ಪೋರ್ಷೆ ಕಾರಲ್ಲಿ ಸುತ್ತಾಡಿದ ಶರಪೋವಾ-ವೆಬ್ಬರ್

By Nagaraja

ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಮೆಂಟ್ ಕಿರೀಟ ಮುಡಿಗೇರಿಸಿಕೊಂಡಿದ್ದ ರಷ್ಯಾ ಆಟಗಾರ್ತಿ ಮರಿಯಾ ಶರಪೋವಾ ಮತ್ತೆ ತಮ್ಮ ಹಳೆ ಫಾರ್ಮ್ ಮರಳಿ ಗಿಟ್ಟಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿರುವ ರಷ್ಯಾ ಸುಂದರಿ ಶರಪೋವಾ ನೇರವಾಗಿ ವಿಂಬಲ್ಡನ್ ಟೂರ್ನಿಯಲ್ಲಿ ಭಾಗವಹಿಸಲು ಲಂಡನ್‌ನತ್ತ ಪಯಣಿಸಿದ್ದಾರೆ.

ಈ ಸಂದರ್ಭದಲ್ಲಿ ನಡೆದ ವಿಂಬಲ್ಡನ್ ಪೂರ್ವಭಾವಿ ಪಾರ್ಟಿಯಲ್ಲಿ ಭಾಗವಹಿಸಿರುವ ಶರಪೋವಾ, ಖ್ಯಾತ ರೇಸ್ ಪಟು ಮಾರ್ಕ್ ವೆಬ್ಬರ್ ಜೊತೆಗೆ ಪೋರ್ಷೆ ಐಷಾರಾಮಿ ಕಾರಲ್ಲಿ ಸುತ್ತಾಡಿದ್ದಾರೆ.

ಪೋರ್ಷೆ ಕಾರಲ್ಲಿ ಸುತ್ತಾಡಿದ ಶರಪೋವಾ-ವೆಬ್ಬರ್

ಪೋರ್ಷೆ ಪ್ರಚಾರ ರಾಯಭಾರಿ ಕೂಡಾ ಆಗಿರುವ ಶರಪೋವಾ ಸದ್ಯ ಅತ್ಯುನ್ನತ ಫಾರ್ಮ್‌ನಲ್ಲಿದ್ದಾರೆ. ಹಾಗೆಯೇ ವೆಬ್ಬರ್ ಜೊತೆಗೂಡಿ ಪೋರ್ಷೆ 918 ಸ್ಪೈಡರ್ ಹೈಬ್ರಿಡ್ ಸೂಪರ್ ಕಾರಿನಲ್ಲಿ ಒಂದು ರೌಂಡ್ ಹೊಡೆದಿದ್ದರು.

ಪೋರ್ಷೆ ಕಾರಲ್ಲಿ ಸುತ್ತಾಡಿದ ಶರಪೋವಾ-ವೆಬ್ಬರ್

ಅಷ್ಟಕ್ಕೂ ನಿಮಗೆ ಪೋರ್ಷೆ 918 ಸ್ಪೈಡರ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲದಿದ್ದರೆ ನಾವಿದನ್ನು ಹೇಳಿಕೊಡಲಿದ್ದೇವೆ. ಜಗತ್ತಿನ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಪೋರ್ಷೆ 918 ಸ್ಪೈಡರ್ 4.6 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 608 ಅಶ್ವಶಕ್ತಿ ಉತ್ಪಾದಿಸುತ್ತಿದೆ.

ಪೋರ್ಷೆ ಕಾರಲ್ಲಿ ಸುತ್ತಾಡಿದ ಶರಪೋವಾ-ವೆಬ್ಬರ್

ಅಲ್ಲದೆ ಎರಡು ಎಲೆಕ್ಟ್ರಿಕ್ ಮೋಟಾರುಗಳನ್ನು ಒಳಗೊಂಡ ಲಿಥಿಯಂ ಇಯಾನ್ ಬ್ಯಾಟರಿ ಇದರಲ್ಲಿ ಆಳವಡಿಸಲಾಗಿದೆ. ಈ ಮೂಲಕ ಪರಿಪೂರ್ಣ ಹೈಬ್ರಿಡ್ ಕಾರೆನಿಸಿಕೊಂಡಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರುಗಳು ಸ್ವತಂತ್ರವಾಗಿಯೂ ಅಲ್ಲದೆಯೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಈ ಮೂಲಕ ಗರಿಷ್ಠ ನಿರ್ವಹಣೆ ನೀಡಲಿದೆ.

ಪೋರ್ಷೆ ಕಾರಲ್ಲಿ ಸುತ್ತಾಡಿದ ಶರಪೋವಾ-ವೆಬ್ಬರ್

ಎರಡು ಎಲೆಕ್ಟ್ರಿಕ್ ಮೋಟಾರುಗಳ ಜೊತೆಗೂಡಿದಾಗ ಒಟ್ಟು 887 ಅಶ್ವಶಕ್ತಿ ಉತ್ಪಾದಿಸಲು ನೆರವಾಗುತ್ತದೆ. ಹಾಗೆಯೇ ಐದು ವಿಧದ ಆಪರೇಂಟಿಂಗ್ ಮೋಡ್ ಇದರಲ್ಲಿದೆ.

ಪೋರ್ಷೆ ಕಾರಲ್ಲಿ ಸುತ್ತಾಡಿದ ಶರಪೋವಾ-ವೆಬ್ಬರ್

ವೆಬ್ಬರ್ ಅವರು ಪೋರ್ಷೆ ಲಿಮ್ಯಾನ್ 24 ಹವರ್ ರೇಸ್ ಚಾಲಕರಾಗಿದ್ದರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಶರಪೋವಾ, ಪೋರ್ಷೆ ಕಾರಿನಲ್ಲಿ ವೆಬ್ಬರ್ ಜತೆಗಿನ ಚಾಲನೆ ನಿಜಕ್ಕೂ ಅದ್ಭುತವಾಗಿತ್ತು ಎಂದಿದ್ದಾರೆ.

ಪೋರ್ಷೆ ಕಾರಲ್ಲಿ ಸುತ್ತಾಡಿದ ಶರಪೋವಾ-ವೆಬ್ಬರ್

ಅಂದ ಹಾಗೆ ಪೋರ್ಷೆ 916 ಸ್ಪೈಡರ್ ಹೈಬ್ರಿಡ್ ಕಾರು ಕೇವಲ 2.5 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ಮೈಲ್ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಪೋರ್ಷೆ ಕಾರಲ್ಲಿ ಸುತ್ತಾಡಿದ ಶರಪೋವಾ-ವೆಬ್ಬರ್

ಸದ್ಯ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿರುವ ಶರಪೋವಾ ಮುಂದಿನ ದಿನಗಳಲ್ಲಿ ಇನ್ನಷ್ಟು ಸೂಪರ್ ಕಾರಿನಲ್ಲಿ ಓಡಾಡುವ ನಿರೀಕ್ಷೆಯಿದೆ.

More from DriveSpark

Article Published On: Wednesday, June 25, 2014, 16:44 [IST]
English summary
Maria Sharapova driven to WTA Pre-Wimbledon party in pioneering Porsche 918 Spyder by works Porsche Le Mans racing driver Mark Webber Sharapova impressed by 918 Spyder.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+