Tata Nexon: ಟಾಟಾ ನೆಕ್ಸಾನ್ ಘನ ನಿರ್ಮಾಣ ಗುಣಮಟ್ಟಕ್ಕೆ ಮಾಲೀಕ ಸುಸ್ತು: ಬೇಡವೇ ಬೇಡ ಗುರೂ...

ಕಾರು ಮಾಲೀಕರಿಗೆ ಕಾರು ನಿರ್ವಹಣೆ ಮಾಡುವುದಕ್ಕಿಂತಲೂ ಅದನ್ನು ಹೊರಗಡೆ ತೆಗೆದುಕೊಂಡು ಹೋದಾಗ ಸುರಕ್ಷಿತವಾಗಿ ಪಾರ್ಕ್ ಮಾಡುವುದೇ ದೊಡ್ಡ ಸವಾಲಾಗಿರುತ್ತದೆ. ಒಂದು ಸಣ್ಣ ಗೀರು ಬಿದ್ದರೂ ಮಾಲೀಕರಿಗೆ ಅದನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ. ಅಂಥದರಲ್ಲಿ ನಿಲ್ಲಿಸಿರುವ ಕಾರಿಗೆ ಅಪಘಾತವಾಗಿ ನಜ್ಜುಗುಜ್ಜಾದರೆ ಪರಿಸ್ಥಿತಿಯೇನು? ಮಾಲೀಕರಿಗೆ ಹೇಳತೀರದ ಸಂಕಟ ಎದುರಾಗುತ್ತದೆ. ಆದರೆ ಈ ಭಯ, ಸಂಕಟ ಟಾಟಾ (Tata) ಕಾರುಗಳ ಮಾಲೀಕರಿಗೆ ಬೇಡ. ಏಕೆಂದರೆ ಇತ್ತೀಚೆಗೆ ಪಾರ್ಕಿಂಗ್ ಸೌಲಭ್ಯದಲ್ಲಿ ಲಿಫ್ಟ್ ವಿಫಲಗೊಂಡು ನೆಕ್ಸಾನ್ ಎಸ್‌ಯುವಿ ಮೇಲೆ ಬಿದ್ದ ನಂತರವೂ ಕಾರು ಸುರಕ್ಷಿತವಾಗಿರುವುದು ಮಾಲೀಕರನ್ನು ಅಚ್ಚರಿಗೊಳಿಸಿದೆ.

ಟಾಟಾ ಕಾರುಗಳು ತಮ್ಮ ನಿರ್ಮಾಣ ಗುಣಮಟ್ಟದಿಂದಾಗಿ ಗ್ರಾಹಕರಲ್ಲಿ ಹೆಚ್ಚಾಗಿ ಜನಪ್ರಿಯವಾಗಿವೆ. ಈ ಹಿಂದೆಯೂ ಟಾಟಾ ಕಾರುಗಳ ಮಾಲೀಕರು ತಮ್ಮ ವಾಹನದೊಂದಿಗಿನ ಅನುಭವಗಳನ್ನು ಹಂಚಿಕೊಂಡ ಹಲವಾರು ನಿದರ್ಶನಗಳನ್ನು ನಾವು ನೋಡಿದ್ದೇವೆ. ದೊಡ್ಡ ಅಪಘಾತಗಳಲ್ಲಿಯೂ ಟಾಟಾ ಕಾರಿನಲ್ಲಿದ್ದ ಚಾಲಕರು ಮತ್ತು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾದ ಪ್ರಕರಣಗಳಿವೆ.

safest-car-in-india-tata-nexon-build-quality-proved-again

ಇತ್ತೀಚೆಗೆ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಸೌಲಭ್ಯದಲ್ಲಿ ಲಿಫ್ಟ್ ವಿಫಲಗೊಂಡು ನೆಕ್ಸಾನ್ ಎಸ್‌ಯುವಿ ಮೇಲೆ ಬಿದ್ದ ನಂತರವೂ ಕಾರಿಗೆ ಏನೂ ಅಗಿಲ್ಲ. ಈ ಕುರಿತ ಚಿತ್ರಗಳನ್ನು ಶೈಲಯಾ ಜಗ್ಗಿ ಎಂಬುವರು ತಮ್ಮ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಟಾಟಾ ನೆಕ್ಸಾನ್ ಎಸ್‌ಯುವಿ ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿದೆ. ಘಟನೆ ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಸಂಭವಿಸಿದೆ.

