ಸುಜುಕಿ ವೇದಿಕೆಯಲ್ಲಿ ಸಲ್ಲು ಸಲ್ಲಾಪ
ಅಂದೊಂದು ವಿಧ್ಯುಕ್ತ ಸಮಾರಂಭ. ದೇಶದ ಪ್ರತಿಷ್ಠಿತ ಮಾಧ್ಯಮ ಮಿತ್ರರು ಅಲ್ಲಿ ನೆರೆದಿದ್ದರು. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದವರು ಬೇರೆ ಯಾರು ಅಲ್ಲ. ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿ ಮೋಟಾರುಸೈಕಲ್.
ಇವನ್ನೂ ಓದಿ: ನಟಿ ಪರಿಣಿತಿ ಮನಗೆದ್ದ ಸುಜುಕಿಯ ಹೊಸ 'ಲೆಟ್ಸ್' ಸ್ಕೂಟರ್
ಇವನ್ನೂ ಓದಿ: ಸುಜುಕಿ ಜಿಕ್ಸರ್ 150ಸಿಸಿ ಬೈಕ್‌ನಲ್ಲಿ ಅಂತದ್ದೇನಿದೆ?
ಸುಜುಕಿ ಹೆಸರು ಕೇಳಿದಾಕ್ಷಣ ಅಲ್ಲಿ ನಡೆದಿದ್ದು ಅನಾವರಣ ಅಥವಾ ಲಾಂಚ್ ಸಮಾರಂಭ ಎಂಬುದು ಸ್ಪಷ್ಟ. ಅಷ್ಟಕ್ಕೂ ಬಾಲಿವುಡ್‌ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಹಾಗೂ ಸಂಸ್ಥೆಯ ಪ್ರಧಾನ ಪ್ರಚಾರ ರಾಯಭಾರಿ ಕೂಡಾ ಆಗಿರುವ ಸಲ್ಮಾನ್ ಖಾನ್ ಕೂಡಾ ಹಾಜರಿದ್ದರು. (ಮುಂದೆ ಓದಿ...)

ಅಲ್ಲಿ ಸಲ್ಮಾನ್ ಉಪಸ್ಥಿತಿ ಯಾಕೆ ಅಂದುಕೊಂಡ್ರಾ? ಅದೇರಿ ಸುಜುಕಿಯ ನೂತನ 150 ಸಿಸಿ ಜಿಕ್ಸರ್ ಅನಾವರಣ ಸಮಾರಂಭ. ಅಲ್ಲಿ ಕೇವಲ ಬೈಕ್ ಮಾತ್ರ ಅನಾವರಣ ಕಂಡಿಲ್ಲ. ಬದಲಾಗಿ ಸುಜುಕಿ ನೂತನ ಲೆಟ್ಸ್ 110 ಸಿಸಿ ಕೂಡಾ ಅನಾವರಣಗೊಳಿಸಲಾಗಿತ್ತು. ಈ ಎರಡು ಆವೃತ್ತಿಗಳು ಮುಂಬರುವ ಜೂನ್ ತಿಂಗಳಲ್ಲಿ ದೇಶದ ರಸ್ತೆ ಪ್ರವೇಶಿಸಲಿದೆ.

ಅಂದ ಮಾತ್ರಕ್ಕೆ ಸುಜುಕಿ ಲೆಟ್ಸ್ ಬಿಡುಗಡೆ ಮಾಡಲು ಸಂಸ್ಥೆಯ ಫಿಮೇಲ್ ಪ್ರಚಾರ ರಾಯಭಾರಿ ಪರಿಣಿತಿ ಚೋಪ್ರಾ ಅವರಿಗೆ ವಿಶೇಷ ಆಹ್ವಾನ ಕೊಡಲಾಗಿತ್ತು. ಹಳದಿ ಉಡುಗೆ ತೊಟ್ಟ ಈಕೆ ನೋಡಿದಾಕ್ಷಣ ಸಲ್ಲು ಮುಖದಲ್ಲಿ ಮಂದಹಾಸ ಮೊಳಗಿತ್ತು.

