Ratan Tata: ಆತ್ಮೀಯ ಖರೀದಿಸಿದ ಹೊಸ ಸಫಾರಿ ಕಾರು, ಅಚ್ಚರಿಗೊಂಡ ರತನ್ ಟಾಟಾ... ಫುಲ್ ವೈರಲ್

ಭಾರತದಲ್ಲಿ ಟಾಟಾ (Tata) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ, ನವೀಕರಿಸಿದ (Facelift) ಸಫಾರಿ (Safari), ಹ್ಯಾರಿಯರ್ (Harrier) ಎಸ್‌ಯುವಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ರತನ್ ಟಾಟಾ (Ratan Tata) ಅವರ ಮ್ಯಾನೇಜರ್ ಶಂತನು ನಾಯ್ಡು (Shantanu Naidu) ಸಹ ನೂತನ ಟಾಟಾ ಸಫಾರಿ ಖರೀದಿಸಿದ್ದಾರೆ.

ರತನ್ ಟಾಟಾ ಅವರೊಂದಿಗೆ ಶಂತನು ನಾಯ್ಡುಯಿರುವ ಹಲವು ಚಿತ್ರ ಹಾಗೂ ವಿಡಿಯೋಗಳನ್ನು ನೀವು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಈ ಶಂತನು, ರತನ್ ಟಾಟಾ ಅವರ ಮ್ಯಾನೇಜರ್ ಮಾತ್ರವಲ್ಲದೆ ಕೇರ್ ಟೇಕರ್ ಕೂಡ ಆಗಿದ್ದಾರೆ. ರತನ್ ಟಾಟಾ ನೆರವಿನಿಂದ 2022ರಲ್ಲಿ 'ಗುಡ್‌ಫೆಲೋಸ್' ಎಂಬ ಕಂಪನಿಯನ್ನು ಶಂತನು ನಾಯ್ಡು ಹುಟ್ಟುಹಾಕಿದ್ದಾರೆ.

Ratan Tata: ಆತ್ಮೀಯ ಖರೀದಿಸಿದ ಹೊಸ ಸಫಾರಿ ಕಾರು, ಅಚ್ಚರಿಗೊಂಡ ರತನ್ ಟಾಟಾ.. ವೈರಲ್

ಸದ್ಯ, ಶಂತನು ನಾಯ್ಡು ಕೊಂಡುಕೊಂಡಿರುವ ಹೊಚ್ಚ ಹೊಸ ಟಾಟಾ ಸಫಾರಿ ಎಸ್‌ಯುವಿಯನ್ನು ರತನ್ ಟಾಟಾ ಅಚ್ಚರಿಯಿಂದ ವೀಕ್ಷಿಸುತ್ತಿರುವ ಫೋಟೋಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿವೆ. ಶಂತನು, ಸಫಾರಿಯ ಅಕಾಂಪ್ಲಿಶ್ಡ್ ಪ್ಲಸ್ ಟಾಪ್ - ಎಂಡ್ ರೂಪಾಂತರವನ್ನು ಖರೀದಿಸಿದ್ದಾರೆ. ಈ ರೂಪಾಂತರವನ್ನು ಹೊಂದಿರುವ ಮೊದಲ ಕೆಲವು ವ್ಯಕ್ತಿಗಳಲ್ಲಿ ಶಂತನು ಕೂಡ ಒಬ್ಬರಾಗಿದ್ದಾರೆ.

