ಶಿಲ್ಪಾಳ 1ರ ಹರೆಯದ ಮಗನಿಗೆ ಸಿಕ್ತು ಲಂಬೋರ್ಗಿನಿ ಕಾರು
ಬಹುತೇಕ ಸೆಲೆಬ್ರಿಟಿಗಳು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ತಾರೆಯರು ಸಹ ಇದರಿಂದ ಹೊರತಾಗಿಲ್ಲ. ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಕೂಡಾ ಹೆಚ್ಚು ಪ್ರಚಾರದಲ್ಲಿದ್ದಾರೆ.
ಸೆಲೆಬ್ರಿಟಿಗಳು ತಮ್ಮ ಆಡಂಬರ ಜೀವನಶೈಲಿಗೆ ತಕ್ಕಂತೆ ತಮ್ಮ ಮಕ್ಕಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯನ್ನು ನೀಡುತ್ತಿರುವುದು ಸಾಮಾನ್ಯ. ಕೆಲವು ತಿಂಗಳುಗಳ ಹಿಂದೆ ಬಾಲಿವುಡ್‌ನ 'ಬಿಗ್ ಬಿ' ಖ್ಯಾತಿಯ ಅಮಿತಾಬ್ ಬಚ್ಚನ್ ತಮ್ಮ ಮೊಮ್ಮಳಿಗೆ ದುಬಾರಿ ಕಾರು ನೀಡಿರುವುದು ದೊಡ್ಡ ಸುದ್ದಿಯಾಗಿತ್ತು.
ಆದರೆ ಇದರಿಂದ ಸ್ವಲ್ಪ ವಿಭಿನ್ನವಾಗಿ ಯೋಚಿಸಿರುವ ರಾಜ್ ದಂಪತಿಗಳು ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಮ್ಮ ಮಗ ವಿಯಾನ್‌ಗೆ ದುಬಾರಿ ಲಂಬೋರ್ಗಿನಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಹೌದು, ಅದರಲ್ಲೇನಿದೆ ವಿಶೇಷ ಎಂಬ ಗೊಂದಲ ನಿಮ್ಮಲ್ಲಿ ಕಾಡಬಹುದು. ಯಾಕೆಂದರೆ ರಾಜ್ ದಂಪತಿಗಳು ನೀಡಿರುವುದು ನೈಜ ಲಂಬೋರ್ಗಿನಿ ಕಾರಲ್ಲ. ಬದಲಾಗಿ ಲಂಬೋರ್ಗಿನಿ ತದ್ರೂಪ ಹೊಂದಿರುವ ಆಟಿಕೆ ಕಾರನ್ನು ಒದಗಿಸಿದ್ದಾರೆ.

ಮಕ್ಕಳಿಗೆ ಆಟಿಕೆಗಳೆಂದರೆ ತುಂಬಾ ಪ್ರಿಯವಾದುದು. ಇದೇ ಕಾರಣಕ್ಕಾಗಿ ಲಂಬೋರ್ಗಿನಿ ಆಟಿಕೆ ಕಾರನ್ನು ವಿಯಾನ್‌ಗೆ ರಾಜ್ ದಂಪತಿಗಳು ಒದಗಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಸಂತೋಷ ಹಂಚಿಕೊಂಡಿರುವ ಶಿಲ್ಪಾ ಪ್ರಸ್ತುತ ಲಂಬೋರ್ಗಿನಿ ಕಾರನ್ನು ಮಗುವಿನ ಇಬ್ಬರು ತಾತಾ ಸೇರಿ ಜೋಡಣೆ ಮಾಡಿರುವುದಾಗಿ ತಿಳಿಸಿದ್ದಾರೆ.

ಇತರ ಸೆಲೆಬ್ರಿಟಿಗಳಂತೆ ಶಿಲ್ಪಾ ಶೆಟ್ಟಿ ಕೂಡಾ ಐಷಾರಾಮಿ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅವರ ಬಳಿ ಬೆಂಟ್ಲಿಯ ಆಕರ್ಷಕ ಲಗ್ಷುರಿ ಕೂಪೆ ಕಾರಿದೆ.

ಸಾಮಾನ್ಯವಾಗಿ ಬೆಂಟ್ಲಿ ಕಾರಲ್ಲಿ ಸಂಚರಿಸುವುದನ್ನು ಶಿಲ್ಪಾ ಇಷ್ಟಪಡುತ್ತಾರೆ.

ಕಂಪನಿಯು ಇದರಲ್ಲಿ 5998 ಎಂಜಿನ್ ಸಾಮರ್ಥ್ಯವುಳ್ಳ ಎಂಜಿನ್ ಆಳವಡಿಸಿದೆ.

ಅಂದ ಹಾಗೆ ಬೆಂಟ್ಲಿ ಕಾರು ಒಂದು ಕೋಟಿ ರು.ಗಳಿಗಿಂತಲೂ ದುಬಾರಿಯಾಗಿದೆ.

ಶಿಲ್ಪಾ ಶೆಟ್ಟಿ ಬೆಂಟ್ಲಿ ಸವಾರಿ

ಶಿಲ್ಪಾ ಶೆಟ್ಟಿ ಬೆಂಟ್ಲಿ ಸವಾರಿ



Click it and Unblock the Notifications








