Just In
- 11 hrs ago
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- 12 hrs ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 13 hrs ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 14 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
Don't Miss!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- News
ಫೆಬ್ರವರಿ 4ರಂದು 313 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
100 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಿಸಿ ಅಚ್ಚರಿಗೊಳಿಸಿದ ಸ್ಕೂಲ್ ಮಕ್ಕಳು
ದೇಶದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿವೆ. ಆದರೆ ಈಗಾಗಲೇ ಮಾಲಿನ್ಯಗೊಂಡ ಪರಿಸರವನ್ನು ಸ್ವಚ್ಚಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಮನಗಂಡಿರುವ ಮಕ್ಕಳ ತಂಡವೊಂದು ಕಾರ್ಬನ್‌ನಿಂದ ಕಲುಷಿತಗೊಂಡಿರುವ ಗಾಳಿಯನ್ನು ಸ್ವಚ್ಚಗೊಳಿಸುವ ಮೂರು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಮೂವರು ಮಕ್ಕಳು ಈ ಕಾರುಗಳನ್ನು ತಯಾರಿಸಿದ್ದು, ತಲಾ ಒಂದೊಂದನ್ನು ನಿರ್ಮಿಸಿದ್ದಾರೆ. ಇವು ಬ್ಯಾಟರಿ ಚಾಲಿತ ಕಾರುಗಳಾಗಿದ್ದು ಗಾಳಿಯನ್ನು ಮಾಲಿನ್ಯಗೊಳಿಸುವುದಿಲ್ಲ, ಬದಲಿಗೆ ಸ್ವಚ್ಛಗೊಳಿಸುತ್ತವೆ. ಈ ಕಾರುಗಳು ಡಸ್ಟ್ ಫಿಲ್ಟರೇಶನ್ ಸಿಸ್ಟಮ್ (DFS) ಅನ್ನು ಒಳಗೊಂಡಿವೆ. ಇದು ವಾಹನವನ್ನು ಚಾಲನೆ ಮಾಡುವಾಗ ಗಾಳಿಯನ್ನು ಸ್ವಚ್ಛಗೊಳಿಸುತ್ತದೆ. 11 ವರ್ಷದ ವಿರಾಜ್ ಮೆಹ್ರೋತ್ರಾ, 9 ವರ್ಷದ ಆರ್ಯವ್ ಮೆಹ್ರೋತ್ರಾ, 12 ವರ್ಷದ ಗರ್ವಿತ್ ಸಿಂಗ್ ಮತ್ತು 14 ವರ್ಷದ ಶ್ರೇಯಾಂಶ್ ಮೆಹ್ರೋತ್ರಾ ಈ ಆವಿಷ್ಕಾರದ ಹಿಂದಿರುವ ಮಕ್ಕಳಾಗಿದ್ದಾರೆ.
ಲಕ್ನೋದ ರೊಬೊಟಿಕ್ ತಜ್ಞ ಮಿಲಿಂದ್ ರಾಜ್ ಅವರು ಮಕ್ಕಳ ಗುಂಪನ್ನು ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಮಾಡುತ್ತಿದ್ದರು. ದೇಶವನ್ನು ಧ್ವನಿ ಮತ್ತು ವಾಯು ಮಾಲಿನ್ಯದಿಂದ ಮುಕ್ತಗೊಳಿಸುವುದು, ಇವಿ ವಿಭಾಗದಲ್ಲಿ ಕೈಗೆಟುಕುವ ಬೆಲೆಯ ಕಾರನ್ನು ಪರಿಚಯಿಸುವುದು ಮತ್ತು ಭಾರತವು ಸ್ವಾವಲಂಬಿ ರಾಷ್ಟ್ರವಾಗಲು ಸಹಾಯ ಮಾಡುವುದು ಕಾರುಗಳ ನಿರ್ಮಾಣದ ಹಿಂದಿನ ಕಲ್ಪನೆಯಾಗಿದೆ. ಇದಕ್ಕಾಗಿ ಮಕ್ಕಳು ಕೂಡ ತುಂಬಾ ಆಸಕ್ತಿ ಹಾಗೂ ಜವಾಬ್ದಾರಿ ವಹಿಸಿದ್ದಾರೆ ಎಂದು ರೊಬೊಟಿಕ್ ತಜ್ಞ ಮಿಲಿಂದ್ ರಾಜ್ ಹೇಳಿದ್ದಾರೆ.
ಮಕ್ಕಳ ತಂಡವು ನಿರ್ಮಿಸಿದ ಮೂರು ಕಾರುಗಳ ಅತ್ಯಂತ ಗಮನಾರ್ಹ ವೈಶಿಷ್ಟ್ಯಗಳೆಂದರೆ, ಗಾಳಿಯಿಂದ ತೇಲುವ ಧೂಳಿನ ಕಣಗಳನ್ನು ಹಿಡಿಯುವ ಧೂಳಿನ ಶೋಧನೆ ವ್ಯವಸ್ಥೆ, ಒಂದೇ ಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್ ವ್ಯಾಪ್ತಿ, ಆಧುನಿಕ ವಿನ್ಯಾಸ ಮತ್ತು ಬ್ರಷ್ ಲೆಸ್ ಡೈರೆಕ್ಟ್ ಕರೆಂಟ್ ಮೋಟಾರ್ ( BLCDM) 1,000W ಮತ್ತು 1,800W ಸಾಮರ್ಥ್ಯವಿರುವುದು. ಅಲ್ಲದೇ ಈ ಕಾರುಗಳು ಅಡ್ವಾನ್ಸ್ಡ ತಂತ್ರಜ್ಞಾನವನ್ನು ಹೊಂದಿರುವುದರಿಂದ ಟೆಕ್ ವಿಭಾಗದಲ್ಲಿ ಬಹಳಷ್ಟು ಸುಧಾರಣೆಯನ್ನು ಕಂಡಿವೆ.