ಶಂತನು ನಾಯ್ಡು ಬಳಿಯಿರುವ ಈ ಸಫಾರಿ ಬಿಳಿ ಬಣ್ಣವನ್ನು ಹೊಂದಿದ್ದು, ಈಗಾಗಲೇ 1,000 ಕಿಲೋಮೀಟರ್ ಓಡಿಸಿದ್ದಾರೆ. ಅವರು ತಮ್ಮ ಕಾರಿಗೆ 'ಯುಕಿ' ಎಂದು ಹೆಸರಿಟ್ಟಿದ್ದಾರೆ. ಮೊದಲಿಗೆ ಶಂತನು ಟಾಟಾ ನ್ಯಾನೋ ಕಾರನ್ನು ಬಳಕೆ ಮಾಡುತ್ತಿದ್ದರು. ಈ ಬಗ್ಗೆ ಸ್ವತಃ ಶಂತನು ಅವರು 'ಸಫಾರಿ ಫೇಸ್‌ಲಿಫ್ಟ್‌ನ ವಿನ್ಯಾಸವು ನನ್ನನ್ನು ಹೆಚ್ಚು ಆಕರ್ಷಿತಗೊಳಿಸಿತು. ಅದು ಒಂದಲ್ಲ - ಎರಡು ಬಾರಿ ನಿಂತು ತಿರುಗಿ ನೋಡುವಂತೆ ಮಾಡಿತು' ಎಂದಿದ್ದಾರೆ.

Ratan Tata: ಆತ್ಮೀಯ ಖರೀದಿಸಿದ ಹೊಸ ಸಫಾರಿ ಕಾರು, ಅಚ್ಚರಿಗೊಂಡ ರತನ್ ಟಾಟಾ.. ವೈರಲ್

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ನವೀಕರಿಸಿದ ಟಾಟಾ ಸಫಾರಿ ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಈ ಕಾರು, ರೂ.16.19 ಲಕ್ಷ ಆರಂಭಿಕ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಸ್ಮಾರ್ಟ್ (ಒ), ಪ್ಯೂರ್ (ಒ), ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಡ್ವೆಂಚರ್ ಪ್ಲಸ್ ಡಾರ್ಕ್, ಅಕಾಂಪ್ಲಿಶ್ಡ್, ಅಕಾಂಪ್ಲಿಶ್ಡ್ ಡಾರ್ಕ್ ಸೇರಿದಂತೆ 10 ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ.

ಟಾಟಾ ಸಫಾರಿ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2 - ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 170 PS ಪವರ್ ಮತ್ತು 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 6 - ಸ್ವೀಡ್ ಮ್ಯಾನುವಲ್ ಅಥವಾ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, 16.30 ಕಿ.ಮೀ ಮೈಲೇಜ್ ನೀಡಬಹುದು.

Ratan Tata: ಆತ್ಮೀಯ ಖರೀದಿಸಿದ ಹೊಸ ಸಫಾರಿ ಕಾರು, ಅಚ್ಚರಿಗೊಂಡ ರತನ್ ಟಾಟಾ.. ವೈರಲ್

ವೈಶಿಷ್ಟ್ಯ ವಿಚಾರವಾಗಿ ಹೇಳುವುದಾದರೆ, ಈ ಕಾರು, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್, ಆಪಲ್ ಕಾರ್‌ ಪ್ಲೇ, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆ ದೃಷ್ಟಿಯಿಂದ 7 ಏರ್‌ಬ್ಯಾಗ್‌, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಾದರೂ ಟಾಟಾ ಸಫಾರಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಈ ನವೆಂಬರ್ ತಿಂಗಳು ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ. ನೀವು ಇವತ್ತು ಈ ಕಾರನ್ನು ಬುಕ್ಕಿಂಗ್ ಮಾಡಿದರೂ 4 ರಿಂದ 6 ವಾರಗಳೊಳಗೆ ವಿತರಣೆ ಸಿಗುತ್ತದೆ. ಇದು ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್, ಸ್ಟಾಕ್ ಲಭ್ಯತೆ ಆಧರಿಸಿ, ಬೇರೆ ಇರಲಿದೆ. ಮುಂಬರುವ ದಿನಗಳಲ್ಲಿ ಈ ಎಸ್‌ಯುವಿಗೆ ಮತ್ತಷ್ಟು ಡಿಮ್ಯಾಂಡ್ ಬರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Team BHP

Article Published On: Wednesday, November 29, 2023, 10:44 [IST]
English summary
Shantanu naidu buys new tata safari suv ratan tata viewed his managers car viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+