11 ವರ್ಷದ ಮಗನಿಗಾಗಿ ಅರಮನೆಯಂತಹ ಕಾರು ಖರಿದಿಸಿದ ಬಾದ್‌ಷಾ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಲೆಕ್ಸಸ್ ಕಂಪನಿ ನೀಡುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಎಲ್‌ಎಂ 350ಹೆಚ್ (Lexus LM350h) ಭಾರತೀಯ ಸಿನಿಮಾ ತಾರೆಗಳಿಂದಲೆ ಸಖತ್ ಜನಪ್ರಿಯತೆ ಪಡೆಯುತ್ತಿದೆ. ರಣಬೀರ್ ಕಪೂರ್, ಜಾನ್ವಿ ಕಪೂರ್, ರಾಮ್ ಚರಣ್, ಹಾರ್ದಿಕ್ ಪಾಂಡ್ಯ ಮಾತ್ರವಲ್ಲದೇ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಕೂಡ ಈ ಐಷಾರಾಮಿ ಕಾರನ್ನು ಹೊಂದಿದ್ದಾರೆ. ಇದರ ಒಳಾಂಗಣವು ಶ್ರೀಮಂತಿಕೆ ಮತ್ತು ಇತ್ತೀಚಿನ ತಂತ್ರಜ್ಞಾನ ಸೇರಿದಂತೆ ಅನುಕೂಲಕರ ಸೌಲಭ್ಯಗಳಿಂದ ತುಂಬಿದೆ. ಇಂತಹ ಅರಮನೆಯಂತಹ ಕಾರನ್ನು ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ತಮ್ಮ ಮಗನಿಗಾಗಿ ಖರೀದಿಸಿದ್ದಾರೆ.

ಮಗ ಅಬ್ರಾಮ್‌ಗಾಗಿ ಹೊಸ ಲೆಕ್ಸಸ್ ಎಲ್‌ಎಂ 350ಹೆಚ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ಮಕ್ಕಳು ಅತ್ಯಂತ ಐಷಾರಾಮಿ ಕಾರುಗಳನ್ನು ಬಳಸುವುದನ್ನು ನಾವು ನೋಡುತ್ತಿದ್ದೇವೆ. ಆದ್ರೆ ಇತ್ತೀಚೆಗೆ ಖರೀದಿಸಿ ಕೊಟ್ಟಿರುವ ಕಾರಿನ ವಿಶೇಷತೆಗಳಿಗೆ ನೋಡಿದ್ರೆ ಎಂಥವರು ಕೂಡ ಹುಬ್ಬೇರಿಸುವುದು ಖಚಿತ. ಬನ್ನಿ ಈ ಕಾರಿನ ವಿಶೇಷತೆಗಳನ್ನು ನೋಡೋಣ.

shahrukh-khan-buys-lexus-lm350h-for-his-son-abram

ವಿಶೇಷತೆಗಳು: 23-ಸ್ಪೀಕರ್ ಒಳಗೊಂಡಿರುವ ಪ್ರೀಮಿಯಂ ಆಡಿಯೊ ಸಿಸ್ಟಮ್, 48 ಇಂಚಿನ ಬೃಹತ್ ಟಿವಿ, ವಿಮಾನದಲ್ಲಿರುವ ರೆಕ್ಲೈನರ್ ಸೀಟುಗಳು, ಡಿಜಿಟಲ್ ರಿಯರ್ ವ್ಯೂ ಮಿರರ್, ವೈರ್‌ಲೆಸ್ ಫೋನ್ ಚಾರ್ಜರ್, ಮಡಚಿದ ಟೇಬಲ್‌ಗಳು, ಅಂಬ್ರೆಲಾ ಹೋಲ್ಡರ್, ಹಿಂಭಾಗದ ಗ್ಲೋವ್ ಬಾಕ್ಸ್, ಫ್ರಿಜ್, ಹೀಟರ್ ಆರ್ಮ್ರೆಸ್ಟ್ಸ್ ಮತ್ತು ಒಟ್ಟೋಮನ್‌ಗಳು, ಲೆಕ್ಸಸ್ ಸೇಫ್ಟಿ ಸಿಸ್ಟಮ್ 3+ (ಎಡಿಎಎಸ್)ನಂತಹ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ.

ಹೈಬ್ರಿಡ್ ಕಾರುಗಳ ವಿಷಯಕ್ಕೆ ಬಂದರೆ ಸದ್ಯ ಟೊಯೊಟಾ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ಹೈಬ್ರಿಡ್ ತಂತ್ರಜ್ಞಾನದ ಕಾರುಗಳನ್ನು ನೀಡುತ್ತಿರುವ ಕಂಪನಿಯಾಗಿದೆ. ಟೊಯೋಟಾಗೆ ಸಮಾನವಾಗಿ ಈಗ ಲೆಕ್ಸಸ್ ಕಂಪನಿಯು ಈ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಎಲ್‌ಎಂ 350ಹೆಚ್ ಐಷಾರಾಮಿ ಕಾರನ್ನು ನೀಡತ್ತಿದೆ. ಭಾರತದಲ್ಲಿ, ಈ ಬೃಹತ್ ಪ್ರೀಮಿಯಂ ಎಂಪಿವಿಯ ಆನ್ ರೋಡ್ ಬೆಲೆಯು ಬರೋಬ್ಬರಿ 2.87 ಕೋಟಿ ರೂ. ಇದೆ.

shahrukh-khan-buys-lexus-lm350h-for-his-son-abram

ಎಂಜಿನ್: 2.5-ಲೀಟರ್ 4-ಸಿಲಿಂಡರ್‌ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಹೊಂದಿದೆ. ಇದು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರು ಲೆಕ್ಸಸ್‌ನ ಇ-ಫೋರ್ ಡ್ರೈವ್‌ಟ್ರೇನ್ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ನೀಡುತ್ತದೆ. 250 ಬಿಹೆಚ್‌ಪಿ ಪವರ್ ಹಾಗೂ 239 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಶಾರುಖ್ ಮಗ ಕಾಣಿಸಿಕೊಂಡಿದ್ದು ಹೀಗೆ: ಶಾರುಖ್ ಕಿರಯ ಮಗ ಅಬ್ರಾಮ್ ಶಾಲೆ ಅಥವಾ ಕ್ರೀಡಾ ಅಕಾಡೆಮಿಯಂತೆ ಕಾಣುವ ಸ್ಥಳದಿಂದ ಕಾರನ್ನು ಹತ್ತುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾನೆ. ಅಬ್ರಾಮ್ ಜರ್ಸಿ ಧರಿಸಿದ್ದು, ಪಾಪರಾಜಿಗಳು ಬಾಲಕನ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಅಂತಿಮವಾಗಿ, ಲೆಕ್ಸಸ್ ಎಲ್ಎಂ 350 ಹೆಚ್ ಐಷಾರಾಮಿ ಎಂಪಿವಿಯನ್ನು ಹತ್ತಿ ತನ್ನ ಸ್ನೇಹಿತರ ಕೂಡ ಹೊರಟಿದ್ದಾರೆ.

ನಟ ಶಾರುಖ್ ಖಾನ್ ಅವರು ಅತ್ಯಂತ ದುಬಾರಿ ಕಾರುಗಳ ದೊಡ್ಡ ಗ್ಯಾರೆಜ್ ಹೊಂದಿದ್ದಾರೆ. ಇವರ ದೊಡ್ಡ ಮಗ ರೇಂಜ್ ರೋವರ್ ಹಾಗೂ ಮಗಳು ಮರ್ಸಿಡಿಸ್ ಬೆಂಝ್ ಕಾರುಗಳನ್ನು ಹೊಂದಿದ್ದಾರೆ. ಇದೀಗ ಹನ್ನೊಂದು ವರ್ಷದ ಮಗ ಅಬ್ರಾಮ್ ಬರೋಬ್ಬರಿ 2.87 ಕೋಟಿ ರೂ. ಬೆಲೆಯ ಲೆಕ್ಸಸ್ ಕಾರಿನಲ್ಲಿ ಓಡಾಡುತ್ತಾ ವೈರಲ್ ಆಗುತ್ತಿದ್ದಾನೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 21, 2024, 12:31 [IST]
English summary
Shahrukh khan buys lexus lm350h for his son abram
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+