ಇನ್ನು ಇಬ್ಬರು ಒಂದೇ ವೇದಿಕೆಯನ್ನು ಹಂಚಿಕೊಂಡ ಮಾತ್ರಕ್ಕೆ ಅಲ್ಲೇನೋ ನಡೆದು ಹೋಗಿತ್ತು? ಛಾಯಾಗ್ರಾಹಕರು ಮಾತ್ರ ಬೈಕ್, ಸ್ಕೂಟರುಗಳನ್ನು ಬಿಟ್ಟು ಸಲ್ಮಾನ್-ಪರಿಣಿತಿ ಅವರ ವಿವಿಧ ಭಂಗಿಗಳ ಫೋಟೊ ಕ್ಲಿಕ್ಕಿಸುವುದರಲ್ಲೇ ಮಗ್ನವಾಗಿದ್ದರು.

ಒಂದು ಕ್ಷಣಕ್ಕೆ ಅದೇನು ಅನಾವರಣ ಈವೆಂಟ್ ಆಗಿರಬಹುದೇ? ಎಂಬುದೂ ಅನುಮಾನ ಮೂಡಿಸುವಂತಿತ್ತು. ಅದು ಏನೇ ಇರಲಿ ಸೆಲೆಬ್ರಿಟಿಗಳಲ್ಲಿ ಇಂತಹ ವಿಚಾರ ಮಾಮೂಲಿ ಬಿಡಿ. ಇನ್ನು ಆಯೋಜಕರರಂತೂ ಮೌನಕ್ಕೆ ಶರಣಾಗಿದ್ದರು.

ಈ ಎಲ್ಲ ವಿಚಾರಗಳನ್ನು ಕೇಳಿದ ಮೇಲೆ ಸಲ್ಮಾನ್ ಯಾಕೆ ಇದುವರೆಗೆ ಮದುವೆಯಾಗಲಿಲ್ಲ? ಎಂದು ನಮಗೆ ಮರು ಪ್ರಶ್ನೆ ಮಾತ್ರ ಹಾಕದಿರಿ.

ಅಂತೂ ಇಂತೂ ಸುಜುಕಿ ನೂತನ ಬೈಕ್ 'ಜಿಕ್ಸರ್' ಹಾಗೂ ಸ್ಕೂಟರ್ 'ಲೆಟ್ಸ್' ಸ್ಕೂಟರ್ ಅನಾವರಣ ಸಮಾರಂಭ ಎಲ್ಲವೂ ಮಂಗಳಕರವಾಗಿ ಮುಗಿದು ಹೋಗಿರುವುದು ಸಹ ಇದೀಗ ಇತಿಹಾಸ.

ಈ ಮೊದಲೇ ತಿಳಿಸಿರುವಂತೆಯೇ ಸುಜುಕಿಯಿಂದ ಆಗಮನವಾಗಲಿರುವ ನೂತನ ಜಿಕ್ಸರ್ 150 ಸಿಸಿ ಬೈಕ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಿದೆ.

ಇನ್ನು ಜಿಕ್ಸರ್ ಬಗ್ಗೆ ಹೇಳುವುದಾದ್ದಲ್ಲಿ ಇದು ಹೋಂಡಾ ಟ್ರಿಗರ್ ಮತ್ತು ಯಮಹಾ ಎಫ್‌ಝಡ್ ಆವೃತ್ತಿಗಳಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ. ಅಷ್ಟೇ ಯಾಕೆ ಸ್ವಲ್ಪ ಸ್ಪರ್ಧಾತ್ಮಕ ದರಗಳಲ್ಲಿ ಎಂಟ್ರಿ ಕೊಟ್ಟಲ್ಲಿ ಬಜಾಜ್ ಪಲ್ಸರ್ ಸವಾಲನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಪಡೆದುಕೊಳ್ಳಲಿದೆ.

ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಹೋಂಡಾ ಆಕ್ಟಿವಾ ಐ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಲೆಟ್ಸ್ ಎಂಟ್ರಿ ಕೊಡಲಿದೆ. ಈ ಮೂಲಕ 110 ಸಿಸಿ ವಿಭಾಗಕ್ಕೆ ಸುಜುಕಿ ಕಾಲಿಡಲಿದೆ.


Click it and Unblock the Notifications








