ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ದೇಶದ ನಾನಾ ಭಾಗಗಳಲ್ಲಿ ಪ್ರತಿ ದಿನ ಯಾವುದಾದರೂ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಎಲ್ಲಾ ಹೋರಾಟಗಳು ಎಲ್ಲರನ್ನೂ ಆಕರ್ಷಿಸುವುದಿಲ್ಲ. ಇದೇ ವೇಳೆ ಕೆಲವು ಪ್ರತಿಭಟನೆಗಳು ಜನರ ಗಮನ ಸೆಳೆಯುತ್ತವೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಒಂದು ವಿಲಕ್ಷಣ ಪ್ರತಿಭಟನೆಯು ಸಹ ಜನರ ಗಮನವನ್ನು ಸೆಳೆಯುತ್ತಿದೆ. ಅದು ಯಾವ ರೀತಿಯ ಪ್ರತಿಭಟನೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಜನರು ತಮ್ಮ ಪ್ರೀತಿ ಪಾತ್ರರು ತಮ್ಮಿಂದ ದೂರವಾದಾಗ ಅವರ ನೆನಪಿನಲ್ಲಿ ಸ್ಮಾರಕಗಳನ್ನು ನಿರ್ಮಿಸುವುದು ವಾಡಿಕೆ. ಆದರೆ Suzuki Access ಸ್ಕೂಟರ್ ಮಾಲೀಕರೊಬ್ಬರು ತಮ್ಮ ನೆಚ್ಚಿನ ದ್ವಿಚಕ್ರ ವಾಹನಕ್ಕಾಗಿ ಸ್ಮಾರಕವನ್ನು ನಿರ್ಮಿಸಿರುವ ವಿಶಿಷ್ಟ ವಿಲಕ್ಷಣ ಘಟನೆ ವರದಿಯಾಗಿದೆ. ಸಂಚಾರಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ಅವರು ಈ ವಿಶಿಷ್ಟ ಯೋಜನೆಗೆ ಕೈ ಹಾಕಿದ್ದಾರೆ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಸಚಿನ್ ಧನಕುಡೆ ಎಂಬುವವರೇ ತಮ್ಮ ನೆಚ್ಚಿನ ಸ್ಕೂಟರ್ ಗಾಗಿ ಸ್ಮಾರಕ ನಿರ್ಮಿಸಿದವರು. ಅವರು ಪುಣೆಯ ಭೂಸಾರಿ ಚೌಕ್‌ನವರು. ಅವರು ತಮ್ಮ Suzuki Access 125 ಸ್ಕೂಟರ್ ಗಾಗಿ ಭೂಸಾರಿ ಚೌಕ ಪ್ರದೇಶದಲ್ಲಿ ಸ್ಮಾರಕವನ್ನು ನಿರ್ಮಿಸಿದ್ದಾರೆ. ಅವರು ಈ ಚೌಕ ಪ್ರದೇಶದಲ್ಲಿ ಸ್ಮಾರಕ ಸ್ತಂಭವನ್ನು ಸ್ಥಾಪಿಸಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಆ ಸ್ತಂಭದ ಮೇಲೆ ತಮ್ಮ ಸ್ಕೂಟರ್ ನಿಲ್ಲಿಸಿದ್ದಾರೆ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಅವರು ಪುಣೆ ನಗರ ಪೊಲೀಸರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಈ ರೀತಿ ಮಾಡಿದ್ದಾರೆ. ಈ ಮೂಲಕ ಜನರ ಗಮನವನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಸಚಿನ್ ಧನಕುಡೆ ಅವರ ಸ್ಕೂಟರ್ ಅನ್ನು ಪುಣೆ ನಗರ ಸಂಚಾರ ಪೊಲೀಸರು ಟೋಯಿಂಗ್ ಮಾಡಿ ಹೊತ್ತೊಯ್ದಿದ್ದರು. ಆದರೆ ತಾವು ನೋ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಸ್ಕೂಟರ್ ಅನ್ನು ನಿಲ್ಲಿಸಿರಲಿಲ್ಲವೆಂದು ತಿಳಿಸಿರುವ ಸಚಿನ್ ಧನಕುಡೆ ಈ ಬಗ್ಗೆ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದರು.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಜೂನ್ 15ರಂದು ಅವರು ತಮ್ಮ Suzuki Access 125 ಸ್ಕೂಟರ್ ಅನ್ನು ಪಾರ್ಕಿಂಗ್ ಇರುವ ಸ್ಥಳದಲ್ಲಿಯೇ ನಿಲ್ಲಿಸಿದ್ದರು. ಆದರೂ ಪುಣೆ ನಗರ ಪೊಲೀಸರು ಅವರ ಸ್ಕೂಟರ್ ಅನ್ನು ಹೊತ್ತೊಯ್ದಿದ್ದಾರೆ. ತಕ್ಷಣವೇ ಅವರು ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಆದರೆ ಪೊಲೀಸ್ ಸಿಬ್ಬಂದಿ ಅವರ ಮನವಿಗೆ ಸ್ಪಂದಿಸಿಲ್ಲ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಅಲ್ಲದೇ ವಿನಾ ಕಾರಣ ಸತಾಯಿಸಿ ಸುಮಾರು 80 ದಿನಗಳ ನಂತರ ಅವರ ಸ್ಕೂಟರ್ ಅನ್ನು ಅವರಿಗೆ ಹಿಂತಿರುಗಿಸಿದ್ದಾರೆ. ನೋ ಪಾರ್ಕಿಂಗ್‌ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡಿ, ದಂಡ ವಿಧಿಸುವುದು ಸಾಮಾನ್ಯ ಸಂಗತಿ. ಆದರೆ ತಾವು ಇದುವರೆಗೂ ತಮ್ಮ ಸ್ಕೂಟರ್ ಅನ್ನು ಎಂದೂ ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿಲ್ಲವೆಂದು ಸಚಿನ್ ಧನಕುಡೆ ಹೇಳಿದ್ದಾರೆ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ನನ್ನ ಸ್ಕೂಟರ್ ಅನ್ನು ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಬಗ್ಗೆ ಪೊಲೀಸರು ನನಗೆ ಯಾವುದೇ ಪುರಾವೆಗಳನ್ನು ನೀಡಿಲ್ಲವೆಂದು ಅವರು ಹೇಳಿದ್ದಾರೆ. ಮಾನಸಿಕ ಹಿಂಸೆ ನೀಡಿ ತಮ್ಮಿಂದ ತಪ್ಪೊಪ್ಪಿಗೆ ಪಡೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪೊಲೀಸರ ಈ ವರ್ತನೆಯಿಂದ ಬೇಸತ್ತ ಅವರು ಸ್ಮಾರಕ ನಿರ್ಮಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಈ ಸ್ಮಾರಕದಲ್ಲಿ ಒಂದು ಸಣ್ಣ ದೇವಾಲಯದಂತಹ ಗೋಪುರವಿದ್ದು ಅದರೊಳಗೆ ಗಣೇಶನ ಪ್ರತಿಮೆ ಇದೆ. ಅದರ ಮೇಲ್ಭಾಗದಲ್ಲಿ Suzuki Access 125 ಸ್ಕೂಟರ್ನಿಲ್ಲಿಸಲಾಗಿದೆ. ಇದರ ಜೊತೆಗೆ ಸ್ಮಾರಕದ ಗೋಪುರದ ಮುಂಭಾಗದಲ್ಲಿ ವಿವಿಧ ಘೋಷಣೆಗಳಿರುವ ಬ್ಯಾನರ್‌ಗಳನ್ನು ಅಂಟಿಸಿದ್ದಾರೆ. ಈ ಸ್ಮಾರಕದಲ್ಲಿ ಪಾರ್ಕಿಂಗ್ ಮೀಸಲಾತಿ ನಮ್ಮ ಹಕ್ಕು, ಅವರು ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಮುಂದೆ ಸಂಚಾರಿ ಪೊಲೀಸರು ಇರುತ್ತಾರೆ, ನೀವು ಭಯಪಡಬೇಡಿ ಎಂದು ಸಹ ಬರೆದಿದ್ದಾರೆ. ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ನಂತಹ ಸಮಸ್ಯೆಗಳು ಉಂಟಾಗಿ ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ಸಂಚಾರಿ ಪೊಲೀಸರು ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಇದೇ ವೇಳೆ ಪುಣೆಯಲ್ಲಿ ನಡೆದ ಘಟನೆ ಕೆಲವೊಮ್ಮೆ ಅಮಾಯಕರು ಸಹ ಪೊಲೀಸರ ಕ್ರಮಕ್ಕೆ ಹೇಗೆ ಬಲಿಯಾಗುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಭಾರತದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ವಾಹನಗಳಿಗೆ ತಕ್ಕಂತೆ ಪಾರ್ಕಿಂಗ್ ಸೌಲಭ್ಯ ನೀಡದೇ ಇರುವುದು ಸಹ ಪಾರ್ಕಿಂಗ್ ಸಮಸ್ಯೆ ಉದ್ಭವಿಸಲು ಕಾರಣವಾಗುತ್ತಿದೆ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮಾಡುವ ಮುನ್ನ ಮೈಕ್ ನಲ್ಲಿ ಘೋಷಿಸುವ ಮೂಲಕ ವಾಹನ ಸವಾರರಿಗೆ ಮಾಹಿತಿ ನೀಡಬೇಕೆನ್ನುವ ನಿಯಮವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಪೊಲೀಸ್ ಸಿಬ್ಬಂದಿ ಟೋಯಿಂಗ್ ಮಾಡುವ ವೇಳೆ ಯಾವುದೇ ಮುನ್ಸೂಚನೆ ನೀಡದೇ ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದಾರೆ.

