12 ಕೋಟಿ ರೂ. ಕಾರಿಗೆ ಡಿಕ್ಕಿ ಹೊಡೆದ ಸ್ಕೂಟರ್ ಸವಾರ.. ವಿಡಿಯೋ ವೈರಲ್

ಭಾರತದಲ್ಲಿ ಸೂಪರ್ ಕಾರುಗಳನ್ನು ಅತಿ ವಿರಳವಾಗಿ ನೋಡುತ್ತೇವೆ. ಆದ್ದರಿಂದಲೇ ಬಹುಕೋಟಿಯ ಕಾರುಗಳನ್ನು ಕಂಡಾಗ ಜನರು ಉತ್ಸುಕರಾಗಿ ಸಾಧ್ಯವಾದಷ್ಟು ಆ ವಾಹನಗಳಿಗೆ ಹತ್ತಿರವಾಗಲು ಬಯಸುತ್ತಾರೆ. ಇಂತಹ ಸಂದರ್ಭಗಳಲ್ಲಿ ದುಬಾರಿ ಕಾರುಗಳ ಮಾಲೀಕರಿಗೆ ಇದು ಸಮಸ್ಯೆಯಾಗುತ್ತದೆ. ಇತ್ತೀಚೆಗೆ ಸೂಪರ್‌ಕಾರ್ ಹಿಂದೆ ಬಂದ ಸ್ಕೂಟರ್‌ವೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಸ್ಕೂಟರ್ ಸವಾರ 12 ಕೋಟಿ ರೂ. ಮೌಲ್ಯದ ಮೆಕ್‌ಲಾರೆನ್ 765 ಎಲ್‌ಟಿ ಕೂಪೆಗೆ ಡಿಕ್ಕಿ ಹೊಡೆದಿದ್ದಾನೆ. ಈ ಮೆಕ್‌ಲಾರೆನ್ ಮತ್ತು ಸ್ಕೂಟರ್ ಅಪಘಾತದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೂರು ಸೆಕೆಂಡುಗಳ ಈ ಚಿಕ್ಕ ವೀಡಿಯೊದಲ್ಲಿ, ಈ 12 ಕೋಟಿ ರೂ. ಬೆಲೆಯ ಸೂಪರ್‌ಕಾರನ್ನು ಏಕ-ಪಥದ ಚಲಿಸುತ್ತಿರುವುದನ್ನು ನೋಡಬಹುದು.

scooter-rider-hits-mclaren-765lt-supercar-in-bengaluru-viral-video

ರಸ್ತೆಯು ಸಾಕಷ್ಟು ಜನಸಂದಣಿಯಿಂದ ಕೂಡಿತ್ತು, ಸ್ಕೂಟರ್ ಸವಾರ ಸೂಪರ್‌ಕಾರ್‌ನ ಹಿಂಭಾಗಕ್ಕೆ ಏಕಾ-ಏಕಿ ಅಪ್ಪಳಿಸುವುದನ್ನು ನಾವು ನೋಡಬಹುದು. ಇದು ಹೇಗೆ ಸಂಭವಿಸಿತು? ಕೆಟಿಎಂ ಡ್ಯೂಕ್ ಸವಾರನೊಬ್ಬ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಸಣ್ಣ ವೀಡಿಯೊದಲ್ಲಿ ಅಪಘಾತಕ್ಕೆ ಕಾರಣ ಯಾರು ಎಂದು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ.

ಬಹುಶಃ ಸ್ಕೂಟರ್ ಸವಾರ ತನ್ನ ಪಾಡಿಗೆ ಹೋಗುತ್ತಿದ್ದಾಗ KTM ರೈಡರ್ ಮ್ಯಾಕ್ಲಾರೆನ್ ಸೂಪರ್‌ ಕಾರನ್ನು ಹಿಂಬಾಲಿಸಿರಬಹುದು ಅಥವಾ ಸ್ಕೂಟರ್ ಮತ್ತು ಬೈಕರ್ ಇಬ್ಬರೂ ಮೆಕ್ಲಾರೆನ್ ಅನ್ನು ನೋಡಿ ಅದನ್ನು ಹಿಂಬಾಲಿಸುತ್ತಿರಬಹುದು. ಇಬ್ಬರೂ ಸಂಪೂರ್ಣವಾಗಿ ಕಾರನ್ನು ಹಿಂಬಾಲಿಸಿದಾಗ ಒಬ್ಬರನ್ನೊಬ್ಬರು ಓವರ್‌ಟೇಕ್ ಮಾಡುವ ವೇಳೆ ಅಪಘಾತವಾಗಿದೆ ಎಂದೆನಿಸುತ್ತಿದೆ.

scooter-rider-hits-mclaren-765lt-supercar-in-bengaluru-viral-video

ಮೊದಲಿಗೆ ಸ್ಕೂಟರ್‌ಗೆ ಕೆಟಿಎಂ ಸವಾರ ಡಿಕ್ಕಿ ಹೊಡೆದ ಬಳಿಕವೇ ಸ್ಕೂಟರ್ ಸವಾರ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಆದರೆ ಸೂಪರ್‌ ಕಾರು ಎಲ್ಲೂ ನಿಲ್ಲಿಸದೇ ವೇಗದಲ್ಲಿ ಹೋಗಿದೆ. ಸೂಪರ್‌ ಕಾರು ಕಾಣಿಸಿಕೊಂಡಾಗ, ಅತಿಯಾಗಿ ಉತ್ಸುಕರಾಗುವ ಮತ್ತು ಅದನ್ನು ಬೆನ್ನಟ್ಟುವ ಜನರು ಇದ್ದಾರೆ. ಕಾರಿನ ಪಕ್ಕದಲ್ಲೇ ಹೋಗಿ ರೀಲ್‌ಗಳು ಅಥವಾ ಚಿತ್ರಗಳನ್ನು ಶೂಟ್ ಮಾಡಲು ಪ್ರಯತ್ನಿಸುತ್ತಾರೆ.

