Saina Nehwal: ಸೈನಾ ನೆಹ್ವಾಲ್‌ರಿಂದ 1.71 ಕೋಟಿಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿ, ವಿಶೇಷತೆಗಳೇನು?
ದೇಶದ ಪ್ರಖ್ಯಾತ ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ಸ್ ಪದಕ ವಿಜೇತೆ ಸೈನಾ ನೆಹ್ವಾಲ್ (Saina Nehwal) ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ಅದ್ಬುತ ಆಟದಿಂದ ಎಲ್ಲರ ಗಮನ ಸೆಳೆಯುವ ಮೂಲಕ ಭಾರೀ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ, ದುಬಾರಿ ಬೆಲೆಯ ಕಾರು ಖರೀದಿಸುವುದರೊಂದಿಗೆ ಸೈನಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ನೂತನ ಕಾರು ಕೊಂಡುಕೊಂಡಿರುವ ಕುರಿತು ಸ್ವತಃ ಸೈನಾ ನೆಹ್ವಾಲ್ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಸೈನಾ, ತಮ್ಮ ಪತಿ ಪರುಪಳ್ಳಿ ಕಶ್ಯಪ್ ಅವರೊಂದಿಗೆ ಹೊಸ ಮರ್ಸಿಡಿಸ್ ಕಾರನ್ನು ವಿತರಣೆ ಪಡೆಯುತ್ತಿರುವುದನ್ನು ನೋಡಬಹುದು. ನೆಟ್ಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸೈನಾ, ಮರ್ಸಿಡಿಸ್-ಬೆಂಜ್ ಎಎಂಜಿ ಜಿಎಲ್ಇ 53 (Mercedes-Benz AMG GLE 53) ಕಾರನ್ನು ಕೊಂಡುಕೊಂಡಿದ್ದಾರೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಈ ಕಾರು ರೂ.1.71 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಹೊಂದಿದೆ. ಇದು, 3 - ಲೀಟರ್ 6 - ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿದ್ದು, 430 PS ಗರಿಷ್ಠ ಪವರ್ ಹಾಗೂ 520 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 9 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
ಮರ್ಸಿಡಿಸ್-ಬೆಂಜ್ ಎಎಂಜಿ ಜಿಎಲ್ಇ 53 ಕಾರು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಕೇವಲ 5.3 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದ್ದು, 250 kmph ಟಾಪ್ ಸ್ವೀಡ್ ಹೊಂದಿದೆ. 5 - ಆಸನ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯುತ್ತದೆ.

ಈ ಕಾರಿನ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, 12.3 - ಇಂಚಿನ ಡಿಸ್ಪ್ಲೇಗಳು (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಡ್ರೈವರ್ ಡಿಸ್ಪ್ಲೇಗಾಗಿ) ಆಕರ್ಷಕ ಸನ್‌ರೂಫ್, 4 - ಜೋನ್ ಕ್ಲೇಮೇಟ್ ಕಂಟ್ರೋಲ್, ಕನೆಕ್ಟ್ದ್ ಕಾರ್ ಟೆಕ್, ಹೆಡ್ - ಅಪ್ ಡಿಸ್ಪ್ಲೇ ಮತ್ತು 64 - ಕಲರ್ ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.
ಸುರಕ್ಷತೆಯ ದೃಷ್ಟಿಯಿಂದ ಮರ್ಸಿಡಿಸ್-ಬೆಂಜ್ ಎಎಂಜಿ ಜಿಎಲ್ಇ 53 (Mercedes-Benz AMG GLE 53) ಕಾರು, ಮಲ್ಟಿಪಲ್ ಏರ್‌ಬ್ಯಾಗ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಬ್ರೇಕ್ ಅಸಿಸ್ಟ್, 360 - ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್ - ಸ್ಪಾಟ್ ಅಸಿಸ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿಗೆ ಪೋರ್ಷೆ ಕಯೆನ್ನೆ ಕೂಪೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ.
ಸೈನಾ ನೆಹ್ವಾಲ್ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಅವರ ಬಳಿ ಬಿಎಂಡಬ್ಲ್ಯೂ 3 ಸೀರಿಯಸ್ (BMW 3 Series) ಕಾರು ಇದೆ. ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಇದು ರೂ.71.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. 3 - ಲೀಟರ್ 6 - ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.
ಮಿನಿ ಕೂಪರ್ ಕಾರನ್ನು ಸಹ ಸೈನಾ ನೆಹ್ವಾಲ್ ಹೊಂದಿದ್ದಾರೆ. ಈ ಕಾರು, 3 ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಅವುಗಳೆಂದರೆ, ಮಿನಿ ಕೂಪರ್ ಕಂಟ್ರಿಮ್ಯಾನ್ (ರೂ.48.10 ಲಕ್ಷದಿಂದ ರೂ.49 ಲಕ್ಷ), ಮಿನಿ ಕೂಪರ್ 3 ಡೋರ್ (ರೂ.42.70 ಲಕ್ಷ), ಮಿನಿ ಕೂಪರ್ ಎಸ್ಇ (ರೂ.53.50 ಲಕ್ಷ).
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications