ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಯುವಜನತೆಗೆ ಬೈಕ್ ರೈಡ್ ಕ್ರೇಜ್ ಹೆಚ್ಚು. ಇದು ಸಹಜ ಕೂಡ. ಬೈಕ್ ರೈಡಿಂಗ್ ಆನಂದಿಸುತ್ತಾ, ಪ್ರವಾಸಿ ತಾಣಗಳನ್ನು ಸಂದರ್ಶಿಸುವುದು ಟ್ರೆಂಡ್ ಆಗಿದೆ. ಇಂದು ಕೇವಲ ಯುವಕರಿಗೆ ಮಾತ್ರವಲ್ಲದೇ ಯುವತಿಯರೂ ಕೂಡ ಬೈಕ್ ರೈಡ್ ಕ್ರೇಜ್ ಅನ್ನು ಹೊಂದಿದ್ದಾರೆ.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಇಂದಿನ ಯುವತಿಯರಲ್ಲಿ ವಾಹನ ಚಾಲನೆಯ ಕ್ರೇಜ್ ವಿಶೇಷವೇನಲ್ಲ. ಆದರೆ ಒಬ್ಬಂಟಿಯಾಗಿ ಯುವತಿಯೊಬ್ಬಳು ಸಾವಿರಾರೂ ಕಿ,ಮೀ ಬೈಕ್ ರೈಡ್ ತೆರಳುವುದು ಒಂದು ಸಾಹಸ. ಆದರೂ ಮಹಿಳೆಯರು ಪ್ರತೀಬಾರಿಯು ಯಾರಿಗೂ ಕಮ್ಮಿಇಲ್ಲ ಎಂದು ಸಾಬೀತು ಮಾಡುತ್ತಾ ಬಂದಿದ್ದಾರೆ. ಹುಡುಗರಂತೆ ಹುಡಿಗಿರೂ ಕೂಡ ಒಬ್ಬಂಟಿಯಾಗಿ ದೇಶ ಸುತ್ತಬಹುದು ಎಂಬುವುದಕ್ಕೆ ನಮ್ಮ ಕರ್ನಾಟಕದ ಈ ಹುಡಿಗಿಯೇ ಉತ್ತಮ ಉದಾಹರಣೆ. ಇವರು ನಮ್ಮ ಕುಂದಾಪುರದ ಸಾಕ್ಷಿ ಹೆಗಡೆ

