ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಆಗಸ್ಟ್ 31 ರಿಂದ ದೆಹಲಿಯಲ್ಲಿ ಆರ್‌ಎಫ್‌ಐಡಿ ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಇನ್ನು ಮುಂದೆ ಆರ್‌ಎಫ್‌ಐಡಿ ಟ್ಯಾಗ್ ಹೊಂದಿರದ ವಾಣಿಜ್ಯ ವಾಹನಗಳಿಗೆ ದೆಹಲಿಯನ್ನು ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ದೆಹಲಿಯಲ್ಲಿ ಆಟೋಮ್ಯಾಟಿಕ್ ಟೋಲ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿ‌ಎಂಸಿ) ವಾಣಿಜ್ಯ ವಾಹನಗಳು ಆರ್‌ಎಫ್‌ಐಡಿ ಟ್ಯಾಗ್ ಅಂದರೆ ಫಾಸ್ಟ್ ಟ್ಯಾಗ್ ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿದೆ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಇನ್ನು ಮುಂದೆ ದೆಹಲಿಯ ಗಡಿ ದಾಟುವ ವಾಣಿಜ್ಯ ವಾಹನಗಳು ಫಾಸ್ಟ್ ಟ್ಯಾಗ್ ಮೂಲಕವೇ ಟೋಲ್ ಪಾವತಿಸಬೇಕಾಗುತ್ತದೆ. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸೆಪ್ಟೆಂಬರ್ 1 ರಂದು 150 ವಾಣಿಜ್ಯ ವಾಹನಗಳನ್ನು ದೆಹಲಿ ಗಡಿಯಲ್ಲಿ ತಪಾಸಣೆ ನಡೆಸಿ ಫಾಸ್ಟ್ ಟ್ಯಾಗ್ ಬಳಸದ ವಾಹನಗಳಿಗೆ ದಂಡ ವಿಧಿಸಿತು. ದಂಡದ ಮೊತ್ತವನ್ನು ಟೋಲ್ ಶುಲ್ಕಕ್ಕೆ ಸಮನಾಗಿ ತೆಗೆದುಕೊಳ್ಳಲಾಗುತ್ತದೆ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ವರದಿಗಳ ಪ್ರಕಾರ, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುವುದನ್ನು ತಪ್ಪಿಸಲು ನಿಯಮ ಉಲ್ಲಂಘಿಸುವ ವಾಹನಗಳನ್ನು ಟೋಲ್ ಪ್ಲಾಜಾದಿಂದ 200 ಮೀಟರ್ ಮೊದಲು ನಿಲ್ಲಿಸಲಾಗುತ್ತದೆ. ದೆಹಲಿ ಪ್ರವೇಶಿಸುವ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕವೆಂದು ರೂ. 100 ರಿಂದ ರೂ. 2,000 ಗಳವರೆಗೆ ಹಾಗೂ ಇಸಿಸಿ (ಪರಿಸರ ಪರಿಹಾರ ಶುಲ್ಕ) ರೂ. 700 ಗಳಿಂದ ರೂ.1400 ಗಳವರೆಗೆ ಶುಲ್ಕ ವಿಧಿಸಲಾಗುತ್ತದೆ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ನಿಯಮ ಉಲ್ಲಂಘಿಸುವ ವಾಹನಗಳ ನೋಂದಣಿ ಹಾಗೂ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಸ್‌ಡಿ‌ಎಂಸಿ ಹೇಳಿದೆ. ಎಸ್‌ಡಿಎಂಸಿ ಪ್ರಕಾರ, ದೆಹಲಿ ಗಡಿಯಲ್ಲಿ 39 ಪಾಯಿಂಟ್ ಆಫ್ ಸೇಲ್ (ಪಿಒಎಸ್) ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಖರೀದಿಸಬಹುದು ಹಾಗೂ ರೀಚಾರ್ಜ್ ಮಾಡಿಸ ಬಹುದು.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಆರ್‌ಎಫ್‌ಐಡಿ ಟ್ಯಾಗ್ ಗಳನ್ನು ಆನ್‌ಲೈನ್‌ನಲ್ಲಿ ಎಸ್‌ಡಿಎಂಸಿ ವೆಬ್‌ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ ಎಂಸಿಡಿ ಟೋಲ್‌ಗಳಲ್ಲಿಯೂ ರೀಚಾರ್ಜ್ ಮಾಡಬಹುದು. ಇದರಿಂದ ವಾಹನ ಸವಾರರು ಫಾಸ್ಟ್ ಟ್ಯಾಗ್ ಗಳನ್ನು ರೀಚಾರ್ಜ್ ಮಾಡಲು ಪರದಾಡುವುದು ತಪ್ಪುತ್ತದೆ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಆರ್‌ಎಫ್‌ಐಡಿ ಆಧಾರಿತ ಫಾಸ್ಟ್ ಟ್ಯಾಗ್ ಎಂದರೇನು?

