ಶಕ್ತಿ ಯೋಜನೆ ಸ್ಥಗಿತ? ಟ್ರೋಲ್‌ಗಳಿಗೆ ಸೆಡ್ಡು... ಸ್ಪಷ್ಟನೆ ನೀಡಿದ ಸಾರಿಗೆ ಇಲಾಖೆ!

ಸಾಮಾಜಿಕ‌ ಜಾಲತಾಣಗಳಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆ ಕೊನೆಗೊಳ್ಳಲಿದ್ದು, ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಪ್ರಯಾಣ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ ಎಂಬುದಾಗಿ ಸುದ್ದಿಯನ್ನು ಪ್ರಕಟಿಸುತ್ತಿರುವುದು ಸತ್ಯಕ್ಕೆ ದೂರವಾದ ಹಾಗೂ ದುರುದ್ದೇಶದಿಂದ ಕೂಡಿದ ವಿಷಯವಾಗಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಮಹಿಳೆಯರ ಉಚಿತ‌ ಪ್ರಯಾಣದ ಶಕ್ತಿ ಯೋಜನೆಯು ಎಂದಿನಂತೆ ಮುಂದುವರೆಯಲಿದೆ. ಈ ರೀತಿಯ ಯಾವುದೇ ಗೊಂದಲದ ಸಂದೇಶಗಳನ್ನು ಸಾರ್ವಜನಿಕ ಪ್ರಯಾಣಿಕರು ನಂಬಬಾರದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಉಚಿತ ಸಾರಿಗೆ ಸೇವೆಯನ್ನು ಆರಂಭಿಸಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸುದ್ದಿಯಾಗುತ್ತಲೇ ಇವೆ. ಇದೀಗ ಕೊನೆಗೆ ಈ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ.

shakti-scheme-not-been-stopped-transport-department-clarified

ಇದಕ್ಕೂ ಹಲವು ಕಾರಣಗಳಿವೆ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಾರಿಗೆಯಲ್ಲಿ ಈ ಹಿಂದೆ ಎಂದೂ ಕಾಣದ ಬದಲಾವಣೆಗಳು ಈಗ ಆಗಿವೆ. ಪುರುಷ ಪ್ರಯಾಣಿಕರಿಗೆ ಸೀಟ್‌ಗಳೇ ಇಲ್ಲದಂತಾಗಿದೆ. ಬಸ್‌ನಲ್ಲಿ ಶೇ60 ರಷ್ಟು ಮಹಿಳೆಯರೇ ಪ್ರಯಾಣಿಸುತ್ತಿದ್ದಾರೆ. ಉಚಿತವಾಗಿ ರಾಜ್ಯ ಮಹಿಳೆಯರಿಗೆ ರಾಜ್ಯದ ಯಾವುದೇ ಮೂಲೆಗೆ ಇಲಾಖೆಯ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿರುವ ಕಾರಣ ಸರ್ಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿ, ಖಸಗಿ ಸಾರಿಗೆಗಳಿಗೆ ತೀವ್ರ ಹೊಡೆತ ಬಿದ್ದಿದೆ.

ಜೂನ್ 11 ರಂದು ಪ್ರಾರಂಭವಾದ ಈ ಯೋಜನೆ ಆಗಸ್ಟ್ 13 ರವರೆಗೆ 38.69 ಕೋಟಿ ಮಹಿಳೆಯರಿಗೆ ಪ್ರಯೋಜನವನ್ನು ನೀಡಿದೆ. ಹಾಗೆಯೇ ಸರ್ಕಾರದ ಬೊಕ್ಕಸಕ್ಕೆ 899 ಕೋಟಿ ರೂಪಾಯಿ ವೆಚ್ಚವಾಗಿದೆ. ಹೀಗಿದ್ರೂ ಕೂಡ ಸರ್ಕಾರ ಯಾವುದೇ ರೀತಿಯಲ್ಲೂ ಯೋಜನೆಯನ್ನು ಸ್ಥಗಿತಗೊಳಿಸುವ ಯೋಚನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

shakti-scheme-not-been-stopped-transport-department-clarified

ಅಪಾಯಕಾರಿ ಪ್ರಯಾಣ: ಈ ಯೋಜನೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಕಾರಣ ಬಸ್‌ಗಳು ತುಂಬಿತುಳುಕುತ್ತಿವೆ. ಅದೇ ಈಗ ಅಪಾಯಕಾರಿ ಪ್ರಯಾಣಕ್ಕೂ ದಾರಿ ಮಾಡಿಕೊಡುತ್ತಿದೆ. ಇತ್ತೀಚೆಗೆ ಗದಗ ನಗರದಲ್ಲಿ ಮಗುವನ್ನು ಮಹಿಳೆಯೊಬ್ಬರು ಮಡಿಲಿನಲ್ಲಿ ಮಲಗಿಸಿಕೊಂಡು ಫುಟ್‌ಬೋರ್ಡ್‌ನಲ್ಲಿ ಕುಳಿತುಕೊಂಡು ಪ್ರಯಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಿಕೆಟ್ ವಿಚಾರವಾಗಿ ಗಲಾಟೆ: ಕೆಲ ಹೊರರಾಜ್ಯದ ಮಹಿಳೆಯರು ಟಿಕೆಟ್ ಪಡೆಯದೇ ಆಧಾರ್ ತೋರಿಸದೇ ಪ್ರಯಾಣ ಮಾಡುತ್ತಿದ್ದು, ಕಂಡಕ್ಟರ್‌ಗಳೊಂದಿಗೆ ಜಗಳವಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಮತ್ತೊಂದೆಡೆ ಪುರುಷರು ಕೂಡ ಟಿಕೆಟ್ ಪಡೆಯದೇ ಮಹಿಳೆಯರಂತೆ ಉಚಿತವಾಗಿ ಪ್ರಯಾಣಿಸುತ್ತೇವೆ ಎಂದು ಚಾಲಕ, ನಿರ್ವಾಹಕರೊಂದಿಗೆ ವಾಗ್ವಾದಕ್ಕಿಳಿದ ಘಟನೆಗಳು ನಡೆದಿವೆ. ಯೋಜನೆ ಆರಂಭವಾದಾಗಿನಿಂದ ಈಗಿನ ವೆರೆಗೆ ಇಂತಹ ನೂರಾರು ಘಟನೆಗಳು ನಡೆದಿವೆ.

shakti-scheme-not-been-stopped-transport-department-clarified

ಟ್ರೋಲ್‌ಗಳು: ಉಚಿತ ಬಸ್‌ ಸೇವೆಯಿಂದ ಆಗುತ್ತಿರುವ ಕೆಲ ವಿವಾದಗಳನ್ನೇ ಹೈಲೆಟ್ ಮಾಡುತ್ತಾ ಟ್ರೋಲ್ ಮಾಡಲಾಗುತ್ತಿದೆ. ಒಂದನ್ನು ಎರಡರಂತೆ ತೋರಿಸುತ್ತಾ ಸಾರ್ವಜನಿಕರಿಗೆ ಮನರಂಜನೆ ನೀಡುವ ನೆಪದಲ್ಲಿ ಈ ಯೋಜನೆ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಟ್ರೋಲರ್‌ಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಆದ್ರೆ ಇದ್ಯಾವುದನ್ನು ನಂಬದಿರಿ ಎಂದು ಇದೀಗ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.

ಇಲಾಖೆಯ ಸ್ಪಷ್ಟನೆ: ಸಾಮಾಜಿಕ‌ ಜಾಲತಾಣಗಳಲ್ಲಿ ಶಕ್ತಿ ಯೋಜನೆ ಕೊನೆಗೊಳ್ಳಲಿದ್ದು, ಮಹಿಳೆಯರಿಗೆ ಉಚಿತ ಪ್ರಯಾಣ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿಯನ್ನು ಪ್ರಕಟಿಸಲಾಗುತ್ತಿದೆ. ಇಂತಹ ಗೊಂದಲದ ಸಂದೇಶಗಳನ್ನು ಸಾರ್ವಜನಿಕರು ನಂಬಬಾರದು. ಈ ಬಗ್ಗೆ ಇಲಾಖೆಯು ಸಾರ್ವಜನಿಕರಿಗೆ ಕಾಲಕಾಲಕ್ಕೆ ಸಮರ್ಪಕವಾದ ಮಾಹಿತಿಯನ್ನು ಒದಗಿಸುತ್ತದೆ. ಮಹಿಳೆಯರ ಉಚಿತ‌ ಪ್ರಯಾಣ ಎಂದಿನಂತೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ.

shakti-scheme-not-been-stopped-transport-department-clarified

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, August 16, 2023, 17:30 [IST]
English summary
Shakti scheme not been stopped transport department clarified
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+