲ್ಲಿ ನಿಂತಿರುವ ವಾಹನಗಳು ಮಳೆ ನೀರಿನಲ್ಲಿ ಸಿಲುಕಿವೆ.

ಮಳೆ ನೀರಿನಲ್ಲಿ ಮುಳುಗಿದವು ವಿತರಣೆಗೆ ಸಿದ್ಧವಾಗಿದ್ದ ಹೊಸ ಕಾರುಗಳು

ಮಳೆ ನೀರಿನಿಂದ ಉಂಟಾಗಿರುವ ಪ್ರವಾಹದಲ್ಲಿ ಸಿಲುಕಿರುವ ಕಾರುಗಳು ಹಾನಿಗೀಡಾಗಿವೆ. ರಸ್ತೆಯಲ್ಲಿ ನಿಲ್ಲಿಸಿರುವ ಕಾರುಗಳು ನೀರಿನಲ್ಲಿ ಒಂದಕ್ಕೊಂದು ಅಪ್ಪಳಿಸಿ ಹಾನಿಗೀಡಾಗುತ್ತಿವೆ. ರಸ್ತೆಗಳಲ್ಲಿ ನಿಂತಿರುವ ವಾಹನಗಳು ಮಾತ್ರವಲ್ಲದೇ ಶೋರೂಂಗಳಲ್ಲಿ ನಿಲ್ಲಿಸಿರುವ ಕಾರುಗಳು ಸಹ ಮಳೆ ನೀರಿನಲ್ಲಿ ಸಿಲುಕಿವೆ.

ಮಳೆ ನೀರಿನಲ್ಲಿ ಮುಳುಗಿದವು ವಿತರಣೆಗೆ ಸಿದ್ಧವಾಗಿದ್ದ ಹೊಸ ಕಾರುಗಳು

ಮಳೆ ನೀರು ಹರಿಯದಂತೆ ತಡೆಯಲು ಶೋರೂಂ ಮಾಲೀಕರು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹರಿಯಾಣದ ಶೋರೂಂವೊಂದರ ಆವರಣದಲ್ಲಿ ನಿಲ್ಲಿಸಿದ್ದ ಟಾಟಾ ಕಾರುಗಳು ಮಳೆ ನೀರಿನಲ್ಲಿ ಸಿಲುಕಿವೆ.

ಮಳೆ ನೀರಿನಲ್ಲಿ ಮುಳುಗಿದವು ವಿತರಣೆಗೆ ಸಿದ್ಧವಾಗಿದ್ದ ಹೊಸ ಕಾರುಗಳು

ಹರಿಯಾಣದ ಬೈಪಾಸ್ ರಸ್ತೆ ಬಳಿಯಿರುವ ಶೋರೂಂನ ಆವರಣದ ತುಂಬೆಲ್ಲಾ ಮಳೆ ನೀರು ನಿಂತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಳೆ ನೀರು ಶೋರೂಂನ ಆವರಣಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ಮಳೆ ನೀರಿನಲ್ಲಿ ಮುಳುಗಿದವು ವಿತರಣೆಗೆ ಸಿದ್ಧವಾಗಿದ್ದ ಹೊಸ ಕಾರುಗಳು

ಈ ವೀಡಿಯೊದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಟಾಟಾ ಸಫಾರಿ ಹಾಗೂ ಟಾಟಾ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಮಳೆ ನೀರಿನಲ್ಲಿ ಸಿಲುಕಿರುವುದನ್ನು ಕಾಣಬಹುದು.

ಮಳೆ ನೀರಿನಲ್ಲಿ ಮುಳುಗಿದವು ವಿತರಣೆಗೆ ಸಿದ್ಧವಾಗಿದ್ದ ಹೊಸ ಕಾರುಗಳು

ವರದಿಗಳ ಪ್ರಕಾರ, ಬಿಳಿ ಬಣ್ಣದಲ್ಲಿರುವ ಈ ಕಾರುಗಳನ್ನು ಗ್ರಾಹಕರಿಗೆ ವಿತರಿಸುವ ಸಲುವಾಗಿ ಸಿದ್ಧಪಡಿಸಿ ನಿಲ್ಲಿಸಲಾಗಿತ್ತು. ಆದರೆ ಮಳೆ ನೀರಿನಿಂದ ಹಾಳಾಗಿರುವ ಕಾರಣಕ್ಕೆ ಈಗ ಈ ಕಾರುಗಳನ್ನು ಗ್ರಾಹಕರಿಗೆ ವಿತರಿಸಲು ಸಾಧ್ಯವಾಗುವುದಿಲ್ಲ.

ಮಳೆ ನೀರಿನಲ್ಲಿ ಮುಳುಗಿದವು ವಿತರಣೆಗೆ ಸಿದ್ಧವಾಗಿದ್ದ ಹೊಸ ಕಾರುಗಳು

ಬಿಳಿ ಬಣ್ಣದ ಟಾಟಾ ಸಫಾರಿ ಹಾಗೂ ಟಾಟಾ ಆಲ್ಟ್ರೋಜ್ ಕಾರುಗಳು ಮಾತ್ರವಲ್ಲದೇ ಕೆಂಪು ಬಣ್ಣದ ಟಾಟಾ ಟಿಯಾಗೋ ಹ್ಯಾಚ್‌ಬ್ಯಾಕ್ ಕಾರು ಸಹ ಮಳೆ ನೀರಿನಲ್ಲಿ ಸಿಲುಕಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಭಾರಿ ಮಳೆಯಿಂದ ಇವುಗಳು ಎಷ್ಟರ ಮಟ್ಟಿಗೆ ಹಾನಿಗೊಳಗಾಗಿವೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಮಳೆ ಕಡಿಮೆಯಾಗಿ ಈ ಕಾರುಗಳನ್ನು ಪರೀಕ್ಷಿಸಿದ ನಂತರವಷ್ಟೇ ಯಾವ ಯಾವ ಭಾಗಗಳು ಹಾನಿಗೀಡಾಗಿವೆ ಎಂಬುದು ತಿಳಿದು ಬರಲಿದೆ.

ಮಳೆ ನೀರಿನಲ್ಲಿ ಮುಳುಗಿದವು ವಿತರಣೆಗೆ ಸಿದ್ಧವಾಗಿದ್ದ ಹೊಸ ಕಾರುಗಳು

ಬಹುತೇಕ ಸಂದರ್ಭಗಳಲ್ಲಿ ಮಳೆ ನೀರಿನಿಂದ ಉಂಟಾಗುವ ಪ್ರವಾಹದಲ್ಲಿ ಸಿಲುಕುವ ಕಾರುಗಳ ಎಂಜಿನ್'ಗಳಿಗೆ ಹಾನಿಯಾಗುತ್ತದೆ. ಒಂದು ವೇಳೆ ಈ ಕಾರುಗಳ ಎಂಜಿನ್ ಸಹ ಹಾನಿಗೀಡಾದರೆ ಕೋಟ್ಯಾಂತರ ರೂಪಾಯಿ ನಷ್ಟವಾಗುವುದು ಖಚಿತ.

Most Read Articles

Kannada
English summary
Tata Safari and Altroz cars submerged in rain water. Read in Kannada.
Story first published: Friday, July 23, 2021, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X