ಫಾಸ್ಟ್ ಟ್ಯಾಗ್ ಎನ್ನುವುದು ವಾಹನಗಳ ಮುಂಭಾಗದ ಗಾಜಿನ ಮೇಲೆ ಅಂಟಿಸುವ ಸ್ಟಿಕ್ಕರ್ ಆಗಿದೆ. ಈ ಸ್ಟಿಕ್ಕರ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟೆಕ್ನಾಲಜಿ (ಆರ್‌ಎಫ್‌ಐಡಿ) ಮೂಲಕ ಕಾರ್ಯ ನಿರ್ವಹಿಸುತ್ತದೆ. ಈ ಸ್ಟಿಕ್ಕರ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾದ ಮೂಲಕ ಹಾದು ಹೋದಾಗ, ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಿದ ಬ್ಯಾಂಕ್ ಅಥವಾ ಪ್ರಿಪೇಯ್ಡ್ ಖಾತೆಯಿಂದ ಟೋಲ್ ಶುಲ್ಕ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಇದರಿಂದ ಟೋಲ್ ಶುಲ್ಕ ಪಾವತಿಸಲು ಟೋಲ್ ಪ್ಲಾಜಾಗಳಲ್ಲಿ ವಾಹನಗಳನ್ನು ನಿಲ್ಲಿಸುವ ಅಗತ್ಯ ಇಲ್ಲವಾಗುತ್ತದೆ. ಇದು ವಾಹನ ಸವಾರರ ಸಮಯವನ್ನು ಉಳಿಸುವುದರ ಜೊತೆಗೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಎಲ್ಲಾ ಪ್ರಯಾಣಿಕ ನಾಲ್ಕು ಚಕ್ರ ವಾಹನಗಳು, ಬಸ್‌ಗಳು, ಟ್ರಕ್‌ಗಳು, ಲಾರಿಗಳು ಹಾಗೂ ನಿರ್ಮಾಣ ಕಾರ್ಯದಲ್ಲಿ ಬಳಸುವ ವಾಣಿಜ್ಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ದ್ವಿ ಚಕ್ರ ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸುವುದು ಅನಿವಾರ್ಯವಲ್ಲ ಎಂಬುದು ಗಮನಾರ್ಹ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಫಾಸ್ಟ್ ಟ್ಯಾಗ್ ಅನ್ನು ದೇಶದ ಯಾವುದೇ ಟೋಲ್ ಪ್ಲಾಜಾಗಳಲ್ಲಿ ಖರೀದಿಸಬಹುದು. ಫಾಸ್ಟ್ ಟ್ಯಾಗ್ ಖರೀದಿಸಲು ವಾಹನ ನೋಂದಣಿ ದಾಖಲೆಗಳೊಂದಿಗೆ ಒಂದು ಐಡಿ ಅಗತ್ಯವಿದೆ. ಟೋಲ್ ಪ್ಲಾಜಾಗಳ ಹೊರತಾಗಿ ಫಾಸ್ಟ್ ಟ್ಯಾಗ್ ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ ಮತ್ತು ಪೇಟಿಎಂ ಪೇಮೆಂಟ್ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್‌ಗಳ ಮೂಲಕವೂ ಖರೀದಿಸಬಹುದು.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಪೇಟಿಎಂ, ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ನಂತಹ ಕೆಲವು ಇ ಕಾಮರ್ಸ್ ಪ್ಲಾಟ್‌ಫಾರಂಗಳು ತಮ್ಮ ಅಪ್ಲಿಕೇಶನ್‌ಗಳ ಮೂಲಕ ಫಾಸ್ಟ್ ಟ್ಯಾಗ್ ಗಳನ್ನು ಮಾರಾಟ ಮಾಡುತ್ತವೆ. ಈ ವರ್ಷದ ಫೆಬ್ರವರಿ ತಿಂಗಳಿನಿಂದ ಎಲ್ಲಾ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದು ಹೋಗಲು ಫಾಸ್ಟ್ ಟ್ಯಾಗ್ ಹೊಂದಿರುವುದು ಕಡ್ಡಾಯ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಫಾಸ್ಟ್ ಟ್ಯಾಗ್ ಹೊಂದದೇ ಟೋಲ್ ಪ್ಲಾಜಾ ಮೂಲಕ ಹಾದು ಹೋಗುವ ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಕೆಲವು ದಿನಗಳ ಹಿಂದೆ ಕೇಂದ್ರ ಸಾರಿಗೆ ಇಲಾಖೆಯು ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಇದುವರೆಗೂ ಸುಮಾರು 3 ಕೋಟಿಗಳಷ್ಟು ಫಾಸ್ಟ್ ಟ್ಯಾಗ್ ಗಳನ್ನು ಮಾರಾಟ ಮಾಡಲಾಗಿದೆ.

ರಾಷ್ಟ್ರ ರಾಜಧಾನಿ ಪ್ರವೇಶಿಸುವ ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಎಸ್‌ಡಿ‌ಎಂಸಿ

ಹೊಸದಾಗಿ ಮಾರಾಟವಾಗುವ ವಾಹನಗಳಲ್ಲಿ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಅಳವಡಿಸುವಂತೆ ಎಲ್ಲಾ ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಫಾಸ್ಟ್ ಟ್ಯಾಗ್ ಗಳು ಕ್ಯಾಶ್ ಲೆಸ್ ವಹಿವಾಟು ಉತ್ತೇಜಿಸಲು ನೆರವಾಗುತ್ತವೆ.

Most Read Articles

Kannada
English summary
Sdmc mandates rfid tags for commercial vehicles to enter delhi details
Story first published: Friday, September 3, 2021, 11:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X