ವಿನಾ ಕಾರಣ ಟೋಯಿಂಗ್ ಮಾಡಿದ ಪೊಲೀಸರ ವಿರುದ್ಧ ಸ್ಮಾರಕ ನಿರ್ಮಿಸಿ ಪ್ರತಿಭಟಿಸಿದ ಸ್ಕೂಟರ್ ಮಾಲೀಕ

ಇದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದರಿಂದ ವಾಹನ ಸವಾರರು ಟೋಯಿಂಗ್ ವಾಹನಗಳ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವಂತಹ ಘಟನೆಗಳು ವರದಿಯಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಕೆಲವು ವಾಹನ ಸವಾರರು ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಘಟನೆ ನಮ್ಮ ಬೆಂಗಳೂರಿನಲ್ಲಿ ನಡೆದಿತ್ತು. ಪುಣೆ ಸ್ಕೂಟರ್ ಸವಾರ ಸ್ಮಾರಕ ನಿರ್ಮಿಸಿ ಪ್ರತಿಭಟನೆ ನಡೆಸಿದ ಬಗ್ಗೆ ಪುಣೆ ಕಾರ್ ನ್ಯೂಸ್ ವರದಿ ಮಾಡಿದೆ.

ಗಮನಿಸಿ: ಮೊದಲ ಮೂರು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Scooterist builds monument tower to protest against traffic cops details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X