ನೀವು 'ಬಕ್ರ' ಆಗಿರಬಹುದು.. ಸರ್ವೀಸ್ ಸೆಂಟರ್ ಸಿಬ್ಬಂದಿ ಅಕ್ರಮವನ್ನು ಮೊಬೈಲ್‌ನಲ್ಲಿ ಪತ್ತೆ ಹಚ್ಚಿದ Scorpio ಮಾಲೀಕ
ವಾಹನ ತಯಾರಕ ಕಂಪನಿಗಳು ಹೆಚ್ಚು ಜನಜನಿತವಾಗ ಬೇಕಾದರೆ, ಅವು ನೀಡುವ ಸರ್ವಿಸ್ ಮುಖ್ಯವಾಗುತ್ತದೆ. ಆದರೆ, ಇದರಲ್ಲಿ ಕೆಲವೊಮ್ಮೆ ಸಮಸ್ಯೆ ಎದುರಾದಾಗ ಗ್ರಾಹಕರಿಗೆ ಎಂತಹ ಜನಪ್ರಿಯ ಕಂಪನಿಯಾದರೂ ಅದರ ಮೇಲೆ ನಂಬಿಕೆ ಹೋಗಿ ಬಿಡುತ್ತದೆ. ಸದ್ಯ, ಸರ್ವಿಸ್ ಸೆಂಟರ್ ಸಿಬ್ಬಂದಿ ರಿಪೇರಿಗೆ ಬಿಟ್ಟಿದ್ದ ಮಹೀಂದ್ರಾ ಸ್ಕಾರ್ಪಿಯೋ Nನಲ್ಲಿ ಜಾಲಿರೈಡ್ ಮಾಡಿದ್ದಾರೆ.
ಈ ವಿಡಿಯೋವನ್ನು ಯೂಟ್ಯೂಬ್ ವಾಹಿನಿಯೊಂದರಲ್ಲಿ ಅಶ್ವಿನ್ ಸಿಂಗ್ ತಾಕಿಯರ್ ಎಂಬುವವರು ಅಪ್‌ಲೋಡ್ ಮಾಡಿದ್ದು, ಅವರಿಗಾಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಸ್ಕಾರ್ಪಿಯೋ Nನ ಎಂಜಿನ್ ವೈರಿಂಗ್ ನಲ್ಲಿ ಕೊಂಚ ದೋಷ ಇದ್ದ ಕಾರಣ, ಈ ಕಾರನ್ನು ದೆಹಲಿಯ ಮಹೀಂದ್ರಾ ಸರ್ವಿಸ್ ಸೆಂಟರ್ ಗೆ ಬಿಟ್ಟು, ಅಲ್ಲಿನ ಸಿಬ್ಬಂದಿ ಕಾರನ್ನು ಅಚ್ಚುಕಟ್ಟಾಗಿ ಸರಿಪಡಿಸುತ್ತಾರೆ ಎಂಬ ನಂಬಿಕೆಯಿಂದ ಮನೆಗೆ ಬಂದಿದ್ದಾರೆ.

ಆದರೆ, ಅಲ್ಲಿ ಆಗಿದ್ದೆ ಬೇರೆ.. ಒಂದೆರಡು ದಿನಗಳ ನಂತರ, ಸ್ಕಾರ್ಪಿಯೋ ಮಾಲೀಕರಿಗೆ ಅವರ ತಂದೆಯಿಂದ ಫೋನ್ ಕರೆಯೊಂದು ಬರುತ್ತದೆ. 'ನಿನ್ನ ಸ್ಕಾರ್ಪಿಯೋ ಎನ್ ಅನ್ನು ಯಾರೋ ಓಡಿಸುತ್ತಿರುವುದನ್ನು ನೋಡಿದೆ' ಎಂದು ಹೇಳುತ್ತಾರೆ. ಅದಕ್ಕೆ ಕಾರು 'ನನ್ನ ಬಳಿ ಇಲ್ಲ ಸರ್ವಿಸ್ ಸೆಂಟರ್ ಗೆ ಬಿಟ್ಟಿರುವುದಾಗಿ' ಪ್ರತ್ಯುತ್ತರ ನೀಡುತ್ತಾರೆ. ಬಳಿಕ, ಆ ವ್ಯಕ್ತಿಗೆ ಕಾರು ನಿಲ್ಲಿಸು ಅಂತ ಹೇಳಿದ್ರು, ಅದನ್ನು ಕೇಳಿಲ್ಲ ಎಂದು ಅವರ ತಂದೆ ಹೇಳುತ್ತಾರೆ.
ಇದರಿಂದ ಗಾಬರಿಗೊಳ್ಳುವ ಸ್ಕಾರ್ಪಿಯೋ ಎನ್ ಮಾಲೀಕ, ಆ ಕಾರು ನಿಜವಾಗಿಯೂ ರಸ್ತೆಯಲ್ಲಿ ಸಂಚಾರ ನಡೆಸಿದೆಯೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗುತ್ತಾರೆ. ಅದಕ್ಕೆ ಮಹೀಂದ್ರಾ ಕಂಪನಿ ತನ್ನ ಕಾರುಗಳಲ್ಲಿ ಬಳಕೆ ಮಾಡುವ ಅತ್ಯಾಧುನಿಕ 'ಕನೆಕ್ಟ್ದ್ ಕಾರ್ ಟೆಕ್' ತಂತ್ರಜ್ಞಾನದ ಮೊರೆ ಹೋಗುತ್ತಾರೆ. ಆಗ ಸರ್ವಿಸ್ ಸೆಂಟರ್ ಸಿಬ್ಬಂದಿ ಮಾಡಿರುವ ಅಕ್ರಮ ಸಂಪೂರ್ಣ ಬಯಲಾಗಿದೆ.