ಮಾಲೀಕರು ಹಂಚಿಕೊಂಡ ಚಿತ್ರದಲ್ಲಿ, ಲಿಫ್ಟ್ ಮತ್ತು ಅದರ ಮೇಲಿದ್ದ ಮತ್ತೊಂದು ಕಾರಿನ ತೂಕವನ್ನು ತಡೆಯುವಲ್ಲಿ ನೆಕ್ಸಾನ್ ಯಶಸ್ವಿಯಾಗಿದೆ. ತೂಕದಿಂದಾಗಿ ಟೈರ್‌ಗಳು ಮತ್ತು ಸಸ್ಪೆಂಷನ್ ಕುಸಿತಗೊಂಡಿರುವುದನ್ನು ನಾವು ನೋಡಬಹುದು. ಕಾರಿನ ಮೇಲೆ ಸಣ್ಣ ಗಾಯಗಳಾಗಿದ್ದವು, ಆದರೆ ಇದು ದೊಡ್ಡ ಹಾನಿಯೇನಲ್ಲ. ಕಾರಿನ ಈ ಗುಣಮಟ್ಟಕ್ಕೆ ಮಾಲೀಕರು ತುಂಬಾ ಪ್ರಭಾವಿತರಾಗಿದ್ದಾರೆ.

safest-car-in-india-tata-nexon-build-quality-proved-again

ಟಾಟಾ ನೆಕ್ಸಾನ್: ಚಿತ್ರದಲ್ಲಿ ಕಂಡುಬರುವ ನೆಕ್ಸಾನ್ ಪ್ರಿ-ಫೇಸ್ ಲಿಫ್ಟ್ ಆವೃತ್ತಿಯಾಗಿದ್ದು, ಈ ಟಾಟಾ ನೆಕ್ಸಾನ್ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಸಬ್ - 4 ಮೀಟರ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಆವೃತ್ತಿಗಳೊಂದಿಗೆ ಲಭ್ಯವಿದೆ. ಟಾಟಾ ನೆಕ್ಸಾನ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ ಭಾರತೀಯ ತಯಾರಕರಿಂದ ನೆಕ್ಸಾನ್ ಮೊದಲ ಮೇಡ್ ಇನ್ ಇಂಡಿಯಾ ಕಾರಾಗಿದೆ. ಈ ಪರೀಕ್ಷಾ ಫಲಿತಾಂಶವು ವಾಸ್ತವವಾಗಿ ಅನೇಕ ಗ್ರಾಹಕರನ್ನು ಅದರತ್ತ ಸೆಳೆದಿದೆ. ಈ ಹಿಂದೆ ಟಾಟಾ ನೆಕ್ಸಾನ್ ಅಪಘಾತಗಳ ಅನೇಕ ವೀಡಿಯೊಗಳು ಮತ್ತು ಚಿತ್ರಗಳು ಬಂದಿವೆ. ಇದು ಎಸ್‌ಯುವಿಯ ಗಟ್ಟಿಮುಟ್ಟಾದ ನಿರ್ಮಾಣ ಗುಣಮಟ್ಟವನ್ನು ಸಾಭೀತುಪಡಿಸಿದೆ.

safest-car-in-india-tata-nexon-build-quality-proved-again

ಟಾಟಾ ಕಾರುಗಳು ಈಗ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಅದರಲ್ಲೂ ಈ ನೆಕ್ಸಾನ್ ಎಸ್‌ಯುವಿ ಸದ್ಯ ತುಂಬಾ ಮಾರಾಟ ಕಾಣುವ ಎಸ್‌ಯುವಿಯಾಗಿ ಭಾರತದಲ್ಲಿ ಅಗ್ರಸ್ಥಾನದಲ್ಲಿದೆ. ಇದರ ಘನ ನಿರ್ಮಾಣ ಗುಣಮಟಕ್ಕೆ ಇದೀಗ ಮತ್ತೊಂದು ಸಾಭೀತುಪಡಿಸುವಂತೆ ಈ ಸುದ್ದಿ ಭಾರತವೆಲ್ಲಾ ಹರಿದಾಡುತ್ತಿದ್ದು, ಟಾಟಾ ಮೋಟಾರ್ಸ್‌ಗೆ ಜನಪ್ರಿಯೆ ಹೆಚ್ಚಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 29, 2025, 13:56 [IST]
English summary
Safest car in india tata nexon build quality proved again
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+