ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಖ್ಯಾತ ಬಾಲಿವುಡ್ ನಟರಾದ ಸಲ್ಮಾನ್‍‍ಖಾನ್‍‍ರವರು ಆಟೋಮೊಬೈಲ್ ಪ್ರಿಯರಾಗಿದ್ದಾರೆ. ಅವರ ಬಳಿ ದುಬಾರಿ ಬೆಲೆಯ ಹೈ ಎಂಡ್ ಲಗ್ಷುರಿ ಕಾರು ಹಾಗೂ ಬೈಕ್‍‍ಗಳಿವೆ. ಸಲ್ಮಾನ್‍‍ಖಾನ್‍‍ರವರು ಎಸ್‍ಯುವಿಗಳನ್ನು ಹೆಚ್ಚು ಇಷ್ಟಪಡುತ್ತಾರೆ.

ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಇತ್ತೀಚಿಗಷ್ಟೇ ಅವರು ಲ್ಯಾಂಡ್ ರೋವರ್ ರೇಂಜ್ ರೋವರ್ ಎಲ್‍‍ಡಬ್ಲ್ಯು‍‍ಬಿ ಎಸ್‍‍ಯುವಿಯನ್ನು ಖರೀದಿಸಿದ್ದಾರೆ. ಈ ಹಿಂದೆ ಮಾರುತಿ ಸುಜುಕಿ ಕಂಪನಿಯ ಜಿಪ್ಸಿ ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು. ಈಗ ಸಲ್ಮಾನ್‍‍ಖಾನ್‍‍ರವರು ಮಾಡಿಫೈ ಮಾಡಲಾದ ಜಿಪ್ಸಿ ಕಾರಿನಲ್ಲಿ ಬಾಂದ್ರಾದ ಬಳಿ ಕಾಣಿಸಿಕೊಂಡಿದ್ದಾರೆ.

ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಈ ಜಿಪ್ಸಿ ಕಾರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಫೈಗೊಳಿಸಲಾಗಿದೆ. ಈ ಕಾರಿನ ಮಾಲೀಕರು ಯಾರು ಎಂಬುದು ತಿಳಿದು ಬಂದಿಲ್ಲ. ಬಿಳಿ ಬಣ್ಣದ ಈ ಜಿಪ್ಸಿ ಕಾರಿನಲ್ಲಿ ಆಫ್ ರೋಡ್ ಬಂಪರ್, ಆಫ್ ರೋಡ್ ಬುಲ್‍‍ಬಾರ್, ಮುಂಭಾಗದಲ್ಲಿ ಟೋ ಹುಕ್, ಎಲೆಕ್ಟ್ರಿಕ್ ವಿಂಚ್, ಎಲ್‍ಇಡಿ ಆಕ್ಸಿಲರಿ ಲ್ಯಾಂಪ್, ಆಫ್ಟರ್ ಮಾರ್ಕೆಟ್ ಹೆಡ್‍‍‍ಲ್ಯಾಂಪ್‍‍ಗಳಿವೆ.

ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಈ ಕಾರಿನಲ್ಲಿ ಅಳವಡಿಸಲಾಗಿರುವ ಮಡ್ ಟೆರೇನ್ ಟಯರ್‍‍ಗಳು ಯಾವುದೇ ರೀತಿಯ ಆಫ್ ರೋಡ್‍‍ನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಟಯರ್‌ಗಳಲ್ಲಿ ಡೀಪ್ ಡಿಶ್ ಆಫ್-ರೋಡ್ ಸ್ಪೆಕ್ ರಿಮ್‌ಗಳನ್ನು ಜೋಡಿಸಲಾಗಿದ್ದು ಅವು ರೆಗ್ಯುಲರ್ ವ್ಹೀಲ್‍‍ಗಳಿಗಿಂತ ಹೆಚ್ಚು ಬಲಶಾಲಿಯಾಗಿವೆ.

ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಇದರಿಂದ ರಫ್ ರಸ್ತೆಗಳಲ್ಲಿ ಕಾರು ಆರಾಮವಾಗಿ ಚಲಿಸುತ್ತದೆ. ಡ್ರೈವರ್ ಬಳಿ ಸ್ನಾರ್ಕೆಲ್ ಅಳವಡಿಸಲಾಗಿದೆ. ಇದರಿಂದಾಗಿ ಈ ಕಾರು ನೀರಿನಲ್ಲಿ ಯಾವುದೇ ತೊಂದರೆಯಿಲ್ಲದಂತೆ ಚಲಿಸಲಿದೆ. ಆಳವಾದ ನದಿಗಳಲ್ಲಿ ಹಾಗೂ ನೀರು ನಿಂತಿರುವ ಸ್ಥಳಗಳಲ್ಲಿ ಎಂಜಿನ್‍‍ಗೆ ಯಾವುದೇ ತೊಂದರೆಯಾಗದಂತೆ ಚಲಿಸುತ್ತದೆ.

ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಈ ಜಿಪ್ಸಿಯ ಹಿಂಭಾಗವು ಹಾರ್ಡ್ ಟಾಪ್ ಅನ್ನು ಹೊಂದಿದೆ. ಫ್ಲೇರ್ಡ್ ವ್ಹೀಲ್ ಆರ್ಕ್ ಸೇರಿದಂತೆ ಹಲವಾರು ಮಾಡಿಫಿಕೇಶನ್‍‍ಗಳನ್ನು ಮಾಡಲಾಗಿದೆ. ಈ ಕಾರ್ ಅನ್ನು ಮಾಲೀಕರ ಅಭಿರುಚಿಗೆ ತಕ್ಕಂತೆ ಮಾಡಿಫೈಗೊಳಿಸಲಾಗಿದೆ. ನಟ ಜಾನ್ ಅಬ್ರಹಾಂ ಸಹ ಮಾರುತಿ ಸುಜುಕಿ ಜಿಪ್ಸಿ ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಮಾರುತಿ ಸುಜುಕಿ ಕಂಪನಿಯು ಜಿಪ್ಸಿ ಕಾರ್ ಅನ್ನು ಕಳೆದ ವರ್ಷ ಅಧಿಕೃತವಾಗಿ ಸ್ಥಗಿತಗೊಳಿಸಿತ್ತು. ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಸುರಕ್ಷತಾ ಮಾನದಂಡಗಳನ್ನು ಪಾಲಿಸಲು ವಿಫಲವಾದ ಕಾರಣಕ್ಕೆ ಈ ಕಾರ್ ಅನ್ನು ಸ್ಥಗಿತಗೊಳಿಸಲಾಯಿತು.

ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಈ ಕಾರು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಜಿಪ್ಸಿ ಕಡಿಮೆ ತೂಕವನ್ನು ಹೊಂದಿರುವ 4x4ನ ಪೆಟ್ರೋಲ್ ಪವರ್ ಎಸ್‍‍ಯುವಿಯಾಗಿದೆ. ಇದು ಯಾವುದೇ ರಸ್ತೆಯಲ್ಲಿಯೂ ಸರಾಗವಾಗಿ ಚಲಿಸುತ್ತದೆ. ಈ ಕಾರ್ ಅನ್ನು ಸುಲಭವಾಗಿ ಮಾಡಿಫೈಗೊಳಿಸಬಹುದಾಗಿದೆ.

ಮಾಡಿಫೈ ಜಿಪ್ಸಿಯಲ್ಲಿ ಕಾಣಿಸಿಕೊಂಡ ನಟ ಸಲ್ಮಾನ್‍‍ಖಾನ್

ಈ ಕಾರಣಕ್ಕೆ ಭಾರತದಲ್ಲಿರುವ ಪ್ಯಾರಾ ಮಿಲಿಟರಿ ಪಡೆಗಳು ಈ ಕಾರ್ ಅನ್ನು ಹೆಚ್ಚು ಬಳಸುತ್ತವೆ. ಮಾರುತಿ ಸುಜುಕಿ ಕಂಪನಿಯು ಜಿಪ್ಸಿ ಕಾರಿನ ಬದಲಿಗೆ ಬೇರೆ ಕಾರ್ ಅನ್ನು ಬಿಡುಗಡೆಗೊಳಿಸಿಲ್ಲ. ಆದರೆ ಮುಂದಿನ ವರ್ಷ ಜಿಪ್ಸಿ ಕಾರಿನಂತಿರುವ ಹೊಸ ಜಿಮ್ನಿ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Article Published On: Friday, March 6, 2020, 13:48 [IST]
English summary
Salman Khan driving modified Maruti Gypsy in Mumbai. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+