ಸ್ಕಾರ್ಪಿಯೋ ಎನ್ ಮಾಲೀಕ, ಎಸ್‌ಯುವಿ ಲೊಕೇಶನ್ ಮತ್ತು ಕೊನೆಯ ಟ್ರಿಪ್ ಬಗ್ಗೆ ವಿವರ ಪರಿಶೀಲಿಸಿದಾಗ 1 ಗಂಟೆಗಳ ಕಾಲ, ಆ ಕಾರು, ಸುಮಾರು 30 ಕಿಲೋಮೀಟರ್ ಸಂಚರಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಸರ್ವಿಸ್ ಸೆಂಟರ್ ಗೆ ತೆರಳಿ, ಈ ಕುರಿತಂತೆ ಪ್ರಶ್ನೆ ಮಾಡಿದಾದ ಅಲ್ಲಿನ ಸಿಬ್ಬಂದಿ ಸ್ಕಾರ್ಪಿಯೋವನ್ನು ಹೊರತೆಗೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆದರೆ, ತಪ್ಪು ಮಾಡಿದ್ದರೂ ಆ ಸಿಬ್ಬಂದಿ ಕ್ಷಮೆ ಕೇಳಲಿಲ್ಲ ಎಂದು ಹೇಳಿರುವ ಸ್ಕಾರ್ಪಿಯೋ ಮಾಲೀಕ, 'ನಮ್ಮ ಭಾರತದಲ್ಲಿ ಮಹೀಂದ್ರಾ ನಂಬಿಕೆಯ ವಾಹನ ತಯಾರಕ ಕಂಪನಿಯಾಗಿರುವುದರಿಂದ ನಾನು ಹೊಸ ಸ್ಕಾರ್ಪಿಯೋ ಎನ್ ಎಸ್‌ಯುವಿಯನ್ನು ಖರೀದಿ ಮಾಡಿದ್ದು, ಇನ್ಮುಂದೆ ಈ ಕಂಪನಿಯ ಯಾವುದೇ ಕಾರುಗಳನ್ನು ಕೊಂಡುಕೊಳ್ಳಲು ಇಚ್ಚಿಸುವುದೇ ಇಲ್ಲ' ಎಂದು ಬೇಸರದಿಂದ ತಿಳಿಸಿದ್ದಾರೆ.
ಮಹೀಂದ್ರಾ ಕಂಪನಿ ಘಟನೆ ಸಂಬಂಧ ನಿಖರವಾದ ಮಾಹಿತಿ ಕಲೆ ಹಾಕಬೇಕಾಗಿದೆ. ಜೊತೆಗೆ ಮಾಲೀಕರ ಅನುಮತಿಯಿಲ್ಲದೆ, ಕಾರನ್ನು ಜಾಲಿ ರೈಡ್ ಗೆ ತೆಗೆದುಕೊಂಡು ಹೋಗಿರುವುದನ್ನು ಯಾರು ಒಪ್ಪುವುದಿಲ್ಲ. ಕಂಪನಿಗಳು ಈ ಬಗ್ಗೆ ತಮ್ಮ ಸಿಬ್ಬಂದಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಸರ್ವಿಸ್ ಸೆಂಟರ್ ಸಿಬ್ಬಂದಿ ಇದೇ ರೀತಿಯಲ್ಲಿ ವರ್ತನೆ ಮುಂದುವರಿಸಿದರೆ ಗ್ರಾಹಕರು ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಲವಾರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.


Click it and Unblock the Notifications