ಈ ಮೆಕ್ಲಾರೆನ್ ಮಾಲೀಕ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ: ತಿಳಿದಿಲ್ಲದವರಿಗೆ, ಈ 11 ಕೋಟಿ ರೂ.ಗಳ ಮೆಕ್ಲಾರೆನ್ 765 LT ಮಾಲೀಕ ಸಾಮಾನ್ಯವಾಗಿ RSM ಎಂದು ಕರೆಯಲ್ಪಡುವ ರಂಜಿತ್ ಸುಂದರಮೂರ್ತಿ. ಅವರು ಕರ್ನಾಟಕದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಉದ್ಯಮಿ. ಆದರೆ, ಅವರು ಈಗ ದುಬೈಗೆ ಸ್ಥಳಾಂತರಗೊಂಡಿದ್ದಾರೆ. ಆಗಾಗ ತಮ್ಮ ಸೂಪರ್‌ಕಾರ್‌ಗಳೊಂದಿಗೆ ಬೆಂಗಳೂರಿಗೆ ಬರುತ್ತಾರೆ.

scooter-rider-hits-mclaren-765lt-supercar-in-bengaluru-viral-video

ಈ ಬಾರಿ ಅವರು ತಮ್ಮ ಮೆಕ್‌ಲಾರೆನ್ 765 ಎಲ್‌ಟಿ ಕೂಪೆಯನ್ನು ದುಬೈನಿಂದ ಕಾರ್ನೆಟ್ ಮೂಲಕ ತಂದಿದ್ದಾರೆ. ಈ ನಿರ್ದಿಷ್ಟ ಸೂಪರ್‌ಕಾರ್ ಅನ್ನು ಹಲವಾರು ಸಂದರ್ಭಗಳಲ್ಲಿ ನಗರದಾದ್ಯಂತ ಓಡಿಸುವುದನ್ನು ಗುರುತಿಸಲಾಗಿದೆ. ಜೊತೆಗೆ ಅವರ ಬೆನ್ನಿಗೆ ಟೊಯೊಟಾ ಇನ್ನೋವಾ MPV ಯಲ್ಲಿ ಹಲವರು ಭದ್ರತಾ ಸಿಬ್ಬಂದಿಗಳು ಹಿಂದೆಯೇ ಬರುತ್ತಾರೆ.

ಟೀಕೆಗೆ ಸಂಬಂಧಿಸಿದಂತೆ, ಭದ್ರತಾ ಸಿಬ್ಬಂದಿಯೊಂದಿಗೆ ಈ ಹಿಂದಿನ ವೀಡಿಯೊಗಳಲ್ಲಿ ಕಾಣಿಸಿಕೊಂಡಾಗ ತಮ್ಮ ಸಂಪತ್ತನ್ನು ತೋರಿಸಿ ಬಿಟ್ಟಿ ಶೋಕಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದರು. ಪೆಟ್ರೋಲ್ ಬಂಕ್ ಅಥವಾ ಟ್ರಾಫಿಕ್ ಸಿಗ್ನಲ್‌ಗಳ ಬಳಿ ವಾಹನವನ್ನು ನಿಲ್ಲಿಸಿದಾಗ ಈ ಗಾರ್ಡ್‌ಗಳಿಗೆ ವಾಹನವನ್ನು ಸುತ್ತುವರಿಯಲು ಆದೇಶಿಸುತ್ತಾರೆ ಎಂದು ಹೇಳಲಾಗಿತ್ತು.

ಆದರೆ, ಇದೀಗ ಹೊರಬಂದಿರುವ ಅಪಘಾತದ ವೀಡಿಯೊಗೆ ಕಾಮೆಂಟ್ ವಿಭಾಗದಲ್ಲಿ ಬಹಳಷ್ಟು ಜನರು ಈಗ ಮಾಲೀಕರ ಪರ ನಿಂತಿದ್ದಾರೆ. ಬೆಂಗಳೂರು ನಗರದಾದ್ಯಂತ ಇಂತಹ ದುಬಾರಿ ವಾಹನವನ್ನು ಓಡಿಸುವಾಗ ಸೆಕ್ಯುರಿಟಿ ಗಾರ್ಡ್‌ಗಳ ಅಗತ್ಯವನ್ನು ಈಗ ಅರ್ಥಮಾಡಿಕೊಂಡಿರುವುದಾಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.

Article Published On: Tuesday, February 6, 2024, 12:53 [IST]
English summary
Scooter rider hits mclaren 765lt supercar in bengaluru viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+