ಶಿಲ್ಪಾ ಶೆಟ್ಟಿ - ರಾಜ್ ಕುಂದ್ರಾ ಆಟೋದಲ್ಲಿ ರೊಮ್ಯಾಂಟಿಕ್ ವಿವಾಹ ವಾರ್ಷಿಕೋತ್ಸವ: ರಾತ್ರಿ ವಿಡಿಯೋ ವೈರಲ್!
ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಬಾಲಿವುಡ್‌ನಲ್ಲಿ ಜನಪ್ರಿಯ ನಟಿಗಳಲ್ಲಿ ಒಬ್ಬರಾಗಿದ್ದಾರೆ. ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟೆ ನಂತರ ಬಾಲಿವುಡ್‌ಗೆ ತೆರಳಿದ್ದರು. ನಂತರ ಬಾಲಿವುಡ್‌ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಭಾರೀ ಜನಪ್ರಿಯತೆಯನ್ನು ಗಳಿಸಿದ್ದರು. ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ವಿವಾಹ ವಾರ್ಷಿಕೋತ್ಸವವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಪ್ರೇಮಿಗಳ ಪ್ರೀತಿಯ ನಗರವಾದ ಪ್ಯಾರಿಸ್ ನಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಬೇಕೆಂಬ ಕನಸು ಇರುತ್ತದೆ.
ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಅವರು 2009ರಲ್ಲಿ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರನ್ನು ವಿವಾಹವಾದರು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಹ-ಮಾಲೀಕರಾಗಿದ್ದ ರಾಜ್ ಅವರು ಖ್ಯಾತ ಉದ್ಯಮಿಯಾಗಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನದಲ್ಲಿ ಹಲವು ಪರೀಕ್ಷೆಗಳನ್ನು ದಾಟಿದ್ದರೂ ಶಿಲ್ಪಾ-ರಾಜ್ ಸಂಬಂಧ ಗಟ್ಟಿಯಾಗಿದೆ. ಆದರೆ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ಪದೇ ಪದೇ ವಿವಾದಗಳ ಮೂಲಕ ಸುದ್ದಿ ಆಗುತ್ತಿರುತ್ತಾರೆ.

ಐಪಿಎಲ್, ಅಶ್ಲೀಲ ಸಿನಿಮಾ ನಿರ್ಮಾಣ ಕೇಸ್ ಹೀಗೆ ಬದುಕಿನಲ್ಲಿ ಎಷ್ಟೇ ವಿವಾದಗಳಾದರೂ ಅವರಿಬ್ಬರು ಪರಸ್ಪರ ಅರ್ಥ ಮಾಡಿಕೊಂಡು15 ವರ್ಷಗಳ ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಜೀವನದ ಚಿಕ್ಕ ಕ್ಷಣಗಳನ್ನೂ ಸಂಭ್ರಮಿಸುವ ಜೋಡಿಗಳು ಆಟೋರಿಕ್ಷಾದಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ನಿರ್ಧರಿಸಿದ್ದಾರೆ.ಈ ವಿಡಿಯೋವನ್ನು ನಟಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಆಟೋ ಓಡಿಸುವಾಗ ಪತಿಯ ಭುಜದ ಮೇಲೆ ಒರಗಿ ಹಾಡು ಹೇಳುತ್ತಿರುವ ಶಿಲ್ಪಾ ಅವರನ್ನು ನೋಡುತ್ತೇವೆ. ನೀವು ಪ್ರಯಾಣವನ್ನು ಆನಂದಿಸುತ್ತಿದ್ದೀರಾ ಎಂದು ಕೇಳಿದಾಗ, ರಾಜ್ ಒಮ್ಮೆಗೆ ಹೌದು ಎಂದು ಹೇಳುವುದನ್ನು ನೋಡಬಹುದು. ಈ ವಿಡಿಯೋ ವೈರಲ್ ಆಗಲು ಕಾರಣವೇನು ಎಂದು ನೀವು ಕೇಳಿದರೆ, ಶಿಲ್ಪಾ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಆಸ್ತಿ ಸುಮಾರು 3000 ಕೋಟಿ ರೂ. ಕೋಟ್ಯಂತರ ರೂಪಾಯಿ ಇದೆ.

ಅಲ್ಲದೇ ಖಾಸಗಿ ವಿಮಾನ ಕೂಡ ಇದೆ. ಇನ್ನು ಅವರ ಗ್ಯಾರೇಜಿನಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರುಗಳ ಸಾಲು ಕಾಣಸಿಗುತ್ತದೆ. ಕೋಟಿಗಟ್ಟಲೆ ಖರ್ಚು ಮಾಡಿ ಆನಿವರ್ಸರಿ ನೈಟ್ ಆಚರಿಸಿಕೊಳ್ಳಬಹುದಾದ ಜೋಡಿ ಸಾಮಾನ್ಯರಂತೆ ಆಟೋದಲ್ಲಿ ಓಡಾಡಿದ್ದು ಅಭಿಮಾನಿಗಳಿಗೆ ಇಷ್ಟವಾಗಿತ್ತು. ಶಿಲ್ಪಾ ಮತ್ತು ರಾಜ್ ಇತ್ತೀಚೆಗೆ ತಮ್ಮ ಗ್ಯಾರೇಜ್‌ಗೆ ಕೆಂಪು ಫೆರಾರಿ ಪೋರ್ಟೊಫಿನೊವನ್ನು ಸೇರಿಸಿದ್ದಾರೆ.
ಕೆಲವು ವಾರಗಳ ಹಿಂದೆ ರಾಜ್ ಈ ಕಾರಿನಲ್ಲಿ ಶಿಲ್ಪಾ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಡ್ರಾಪ್ ಮಾಡಿದ ದೃಶ್ಯಗಳು ವೈರಲ್ ಆಗಿತ್ತು. ಫೆರಾರಿ ರೋಮಾ ಬದಲಿಯಾಗಿ ಬಂದಿರುವುದರಿಂದ ಪೋರ್ಟೊಫಿನೊ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹಾಗಾಗಿ ಇದು ಬಳಸಿದ ಕಾರು ಎಂದು ತೋರುತ್ತದೆ. ಸೆಲೆಬ್ರಿಟಿಗಳು ಈಗ ಕಡಿಮೆ ಬೆಲೆಯಲ್ಲಿ ಐಷಾರಾಮಿ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಫೆರಾರಿಯ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರ್ ಆಗಿರುವ ಪೋರ್ಟೊಫಿನೊ ಎಂ ಮಾಡೆಲ್ ಆ ಸಮಯದಲ್ಲಿ ಎಕ್ಸ್ ಶೋ ರೂಂ ಬೆಲೆ ಸುಮಾರು 4.04 ಕೋಟಿ ರೂ. ಆಗಿದೆ. ನಟಿ ಶಿಲ್ಪಾ ಅವರ ಬಳಿ ಲ್ಯಾಂಬೋರ್ಗಿನಿ ಅವೆಂಟಡಾರ್, ಬಿಎಂಡಬ್ಲ್ಯು i8, ಬೆಂಟ್ಲಿ ಕಾಂಟಿನೆಂಟಲ್ GT, ಬೆಂಟ್ಲಿ ಫ್ಲೈಯಿಂಗ್ ಸ್ಪರ್, ಬಿಎಂಡಬ್ಲ್ಯು X5 ಮತ್ತು ಬಿಎಂಡಬ್ಲ್ಯು 730Ld ನಂತಹ ಸೂಪಾರ್ ಕಾರುಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications