ಅಪಘಾತದಿಂದ ಪಾರಾದರೂ ನೆಲಕ್ಕುರುಳಿದ ಸ್ಕೂಟರ್ ಸವಾರ

ಭಾರತದ ರಸ್ತೆಗಳಲ್ಲಿ ಪ್ರತಿದಿನ ನೂರಾರು ಅಪಘಾತಗಳು ಸಂಭವಿಸುತ್ತವೆ. ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ನಿರ್ಲಕ್ಷ್ಯ ಈ ಅಪಘಾತಗಳಿಗೆ ಮುಖ್ಯ ಕಾರಣಗಳಾಗಿವೆ. ಈ ರೀತಿಯ ಅಪಘಾತಗಳ ವೀಡಿಯೊಗಳನ್ನು ಕಾಲಕಾಲಕ್ಕೆ ಅಪ್ ಲೋಡ್ ಮಾಡಲಾಗುತ್ತದೆ.

ಅಪಘಾತದಿಂದ ಪಾರಾದರೂ ನೆಲಕ್ಕುರುಳಿದ ಸ್ಕೂಟರ್ ಸವಾರ

ಕೇರಳದಲ್ಲಿ ನಡೆದ ಇದೇ ರೀತಿಯ ಅಪಘಾತದ ವೀಡಿಯೊವೊಂದು ವೈರಲ್‌ ಆಗಿದೆ.ಈ ವೀಡಿಯೊದಲ್ಲಿ ವೃದ್ಧರೊಬ್ಬರು ಸ್ಕೂಟರ್‌ನಲ್ಲಿ ರಸ್ತೆ ಬದಿಯಲ್ಲಿ ನಿಂತಿರುವುದನ್ನು ಕಾಣಬಹುದು. ಅಡ್ಡ ರಸ್ತೆಯಲ್ಲಿದ್ದ ಹೋಂಡಾ ಅಮೇಜ್ ಕಾರು ಎಡಕ್ಕೆ ತಿರುಗಿ ಮುಖ್ಯ ರಸ್ತೆಗೆ ಬರುತ್ತದೆ. ಮಾರುತಿ ವ್ಯಾಗನ್ ಆರ್ ಕಾರು ಬಲಕ್ಕೆ ತಿರುಗಿ ಮುಖ್ಯ ರಸ್ತೆಗೆ ಬರಲು ತಯಾರಾಗುತ್ತದೆ.

ಅಪಘಾತದಿಂದ ಪಾರಾದರೂ ನೆಲಕ್ಕುರುಳಿದ ಸ್ಕೂಟರ್ ಸವಾರ

ಹೋಂಡಾ ಅಮೇಜ್ ಕಾರಿನ ಡ್ರೈವರ್ ಸ್ಕೂಟರ್ ಮೇಲಿದ್ದ ವೃದ್ಧರಿಗೆ ಹಾರ್ನ್ ಮಾಡಿ ದಾರಿ ಬಿಡುವಂತೆ ಕೋರಿದ್ದಾನೆ. ಸ್ಕೂಟರ್ ಮೇಲಿದ್ದವರು ಸ್ವಲ್ಪ ಮುಂದೆ ಹೋಗಿ ಮತ್ತೆ ನಿಂತಿದ್ದಾರೆ. ಈ ಕಾರಣಕ್ಕೆ ಹೋಂಡಾ ಅಮೇಜ್ ಕಾರಿನ ಚಾಲಕ ಸ್ಕೂಟರ್ ಅನ್ನು ಹಿಂದಿಕ್ಕಿದ್ದಾನೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಅಪಘಾತದಿಂದ ಪಾರಾದರೂ ನೆಲಕ್ಕುರುಳಿದ ಸ್ಕೂಟರ್ ಸವಾರ

ಈ ವೇಳೆ ಅದೇ ಮಾರ್ಗವಾಗಿ ಬಂದ ಮತ್ತೊಂದು ಸ್ಕೂಟರ್‌ನ ಸವಾರ, ಸ್ಕೂಟರ್ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್ ಮೇಲಿನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಸ್ಕೂಟರ್ ಸವಾರ ಹೆಲ್ಮೆಟ್ ಧರಿಸಿದ್ದ ಕಾರಣಕ್ಕೆ ತಲೆಗೆ ಪೆಟ್ಟು ಬೀಳದೇ ಪಾರಾಗಿದ್ದಾನೆ.

ಅಪಘಾತದಿಂದ ಪಾರಾದರೂ ನೆಲಕ್ಕುರುಳಿದ ಸ್ಕೂಟರ್ ಸವಾರ

ಉರುಳಿಬಿದ್ದ ಸ್ಕೂಟರ್ ಸವಾರ ವೇಗವಾಗಿ ಸ್ಕೂಟರ್ ಚಾಲನೆ ಮಾಡಿಕೊಂಡು ಬಂದಿರುವುದು ಸ್ಪಷ್ಟವಾಗಿದೆ. ವೇಗವಾಗಿ ವಾಹನ ಚಾಲನೆ ಮಾಡುವುದು ಅಪಾಯಕಾರಿ ಎಂದು ತಿಳಿದಿದ್ದರೂ ಡಿವೈಡರ್ ಗಳಿಲ್ಲದ ಸಿಂಗಲ್ ಲೇನ್ ರಸ್ತೆಯಲ್ಲಿ ಬೇರೆ ವಾಹನಗಳನ್ನು ಹಿಂದಿಕ್ಕಲು ಹೋಗಿ ಕಂಟ್ರೋಲ್ ತಪ್ಪಿ ನೆಲಕ್ಕುರುಳಿದ್ದಾನೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಅಪಘಾತದಿಂದ ಪಾರಾದರೂ ನೆಲಕ್ಕುರುಳಿದ ಸ್ಕೂಟರ್ ಸವಾರ

ಸ್ಥಳದಲ್ಲಿದ್ದವರು ಕೆಳಗೆ ಬಿದ್ದ ಸ್ಕೂಟರ್ ಸವಾರನ ನೆರವಿಗೆ ಧಾವಿಸಿದ್ದಾರೆ. ವ್ಯಾಗನ್ ಆರ್ ಕಾರಿನ ಮುಂದೆಯೇ ಸ್ಕೂಟರ್ ಬಿದ್ದ ಕಾರಣಕ್ಕೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಬದಿ ಸ್ಕೂಟರ್‌ನಲ್ಲಿ ನಿಂತಿದ್ದ ವೃದ್ಧನೇ ಈ ಅಪಘಾತಕ್ಕೆ ಕಾರಣ.

ಕಿರಿದಾದ ರಸ್ತೆಗಳಲ್ಲಿ ವಿನಾಕಾರಣ ನಿಲ್ಲುವುದರಿಂದ ಬೇರೆಯವರಿಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ. ಘಟನೆಯ ನಂತರ ಹೋಂಡಾ ಅಮೇಜ್ ಕಾರಿನ ಚಾಲಕ ಕಾರು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಅಪಘಾತದಿಂದ ಪಾರಾದರೂ ನೆಲಕ್ಕುರುಳಿದ ಸ್ಕೂಟರ್ ಸವಾರ

ಈ ಅಪಘಾತವು ಭಾರತದ ರಸ್ತೆಗಳಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವುದು. ಮಿತ ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡುವುದು ಒಳ್ಳೆಯದು.

Most Read Articles

Kannada
English summary
Scooterist just misses hitting Honda Amaze falls down. Read in Kannada.
Story first published: Saturday, July 11, 2020, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X