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಹೊನ್ನವಾರದ ಶಿವರಾಮ ಹೆಗ್ಡೆ ಹಾಗೂ ಕುಂದಾಪುರ ಮೂಲದ ತಾಯಿ ಪುಷ್ಪಾ ಇವರ 3ನೇ ಮಗಳು ಸಾಕ್ಷಿ ಹೆಗಡೆ. ಇವರು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ, ಮುಂದೆ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿದ್ದಾರೆ.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಸಾಕ್ಷಿ ಹೆಗಡೆ ಅವರು ಈ ವರ್ಷದ ಮೇ.25 ರಿಂದ 15 ದಿನಗಳ ಕಾಲ ಕುಂದಾಪುರದಿಂದ ಕಾಶ್ಮೀರಕ್ಕೆ ಸುಮಾರು 6 ಸಾವಿರ ಕಿಲೋಮೀಟರ್ ದೂರದಷ್ಟು ಒಬ್ಬಂಟಿಯಾಗಿ ಪ್ರಯಾಣಿಸಿದ್ದರು. ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಸುದೀರ್ಘ‌ ಪ್ರಯಾಣವನ್ನು ಮಾಡಿದ್ದರು.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಮೇ.25 ರಂದು ಬೆಳಿಗ್ಗೆ 7.30ಕ್ಕೆ ಕುಂಭಾಸಿ ಮನೆಯಿಂದ ಹೊರಟು ಸಂಜೆ 5 ಗಂಟೆಯ ವೇಳೆಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸುಮಾರು 520 ಕೀಮಿ ದೂರ ಬೈಕ್ ರೈಡ್ ಮಾಡಿಕೊಂಡು ಮೊದಲ ದಿನ ತೆರಳಿದ್ದರು. ನಂತರ 15 ದಿನಗಳಲ್ಲಿ ಸಾವಿರ ಕಿಲೋಮೀಟರ್ ದೂರವನ್ನು ಕವರ್ ಮಾಡಿದ್ದಾರೆ.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಈ ಸುದೀರ್ಘ‌ ಪ್ರಯಾಣದ ಪ್ರಮುಖ ಉದ್ದೇಶ ಮಹಿಳಾ ಸಶಕ್ತೀಕರಣವಾಗಿತ್ತು. ಮಹಿಳೆಯರಿಗೆ ಉನ್ನತ ವ್ಯಾಸಂಗ ಹಾಗೂ ಉದ್ಯೋಗ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಗೆ ಅಡ್ಡಿ ಆತಂಕ ಇರುತ್ತದೆ. ಇದಕ್ಕಾಗಿ ಒಂಟಿ ಯುವತಿಯ ಪ್ರಯಾಣದ ಕಥನ ಹೇಳುವ ಮೂಲಕ ಧೈರ್ಯ ತುಂಬಿಸಲಿ ಎನ್ನುವುದು ಉದ್ದೇಶ ಎಂದು ಹೇಳಿದ್ದರು.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಈ ಬಾರಿ ಕ್ಲೀನ್‌ ಕರ್ನಾಟಕ, ಗ್ರೀನ್‌ ಕರ್ನಾಟಕ ಎಂಬ ಧ್ಯೇಯದೊಂದಿಗೆ ಒಬ್ಬಂಟಿಯಾಗಿ ಇಡೀ ರಾಜ್ಯ ಸುತ್ತುತ್ತಿದ್ದಾರೆ. ಅಗಸ್ಟ್ 16ರಿಂದ ಹೊರಟು ನವೆಂಬರ್ 17ರ ವರೆಗೆ ರಾಜ್ಯದ 31 ಜಿಲ್ಲೆಗಳನ್ನು ಸುತ್ತಲಿದ್ದಾರೆ. ಇದೀಗ ಅವರು ಎರಡನೇ ಜಿಲ್ಲೆಯಾಗಿ ಹಾವೇರಿಯನ್ನು ತಲುಪಿದ್ದಾರೆ.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಸಾಕ್ಷಿ ತಮ್ಮ ಸ್ವಂತ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಆಗಿದೆ. ಈ ಬೈಕಿನ ಬಗ್ಗೆ ಹೇಳುವುದಾದರೆ, ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯನ್ನು ಪಲ್ಸರ್ ಎನ್ಎಸ್ 160 ಮಾದರಿಯನ್ನು ಆಧರಿಸಿ ಅಭಿವೃದ್ದಿಪಡಿಸಿರುವ ಬಜಾಜ್ ಆಟೋ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ನೀಡಿದ್ದಾರೆ.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಫೀಚರ್ಸ್ ಮತ್ತು ಪರ್ಫಾಮೆನ್ಸ್‌ನಲ್ಲಿ ಈ ಬೈಕ್ ತನ್ನ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಈ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಬರ್ನ್ಟ್ ರೆಡ್, ಪ್ಯೂಟರ್ ಗ್ರೇ, ಸ್ಯಾಫೈರ್ ಬ್ಲೂ ಮತ್ತು ಆರೆಂಜ್ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಎನ್ಎಸ್125 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಈ ಪಲ್ಸರ್ ಎನ್ಎಸ್125 ಬೈಕಿನಲ್ಲಿ ಸಿಗ್ನಿಚರ್ ಹೆಡ್‌ಲ್ಯಾಂಪ್ ಜೊತೆ ಟ್ವಿನ್ ಪೈಲೆಟ್ ಲ್ಯಾಂಪ್ಸ್, ಟ್ವಿನ್ ಸ್ಟ್ರೀಪ್ ಎಲ್ಇಡಿ ಟೈಲ್‌ಲ್ಯಾಂಪ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಕಾಂಬಿ-ಬ್ರೇಕಿಂಗ್ ಸಿಸ್ಟಂ ಮತ್ತು ಆಕರ್ಷಕ ಬೆಲ್ಲಿ ಪ್ಯಾನ್ ಅನ್ನು ಒಳಗೊಂಡಿದೆ. ಈ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕ್ಲಸ್ಟರ್ ನಲ್ಲಿ, ವೇಗ, ಓಡೋ ಮೀಟರ್, ಫ್ಯೂಯಲ್ ಗೇಜ್ ಮತ್ತು ಮುಂತಾದ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಇನ್ನು ಈ ಹೊಸ ಪಲ್ಸರ್ ಎನ್ಎಸ್125 ಬೈಕಿನಲ್ಲಿ 124.45 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 11.6 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 11 ಎನ್ಎಂ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಬೈಕಿನ ಸೀಟ್ 805 ಎಂಎಂ ಎತ್ತ್ರದಲ್ಲಿ ಇರಿಸಲಾಗಿದೆ. ಇನ್ನು ಈ ಬೈಕ್ 144 ಕೆಜಿ ತೂಕವನ್ನು ಹೊಂದಿದೆ.

ಬೈಕ್‌ನಲ್ಲಿ ದೇಶ ಸುತ್ತಿದ್ದಾಯ್ತು ಈಗ ರಾಜ್ಯ ಸುತ್ತಲು ಹೊರಟ ಯುವತಿ: ಈಕೆಯ ಧ್ಯೇಯ ಹಲವರಿಗೆ ಆದರ್ಶ

ಬಜಾಜ್ ಪಲ್ಸರ್ ಎನ್ಎಸ್125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ನೀಡಿದ್ದಾರೆ. ಆದರೆ ಈ 125ಸಿಸಿ ಬೈಕಿನಲ್ಲಿ ಆಕೆ ಸಾವಿರರೂ ಕಿ.ಮೀ ಪ್ರಯಾಣ ಮಾಡಿರುವುದು ನಿಜಕ್ಕೂ ಮೆಚ್ಚಬೇಕು.

Most Read Articles

Kannada
English summary
Sakshi hegade solo bike ride 31 districts details
Story first published: Monday, October 17, 2022, 19:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X