ಮುಂದಿನ ದಿನಗಳಲ್ಲಿ ತಂಡವು ಈ ಕಾರುಗಳನ್ನು 5Gಗೆ ಸಿದ್ಧಗೊಳಿಸುವ ಕೆಲಸ ಮಾಡಲಿದೆ. ಈ ಕಾರುಗಳ ಮತ್ತೊಂದು ಪ್ರಮುಖ ವಿಶೇಷವೆಂದರೆ ಕೇವಲ 250 ದಿನಗಳಲ್ಲಿ ನಿರ್ಮಿಸಲಾಗಿದೆ. ಅವುಗಳ ಬಹಳಷ್ಟು ಭಾಗಗಳು ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ. ಜೊತೆಗೆ ಮೂರು ಕಾರುಗಳು ವಿಭಿನ್ನ ಗಾತ್ರ, ಆಕಾರ ಮತ್ತು ವಿನ್ಯಾಸಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ಮೂರು ಆಸನಗಳು, ಇನ್ನೊಂದು ಎರಡು ಆಸನಗಳು ಮತ್ತು ಮೂರನೆಯದು ಒಂದು ಆಸನದ ವ್ಯವಸ್ಥೆಯನ್ನು ಹೊಂದಿದೆ.
ತಮ್ಮ ಆವಿಷ್ಕಾರದ ಕುರಿತು ಮಾತನಾಡಿದ ದಿ ಮಿಲೇನಿಯಮ್ ಸ್ಕೂಲ್‌ನ 10 ನೇ ತರಗತಿಯ ವಿದ್ಯಾರ್ಥಿ ಶ್ರೇಯಾಂಶ್ ಮೆಹ್ರೋತ್ರಾ, "ನಾನು ನನ್ನ ಕಾರಿಗೆ ಮುರ್ಸಿಲಾಗೊ ಎಂದು ಹೆಸರಿಸಿದ್ದೇನೆ, ಇದು ಬಾವಲಿಗೆ ಸ್ಪ್ಯಾನಿಷ್ ಹೆಸರಾಗಿದೆ. ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಕ್ರಾಂತಿಯನ್ನು ತಂದ ಎಲೋನ್ ಮಸ್ಕ್ ಅವರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಗಾಳಿಯನ್ನು ಶುದ್ಧೀಕರಿಸುವ ಈ ಬ್ಯಾಟರಿ ಚಾಲಿತ ಕಾರನ್ನು ಅಭಿವೃದ್ಧಿಪಡಿಸಲು ನನಗೆ 2 ಲಕ್ಷ ರೂ. ವೆಚ್ಚವಾಗಿದೆ ಎಂದು ತಿಳಿಸಿದ್ದಾನೆ.
ಅದೇ ರೀತಿ ಕುನ್ಸ್‌ಕಾಪ್ಸ್‌ಕೋಲನ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಗಾರ್ವಿತ್ ಸಿಂಗ್ ಮಾತನಾಡಿ, ಜಿಎಸ್ ಮೋಟಾರ್ಸ್ ಎಂಬ ಹೆಸರಿನ ತನ್ನ ಕಾರು ಪ್ರಸ್ತುತ ಲೀಡ್ ಆಸಿಡ್ ಬ್ಯಾಟರಿಯಲ್ಲಿ ಚಲಿಸುತ್ತದೆ, ಆದರೆ ಶೀಘ್ರದಲ್ಲೇ ಅದನ್ನು ಲಿಥಿಯಂ ಬ್ಯಾಟರಿಗೆ ಬದಲಾಯಿಸುವುದಾಗಿ ಹೇಳಿದ್ದಾನೆ. "ಇದು ಕಾರಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ" ಎಂದು ಸಿಂಗ್ ಹೇಳಿದ್ದಾನೆ. ಇದು ಸದ್ಯ ಟೆಸ್ಟಿಂಗ್ ಹಂತಲ್ಲಿರುವ ಕಾರಣ ಖರ್ಚಾದ ನಿಖರ ವೆಚ್ಚವನ್ನು ತಿಳಿಸಲಾಗಿಲ್ಲ ಎಂದು ಹೇಳಿದ್ದಾನೆ.
ಗಾರ್ವಿತ್ ಅವರ ಸಹಪಾಠಿಗಳಾದ ವಿರಾಜ್ ಮತ್ತು ಅಮಿತ್ ಮೆಹ್ರೋತ್ರಾ ತಮ್ಮ ಕಾರನ್ನು ನಿರ್ಮಿಸಲು ರೂ. 2.93 ಲಕ್ಷ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ವಿರಾಜ್ 6 ನೇ ತರಗತಿ ವಿದ್ಯಾರ್ಥಿಯಾಗಿದ್ದರೆ, ಅಮಿತ್ 3 ನೇ ತರಗತಿಯಲ್ಲಿ ಓದುತ್ತಿದ್ದಾನೆ. ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಮತ್ತು I.o.T ಯೊಂದಿಗೆ ಚಲನಶೀಲತೆಯನ್ನು ಪರಿವರ್ತಿಸಲು ಅತ್ಯಂತ ಕೈಗೆಟುಕುವ ವಾಹನವನ್ನು ಅಭಿವೃದ್ಧಿಪಡಿಸುವುದು ಗುಂಪಿನ ಭವಿಷ್ಯದ ಧ್ಯೇಯವಾಗಿದೆ ಎಂದು ತಜ್ಞ ಮಿಲಿಂದ್ ರಾಜ್ ಹೇಳಿದರು.