ಶಿವಣ್ಣ ಬಿಎಂಡಬ್ಲ್ಯು ಕಾರನ್ನು ಆಯ್ಕೆ ಮಾಡಲು ಕಾರಣಗಳೇನು?

By Nagaraja

ಸಪ್ತಪದಿ ತುಳಿದಿರುವ ಪುತ್ರಿ ಡಾ. ನಿರುಪಮಾ ಹಾಗೂ ಅಳಿಯ ಡಾ. ದಿಲೀಪ್ ದಂಪತಿಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು 50 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ಬಿಎಂಡಬ್ಲ್ಯು 3 ಸಿರೀಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಡು ನೀಲಿ ಬಣ್ಣದ ಬಿಎಂಡಬ್ಲ್ಯು 3 ಸಿರೀಸ್ ಭಾರತದಲ್ಲಿ ಐಷಾರಾಮಿ ಕಾರುಗಳಿಗೆ ಹೆಚ್ಚಿನ ಮೆರಗನ್ನು ತುಂಬಿದೆ. ಅಷ್ಟಕ್ಕೂ ಶಿವಣ್ಣ ಏಕೆ ಬಿಎಂಡಬ್ಲ್ಯು ಕಾರನ್ನೇ ಉಡುಗೊರೆಯಾಗಿ ನೀಡಿದರು ಎಂಬುದನ್ನು ಚಿತ್ರಪುಟದಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

ನವದಂಪತಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಶಿವಣ್ಣ

ಬಾಹ್ಯ ದರ್ಶನದಲ್ಲೇ ಅತ್ಯುತ್ತಮ ಚಲನಶೀಲತೆ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿರುವ ಬಿಎಂಡಬ್ಲ್ಯು 3 ಸಿರೀಸ್, ತನ್ನ ಸಾಂಪ್ರಾದಾಯಿಕ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಿಕೊಂಡು ಬಂದಿದೆ. ಮುಂಭಾಗದಲ್ಲಿ ಬಿಎಂಡಬ್ಲ್ಯು ಟ್ರೇಕ್ ಮಾರ್ಕ್ ಆಗಿರುವ ಕಿಡ್ನಿ ಗ್ರಿಲ್ ಎದ್ದು ಕಾಣಿಸುತ್ತದೆ. ಅಷ್ಟಕ್ಕೂ ಬಿಎಂಡಬ್ಲ್ಯು ಕಿಡ್ನಿ ಗ್ರಿಲ್ ರಹಸ್ಯ ಏನೆಂಬುದು ನಿಮಗೆ ಗೊತ್ತೇ? ಇದಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ...

ನವದಂಪತಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಶಿವಣ್ಣ

ಒಳಮೈಯಿಂದಲೂ ಗರಿಷ್ಠ ಗುಣಮಟ್ಟದ ವೈಶಿಷ್ಟ್ಯಗಳಿಂದ ಬಿಎಂಡಬ್ಲ್ಯು 3 ಸಿರೀಸ್ ಕಂಗೊಳಿಸುತ್ತದೆ. ಕ್ಲಾಸಿಕಲ್ ಚಾಲನಾ ಮಾರ್ಗದರ್ಶಿ, ಕೌಶಲ್ಯ ಪ್ರತಿಬಂಬಿಸುವ ವಿನ್ಯಾಸ ಹಾಗೂ ಹೆಚ್ಚಿನ ಸ್ಥಳಾವಕಾಶವು ಈ ಸೆಡಾನ್ ಕಾರಿನ ಆಕರ್ಷಣೆಯಾಗಿರಲಿದೆ.

ನವದಂಪತಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಶಿವಣ್ಣ

ಕಾರಿನ ಕ್ರಿಯಾತ್ಮಕತೆ ಬಗ್ಗೆ ಮಾತನಾವುಡುವುದಾದ್ದಲ್ಲಿ ನಾವೀನ್ಯತೆಯ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ. ಇದರಲ್ಲಿ 'ಐ ಡ್ರೈವ್' ಮುಖ್ಯವೆನಿಸುತ್ತದೆ. ಅಂದರೆ ನೇವಿಗೇಷನ್‌ನಿಂದ ಹಿಡಿದು ಕಾರಿನ ಹಲವು ಕ್ರಿಯಾತ್ಮಕತೆಗಳನ್ನು ಸೀಮಿತ ಬಟನ್ ಗಳಿಂದ ಮಾತ್ರ ನಿಯಂತ್ರಿಸಬಹುದಾಗಿದೆ. ಎಲ್ಲ ಬಿಎಂಡಬ್ಲ್ಯು 3 ಸಿರೀಸ್ ಮಾದರಿಗಳಲ್ಲೂ ಇದು ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ.

ನವದಂಪತಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಶಿವಣ್ಣ

ಕ್ರೀಡಾತ್ಮಕ ಸ್ವಭಾವ ಪ್ರತಿಬಿಂಬಿಸುವ ಸಲುವಾಗಿ ಹೊಸ ಬಿಎಂಡಬ್ಲ್ಯು 3 ಸಿರೀಸ್ ಕಾರಿನ ಹೊರಗಡೆ ಕ್ರೀಡಾತ್ಮಕ ರೇಖೆಗಳನ್ನು ಕಾಣಬಹುದಾಗಿದೆ. ಅಲ್ಲದೆ ಸ್ಪೋರ್ಟ್ ಮೋಡ್ ಚಾಲನಾ ವಿಧ ಇದನ್ನು ವಿಶಿಷ್ಟವಾಗಿಸಲಿದೆ.

ನವದಂಪತಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಶಿವಣ್ಣ

ನಿಮ್ಮ ಐಫೋನ್ ಮುಖಾಂತರ ಬಿಎಂಡಬ್ಲ್ಯು ಆಪ್ ಸಂಪರ್ಕವನ್ನು ಸಾಧಿಸಬಹುದಾಗಿದೆ. ಇನ್ನು ಬ್ಲೂಟೂತ್ ಕನೆಕ್ಟಿವಿಟಿ ಸೇವೆಯೂ ಲಭ್ಯವಾಗಲಿದೆ. ಯಾವುದೇ ತೊಂದರೆಗಳಿಲ್ಲದೆ ಸುಲಭವಾಗಿ ಗುರಿ ಮುಟ್ಟಲು ಬಿಎಂಡಬ್ಲ್ಯು ನೇವಿಗೇಷನ್ ವ್ಯವಸ್ಥೆಯು ನೆರವಿಗೆ ಬರಲಿದೆ.

ನವದಂಪತಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಶಿವಣ್ಣ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಈ ನಿಟ್ಟಿನಲ್ಲಿ ಬಿಎಂಡಬ್ಲ್ಯು ಹೆಡ್ ಅಪ್ ಡಿಸ್‌ಪ್ಲೇ ಪ್ರಮುಖ ಪಾತ್ರ ವಹಿಸಲಿದೆ. ಹಗುರ ಭಾರದ ದೇಹ ವಿನ್ಯಾಸ, ಎಬಿಎಸ್, ಇಬಿಡಿಗಳಂತಹ ವೈಶಿಷ್ಟ್ಯಗಳು ನಿಮ್ಮ ಪಯಣವನ್ನು ಸುರಕ್ಷಿತವಾಗಿಸಲಿದೆ.

ನವದಂಪತಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಶಿವಣ್ಣ

ಅಂದ ಹಾಗೆ ಬಿಎಂಡಬ್ಲ್ಯು 3 ಸಿರೀಸ್ ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗುತ್ತದೆ. ಅವುಗಳೆಂದರೆ,

ಬಿಎಂಡಬ್ಲ್ಯು 3 ಸಿರೀಸ್ 320 ಡಿ ಪ್ರೆಸ್ಟೀಜ್

ಬಿಎಂಡಬ್ಲ್ಯು 3 ಸಿರೀಸ್ ಸೆಡಾನ್ 320ಡಿ ಸ್ಪೋರ್ಟ್ ಲೈನ್,

ಬಿಎಂಡಬ್ಲ್ಯು 3 ಸಿರೀಸ್ ಸೆಡಾನ್ 320ಡಿ ಲಗ್ಷುರಿ ಲೈನ್

ನವದಂಪತಿಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಶಿವಣ್ಣ

1995 ಸಿಸಿ ಡೀಸೆಲ್ ಎಂಜಿನ್ ನಿಯಂತ್ರಿಸಲ್ಪಡುವ ಬಿಎಂಡಬ್ಲ್ಯು 3 ಸಿರೀಸ್ ಪ್ರತಿ ಲೀಟರ್ ಗೆ 18.88 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.

Article Published On: Monday, August 31, 2015, 15:20 [IST]
English summary
Shivarajkumar Gifts BMW To Son-In-Law Dileep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+