ಮಿಸ್ ಮಾಡದಿರಿ: ಹಡಗಿನ ಆಕಾರದ ಐಷಾರಾಮಿ ಹೋಟೆಲ್
ಮೊದಲ ನೋಟದಲ್ಲಿ ಮಿಲಿಯನ್ ಡಾಲರ್ ವೆಚ್ಚದ ಹಡಗು ಸಮುದ್ರ ಬದಿಯ ಬಂಡೆ ಕಲ್ಲಿನ ಮೇಲೆ ನಿಲ್ಲಿಸಿರುವಂತೆ ಭಾಸವಾಗುತ್ತದೆ. ಆದರೆ ನಿಮ್ಮ ಮಾಹಿತಿಗಾಗಿ, ನಾವು ಹೇಳ ಬಯಸುವುದೇನೆಂದರೆ ಇದು ಬರಿ ಹಡಗಲ್ಲ. ಬದಲಾಗಿ ಹಡಗಿನ ಆಕೃತಿಯಲ್ಲಿರುವ ಬಹು ಕೋಟಿ ವೆಚ್ಚದ ಹೋಟೆಲ್ ಇದಾಗಿದೆ.
Also Read: ಸಾಗರದೊಳಗೆ ಮುಳುಗಿರುವ 18 ಅವಿಶ್ವಸನೀಯ ಹಡಗುಗಳು
ಇಲ್ಲಿಗೆ ಆಗಮಿಸುವ ಯಾತ್ರಿಕರಿಗೆ ಹಡಗಿನ ನೈಜ ಅನುಭವ ನೀಡುವ ಏಕ ಉದ್ದೇಶದೊಂದಿಗೆ ಇದನ್ನು ನಿರ್ಮಿಸಲಾಗಿದೆ. ಅಷ್ಟಕ್ಕೂ ಅಂದತೆಯ ಪ್ರತೀಕವಾದ ಪ್ರವಾಸಿಗರನ್ನು ಕಣ್ಮಣ ಸೆಳೆಯುವ ಈ ಹಡಗು ಎಲ್ಲಿದೆ ಗೊತ್ತಾ? ಇನ್ನಿತರ ಕುತೂಹಲದಾಯಕ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಭೇಟಿ ಕೊಡಿರಿ.

ದಕ್ಷಿಣ ಕೊರಿಯಾದ ಜಿಯಾನ್‌ಡಾಂಗ್ಜಿನ್ (Jeongdongjin) ಸನ್ ಕ್ರೂಸರ್ ರಿಸಾರ್ಟ್ ಅಥವಾ ವಿಹಾರ ಧಾಮ ಹೆಸರಿನಿಂದ ಇದು ಕರೆಯಲ್ಪಡುತ್ತದೆ.

ವಿಹಾರ ನೌಕೆಯೊಂದರಲ್ಲಿ ಲಭ್ಯವಾಗುವ ಎಲ್ಲ ತರಹದ ಐಷಾರಾಮಿ ಸೌಲಭ್ಯಗಳನ್ನು ಪ್ರವಾಸಿಗರು ಇಲ್ಲಿ ಅನುಭವಿಸಬಹುದಾಗಿದೆ.

ಗಾಜುಗಳಿಂದ ಆವೃತ್ತವಾದ ಈ ಹೋಟೆಲ್ ಇಲ್ಲಿಗೆ ಭೇಟಿ ಕೊಡುವ ಜನರಿಗೆ ಸಾಗರದ ಭವ್ಯ ದರ್ಶನವನ್ನು ನೀಡುತ್ತದೆ.

ವಿಶೇಷವಾಗಿಯೂ ಹೊಸ ವರ್ಷದ ದಿನಾಚರಣೆಯ ಸಂದರ್ಭದಲ್ಲಿ ಜಪಾನ್ ಭಾಗದ ಸೂರ್ಯೋದಯದ ಅಮೋಘ ದರ್ಶನವಾಗಲಿದೆ.

ಇನ್ನು ಹಡಗಿನ ಮೇಲೆಯೂ ಪ್ರವಾಸಿರ ಮನರಂಜನೆಗೆ ಅನುವು ಮಾಡಿಕೊಡಲಾಗಿದ್ದು, ವಿಹಂಗನ ನೋಟವನ್ನು ಆಸ್ವಾದಿಸಬಹುದಾಗಿದೆ.

ಒಟ್ಟು 211 ಕ್ಯಾಬಿನ್, ಖಾಸಗಿ ಕೋಣೆಗಳು, ವಿಹಾರ ತಾಣ ಮುಂತಾದ ಐಷಾರಾಮಿ ವೈಶಿಷ್ಟ್ಯಗಳನ್ನು ಪ್ರವಾಸಿಗರು ಅನುಭವಿಸಬಹುದಾಗಿದೆ.

ಅಷ್ಟೇ ಯಾಕೆ ಸಮುದ್ರ ನೀರಿನ ಈಜುಕೊಳವು ಇಲ್ಲಿನ ಪಯಣವನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ.

ಗಾಲ್ಫ್ ಕ್ರೀಡೆ ಜೊತೆಗೆ ಮನರಂಜನೆ ಹಾಗೂ ಫಿಟ್ನೆಸ್‌ಗೂ ಅಷ್ಟೇ ಮಹತ್ವವನ್ನು ಕೊಡಲಾಗಿದೆ.

30,000 ಟನ್ ತೂಕದ ಈ ಹೋಟಲ್ ಆರು ರೆಸ್ಟೋರೆಂಟ್, ಜಿಮ್, ಈಜುಕೊಳ, ಗಾಲ್ಪ್ ಕ್ರೀಡಾಂಗಣ ಹಾಗೂ ಆತಿಥಿ ಕೋಣೆಗಳನ್ನು ಒಳಗೊಂಡಿದೆ.

ಇನ್ನು ಪ್ರೇಮಿಗಳು ಹಾಗೂ ನವವಿವಾಹಿತರಿಗೆ ಮಧುಚಂದ್ರವನ್ನು ಆಚರಿಸಿಕೊಳ್ಳಲು ಹೇಳಿ ಮಾಡಿಸಿದಂತಹ ಹೋಟೆಲ್ ಇದಾಗಿದೆ.

ಜಗತ್ತಿನ ಅತಿ ವೇಗದ 20 ವಿಹಾರ ನೌಕೆಗಳು
ವಿಹಾರ ನೌಕೆಯೊಳಗೊಂದು ನೌಕೆ
ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು


Click it and Unblock the Notifications








