ಉದ್ಯಮಿಯ ಟ್ವಿಟರ್ ಬ್ಲೂಟಿಕ್ ರದ್ದು... ಸರಿಯಾಗಿಯೇ ಉತ್ತರ ಕೊಟ್ಟ ಅನುಪಮ್ ಮಿತ್ತಲ್
ಟೆಸ್ಲಾ, ಸ್ಪೇಸ್‌ಎಕ್ಸ್ ಮತ್ತು ಈಗ ಟ್ವಿಟರ್ ಅನ್ನು ಖರೀದಿಸಿರುವ ಎಲಾನ್ ಮಸ್ಕ್, ಸೆಲೆಬ್ರಿಟಿಗಳು ಹಾಗೂ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಉದ್ಯಮಿಗಳ ಬ್ಲೂಟಿಕ್ ಅನ್ನು ತೆಗೆದುಹಾಕಿದ್ದಾರೆ. ಈ ಹಿನ್ನೆಲೆ ಭಾರತದ ಪ್ರಮುಖ ಉದ್ಯಮಿ ಬ್ಲೂ ಟಿಕ್ ಕಳೆದುಕೊಂಡ ಕಾರಣ ಎಲಾನ್ ಮಸ್ಕ್ ಅವರ ಟೆಸ್ಲಾ ಕಾರನ್ನು ಖರೀದಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್ ಅನ್ನು ವಶಪಡಿಸಿಕೊಂಡ ಬಳಿಕ ಎಲಾನ್ ಮಸ್ಕ್ ಮನಬಂದಂತೆ ವ್ಯವಹರಿಸುತ್ತಿದ್ದಾರೆ ಎಂಬ ಆರೋಪಗಳು ಹೆಚ್ಚಾದ ಬೆನ್ನಲ್ಲೇ ಹಲವರು ಸೆಲಬ್ರಿಟಿಗಳ ಬ್ಲೂ ಟಿಕ್ ಅನ್ನು ಕಳೆದುಕೊಂಡಿದ್ದರು. ಆದರೆ ಏನಾಗಿದೆ ಎಂದಬು ತಿಳಿಯಲಿಲ್ಲ ಒಂದಷ್ಟು ಸೆಲಬ್ರಿಟಿಗಳಿಗೆ ಬ್ಲೂಟಿಕ್ ಅನ್ನು ಮರಳಿ ನೀಡಲಾಗಿದೆ. ಇದೀಗ ಮ್ಯಾಚ್ ಮೇಕಿಂಗ್ ವೆಬ್‌ಸೈಟ್ ಆಗಿರುವ ಜನಪ್ರಿಯ Shaadi.com ನ ಸಂಸ್ಥಾಪಕ ಅನುಪಮ್ ಮಿತ್ತಲ್ ಅವರ ಟ್ವಿಟರ್ ಖಾತೆಯ ಬ್ಲೂಟಿಕ್ ಅನ್ನು ತೆಗೆದುಹಾಕಲಾಗಿದೆ.

ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ತಮ್ಮದಾಗಿಸಕೊಂಡ ಬಳಿಕ ಬಿರುಗಾಳಿ ಎಬ್ಬಿಸಿದ್ದರು. ಹಲವರು ಸಿಬ್ಬಂದಿಯನ್ನು ಕೆಲಸದಿಂದ ಹೊರದಬ್ಬಿದ್ದರು. ಇದರಲ್ಲಿ ಮುಖ್ಯವಾಗಿ ಸಿಇಒ ಆಗಿದ್ದ ಭಾರತ ಮೂಲದ ಪರಾಗ್ ಅಗರ್ವಾಲ್ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು. ಹೀಗೆ ಮನಬಂದಂತೆ ವ್ಯವಹರಿಸುತ್ತಿದ್ದಾರೆ ಎಂಬ ಮಾತುಗಳು ಹೆಚ್ಚಾದ ಬೆನ್ನಲ್ಲೇ ಭಾರತದ ಪ್ರಮುಖ ಸೆಲಬ್ರಿಟಿಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಬಿಲ್ ಗೇಟ್ಸ್ ಸೇರಿದಂತೆ ಹಲವರು ಬ್ಲೂಟಿಕ್ ಅನ್ನು ಕಳೆದುಕೊಂಡಿದ್ದರು.
ಇದಾದ ಕೆಲ ದಿನಗಳ ಬಳಿಕ ಬ್ಲೂ ಟಿಕ್‌ಗಳು ಕೆಲವು ಖಾತೆಗಳಿಗೆ ಮರಳಿದ್ದರೂ, ಶಾದಿ.ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಅವರ ಬ್ಲೂ ಟಿಕ್ ಅನ್ನು ತೆಗೆದುಹಾಕಿದಾಗ ಸ್ವಲ್ಪಮಟ್ಟಿಗೆ ಅವರು ಆಕ್ರೋಶಗೊಂಡಂತೆ ಕಾಣುತ್ತಿದೆ. ಅವರು ಖರೀದಿಸಲು ಯೋಜಿಸಿದ್ದ ಟೆಸ್ಲಾ ಕಾರನ್ನು ಖರೀದಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ ಟ್ವೀಟ್ ಬರವಣಿಗೆಯಲ್ಲಿರುವ ಕಾರಣ ಈ ಟ್ವೀಟ್ ಅನ್ನು ತಮಾಷೆಯ ರೀತಿಯಲ್ಲಿ ಅಥವಾ ಗಂಭೀರವಾದ ಧ್ವನಿಯಲ್ಲಿ ಬರೆಯಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಆದರೆ ಶಾದಿ.ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಅವರ ಟ್ವೀಟ್‌ಗೆ ಅವರ ಅನುಯಾಯಿಗಳಿಂದಲೇ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಟ್ವಿಟರ್ ಅನ್ನು ಹೊಂದಿರುವ ಎಲಾನ್ ಮಸ್ಕ್ ಅವರು ಜಾಗತಿಕವಾಗಿ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕರಲ್ಲಿ ಒಂದಾದ ಟೆಸ್ಲಾ ಇಂಕ್‌ನ ಮಾಲೀಕರಾಗಿದ್ದಾರೆ. ನೀವೊಬ್ಬರು ಕಾರು ಖರೀದಿಸದಿದ್ದರೇ ಅವರಿಗೇನು ನಷ್ಟವಿಲ್ಲ, ಹಾಗೆಯೇ ನೀವು ಖರೀದಿಸದಿದ್ದರೇ ಅವರು ನಿಮಗೆ ಬ್ಲೂಟ್ ಟಿಕ್ ಹಿಂತಿರುಗಿಸುವುದಿಲ್ಲ ಎಂಬೆಲ್ಲ ವ್ಯಂಗ್ಯ ಕಮೆಂಟ್‌ಗಳನ್ನು ಮಾಡಿದ್ದಾರೆ.
ಅನುಪಮ್ ಮಿತ್ತಲ್ ಅವರ ಈ ಒಂದೇ ಒಂದು ಟ್ವೀಟ್‌ನಿಂದಾಗಿ ಟ್ವಿಟ್ಟರ್ ಬಳಕೆದಾದರರಿಂದಲೇ ಆಕ್ರೋಶ ವ್ಯಕ್ತವಾಯಿತು. ನೀವು ನಿಮ್ಮ Shaadi.com ನಲ್ಲಿ ಚಂದಾದಾರಿಕೆಗೆ ಶುಲ್ಕ ವಿಧಿಸುತ್ತೀರಿ, ಹಾಗಯೇ ಟ್ವಿಟ್ಟರ್‌ನಲ್ಲಿ ಬ್ಲೂಟಿಕ್ ಗಾಗಿ ಚಂದಾದಾರಿಕೆ ಪಡೆಯಲು ನಿಮಗೆ ಆಗುವುದಿಲ್ಲವೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಹಾಗೆಯೇ ಇನ್ನೂ ಕೆಲವರು ಟಿಸ್ಲಾವನ್ನು ಬಿಟ್ಟು ಭಾರತೀಯ ಎಲೆಕ್ಟ್ರಿಕ್ ಕಾರು ಖರೀದಿಸಲು ಸಲಹೆ ನೀಡಿದ್ದು, ಟಾಟಾದವರ ಇವಿ ಕಾರುಗಳನ್ನು ಖರೀದಿಸಲು ಹೇಳಿದ್ದಾರೆ.

ಟ್ವಿಟರ್ ಪರಿಶೀಲನೆ ಬ್ಯಾಡ್ಜ್ ಗಳನ್ನು ತೆಗೆದುಹಾಕಿ ಮಾಲೀಕ ಎಲಾನ್ ಮಸ್ಕ್ ಅವರು ಕಾರ್ಯಗತಗೊಳಿಸುವುದಾಗಿ ಹೇಳಿದ ಮೊದಲ ವಿಷಯಗಳಲ್ಲಿ ಒಂದಾಗಿದೆ. Twitter ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಕಾರ್ಪೊರೇಷನ್ ಮೊದಲ ಬಾರಿಗೆ ಚಂದಾದಾರಿಕೆ ಸೇವೆಯನ್ನು ಪ್ರಾರಂಭಿಸಿದಾಗ ಪ್ರೀಮಿಯಂ ಆವೃತ್ತಿಗೆ ಬದಲಾಯಿಸುವ ಮೊದಲು 90 ದಿನಗಳ ಗ್ರೇಸ್ ಅವಧಿಯನ್ನು ನಿರ್ದಿಷ್ಟಪಡಿಸಿತ್ತು. ಸಾಂಪ್ರದಾಯಿಕ ನೀಲಿ ಚೆಕ್ ಮಾರ್ಕ್‌ಗಳನ್ನು ಏಪ್ರಿಲ್ 20 ರೊಳಗೆ ತೆಗೆದುಹಾಕಲಾಗುವುದು ಎಂದು ಏಪ್ರಿಲ್‌ನಲ್ಲಿ ಮಸ್ಕ್ ಹೇಳಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications