ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ
ಕರೋನಾ ವೈರಸ್ ಹರಡಬಹುದೆಂಬ ಕಾರಣಕ್ಕೆ ಶಾಲೆ ಹಾಗೂ ಕಾಲೇಜುಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳು ಮನೆಯೊಳಗೆ ಬಂಧಿಯಾಗಿದ್ದಾರೆ. ಕೆಲವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.

ಕೆಲ ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಹೊರ ಹಾಕಿದ್ದಾರೆ. ಹಳೆಯ ವಾಹನಗಳ ಬಿಡಿ ಭಾಗಗಳೊಂದಿಗೆ ವಿದ್ಯಾರ್ಥಿಗಳು ಹೊಸ ಬೈಕ್ ಹಾಗೂ ಸೈಕಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ವರದಿಗಳಾಗಿವೆ. ಈಗ ಕೇರಳದ ಕೋಝಿಕೋಡ್ ಬಳಿಯ ಕೊಯಿಲಾಂಡಿ ಪ್ರದೇಶದ ಅದ್ವೈತ್ ಎಂಬ ವಿದ್ಯಾರ್ಥಿ ಹೊಸ ಸೇರ್ಪಡೆಯಾಗಿದ್ದಾನೆ.

ಆತ ಹೊಸ ಹೊಸ ಯಂತ್ರಗಳನ್ನು ರಚಿಸಲು ಆಸಕ್ತಿ ಹೊಂದಿದ್ದಾನೆ. ಶಾಲೆಗಳು ಮುಚ್ಚಿರುವ ಈ ಸಂದರ್ಭದಲ್ಲಿ ಆತ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಹೊಸ ವಾಹನವನ್ನು ಅಭಿವೃದ್ಧಿಪಡಿಸಿದ್ದಾನೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ವಾಹನವನ್ನು ಅಭಿವೃದ್ಧಿಪಡಿಸಲು ಅದ್ವೈತ್ ಹಳೆಯ ಬೈಕ್ ಬಳಸಿದ್ದಾನೆ. ಈ ವಾಹನವನ್ನು ವಿವಿಧ ಕೃಷಿ ಕಾರ್ಯಗಳಿಗೆ ಬಳಸಬಹುದು. ಈ ವಾಹನವನ್ನು ಹುಲ್ಲು ಕೊಯ್ಯಲು ಹಾಗೂ ಕೃಷಿ ಭೂಮಿಯನ್ನು ಉಳುಮೆ ಮಾಡಲು ಬಳಸಬಹುದು.

ಈ ವಾಹನವನ್ನು ಬಿತ್ತನೆ ಬೀಜಗಳನ್ನು ಬಿತ್ತಲು ಹಾಗೂ ನೀರು ಹಾಕಲು ಸಹ ಬಳಸಬಹುದು. ಅದ್ವೈತ್ ಈ ವಾಹನವನ್ನು ಚಾಲನೆ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅದ್ವೈತ್ ನ ಅಜ್ಜ ಕೃಷಿಕರಾಗಿದ್ದು, ಭೂಮಿ ಉಳುಮೆ ಮಾಡುವಾಗ ಹಾಗೂ ಬೀಜಗಳನ್ನು ಬಿತ್ತನೆ ಮಾಡುವಾಗ ಅವರು ಎದುರಿಸಿದ ತೊಂದರೆಗಳನ್ನು ಗಮನಿಸಿದ ಅದ್ವೈತ್ ಕೃಷಿ ಕೆಲಸಕ್ಕೆ ಬಳಸುವ ವಾಹನವನ್ನು ತಯಾರಿಸಲು ಮುಂದಾಗಿದ್ದಾನೆ.

ಹೊಸ ಯಂತ್ರದ ಬಗ್ಗೆ ಮಾತನಾಡಿರುವ ಅದ್ವೈತ್ ಈ ಯಂತ್ರವನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಲು ನನಗೆ ಸುಮಾರು 6 ತಿಂಗಳು ಬೇಕಾಯಿತು. ಈ ವಾಹನದಲ್ಲಿ ಬಳಸಲಾಗಿರುವ 80%ಗಿಂತ ಹೆಚ್ಚು ಬಿಡಿಭಾಗಗಳು ಬಳಕೆಯಲ್ಲಿಲ್ಲದ ಹಳೆಯ ವಸ್ತುಗಳಾಗಿವೆ. ಈ ವಾಹನದಲ್ಲಿ ಹೀರೋ ಹೋಂಡಾ ಸ್ಪ್ಲೆಂಡರ್ ಎಂಜಿನ್ ಅಳವಡಿಸಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನಮ್ಮ ಚಿಕ್ಕಪ್ಪನ ಬೈಕಿನಲ್ಲಿದ ಎಂಜಿನ್ ಅನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ. ಈ ವಾಹನವು ಪೆಟ್ರೋಲ್ ಮೂಲಕ ಚಲಿಸುತ್ತದೆ. ಎಂಜಿನ್ ಹೊರತು ಪಡಿಸಿ ಬೇರೆ ಭಾಗಗಳು ಸೌರಶಕ್ತಿಯಿಂದ ಚಾಲನೆಯಾಗುತ್ತವೆ ಎಂದು ಹೇಳಿದ್ದಾನೆ. ಈ ವಾಹನದಲ್ಲಿ ವಾಟರ್ ಟ್ಯಾಂಕ್ ಸಹ ಅಳವಡಿಸಲಾಗಿದೆ. ಇದರಿಂದ ಬಿತ್ತನೆ ಬೀಜಗಳ ಮೇಲೆ ನೀರು ಸಿಂಪಡಿಸಲು ಅನುಕೂಲವಾಗಲಿದೆ.

ಹುಲ್ಲು ಕತ್ತರಿಸಲು ಈ ವಾಹನದಲ್ಲಿ ಕಟರ್ ಜೋಡಿಸಲಾಗಿದೆ. ಲಾಕ್ ಡೌನ್ ಅವಧಿಯನ್ನು ಸರಿಯಾಗಿ ಬಳಸಿಕೊಂಡು, ವಿವಿಧ ಕೃಷಿ ಕಾರ್ಯಗಳಿಗೆ ಬಳಸಬಹುದಾದ ವಾಹನವನ್ನು ಅಭಿವೃದ್ಧಿಪಡಿಸಿದ ಅದ್ವೈತನ ಕಾರ್ಯ ಶ್ಲಾಘನೀಯ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸೂಚನೆ: ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications