ಬೆಂಗಳೂರಿನ ಪ್ರಯಾಣಿಕರಿಗೆ ಮತ್ತೆ ಸಂಕಷ್ಟ: ಈ ಫ್ಲೈ ಓವರ್ 4 ತಿಂಗಳು ಬಂದ್!
ನಮ್ಮ ಮೆಟ್ರೋ (Namma Metro) ಕಾಮಗಾರಿ ಹಿನ್ನೆಲೆ ಸೆಂಟ್ರಲ್ ಜಂಕ್ಷನ್ ಫ್ಲೈಓವರ್ 4 ತಿಂಗಳವರೆಗೆ ಕ್ಲೋಸ್ ಮಾಡಲಾಗಿದೆ. ಬೆಂಗಳೂರಿನ ಮಡಿವಾಳದ ಬಳಿಯ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಪ್ಲೈಓವರ್ ನಾಲ್ಕು ತಿಂಗಳವರೆಗೆ ಬಂದ್ ಆಗಿರಲಿದೆ.
ನೀವು ಮಿಸ್ ಆಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಫ್ಲೈ ಓವರ್ ಹತ್ತಿದ್ರೆ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಳ್ಳು ಬೇಕಾಗುತ್ತದೆ. ನಮ್ಮ ಮೆಟ್ರೋದ ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಈ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸಬೇಕಿರುವ ಒತ್ತಡ ಬಿಎಂಆರ್‌ಸಿಎಲ್ ಮೇಲಿದೆ. ಈ ಹಿನ್ನೆಲೆಯಲ್ಲಿ ಸಿಲ್ಕ್ ಬೋರ್ಡ್ ಫ್ಲೈಓವರ್ ಅನ್ನು ಕೆಲ ತಿಂಗಳ ಕಾಲ ಮುಚ್ಚಲೇಬೇಕಿರುವ ಅನಿವಾರ್ಯತೆ ಎದುರಾಗಿತ್ತು.

ಇದರಿಂದ ನಾಲ್ಕು ತಿಂಗಳವರೆಗೆ ಬಂದ್ ಮಾಡಿ ಕಾಮಗಾರಿ ಮುಗಿಸಲು ಬಿಎಂಆರ್ಸಿಎಲ್ ಯೋಜಿಸಿದೆ. ಲೂಪ್ ಮತ್ತು ರಾಂಪ್ ಫ್ಲೈಓವರ್ ಸ್ಟೇಜಿಂಗ್ ಕೆಲಸವನ್ನು ಕೈಗೊಳ್ಳಲು ತಾತ್ಕಾಲಿಕವಾಗಿ ನಾಲ್ಕು ತಿಂಗಳುಗಳವರೆಗೆ ಎರಡು ಕ್ಯಾರೇಜ್ ಮಾರ್ಗಗಳಲ್ಲಿ 2.50 ಮೀಟರ್ ಭಾಗಶಃ ಬ್ಯಾರಿಕೇಡ್ ಮುಚ್ಚಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಎಂಆರ್ಸಿಎಲ್ ಹೊರಡಿಸಿದೆ.
ಇನ್ನು ಸಿಲ್ಕ್ ಬೋರ್ಡ್‌ನಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸಿಲ್ಕ್ ಬೋರ್ಡ್ ಜಂಕ್ಷನ್ ನಾ ಮಡಿವಾಳದ ಒಂದು ಬದಿಯನ್ನ ಬಿಎಂಆರ್ಸಿಎಲ್ ಕ್ಲೋಸ್ ಮಾಡುತ್ತಿದ್ದು ಇದಕ್ಕೆ ವಾಹನ ಸವಾರರು ಆಕ್ರೊಶ ಹೊರ ಹಾಕಿದ್ದಾರೆ. ಮೊದಲೇ ಟ್ರಾಫಿಕ್ ನಿಂದ ಪರದಾಡುತ್ತಿದ್ದೇವೆ. ಮತ್ತೆ ಮಡಿವಾಳ ರಸ್ತೆಗೆ ಬ್ಯಾರಿಕೆಟ್ ಹಾಕಿರುವುದಕ್ಕೆ ಮತ್ತಷ್ಟು ಕಷ್ಟ ಆಗುತ್ತೆ. ಐಟಿ ಮತ್ತು ಇತರ ಕಂಪನಿಗಳ ಕೆಲಸಕ್ಕೆ ಹೋಗುವ ವಾಹನ ಸವಾರರು ಪರದಾಡುತ್ತಿದ್ದಾರೆ.
ಇನ್ನು ಈ ನಡುವೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover) ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ. ಫ್ಲೈಓವರ್ಗೆ ಕೇಬಲ್ ಅಳವಡಿಕೆ ಕಾರ್ಯ ಬಹುತೇಕ ಮುಗಿದಿದ್ದು, ಹೊಸ ವರ್ಷದ (2024) ವೇಳೆಗೆ ಬಸ್ ಸೇರಿದಂತೆ ಭಾರೀ ವಾಹನ ಸಂಚಾರಕ್ಕೆ ಮುಕ್ತವಾಗಬಹುದು. ಪಿಲ್ಲರ್ಗಳಿಗೆ ಕೇಬಲ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಶೇಕಡ 70% ಕಾಮಗಾರಿ ಮುಕ್ತಾಯಗೊಂಡಿದೆ.
ಜನವರಿಯಿಂದ ಬಸ್ ಸೇರಿದಂತೆ ಭಾರೀ ವಾಹನಗಳ ಓಡಾಡಕ್ಕೆ ಅನುವು ಮಾಡಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ. ಇದರೊಟ್ಟಿಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕೂಡ ಲೋಡ್ ಟೆಸ್ಟಿಂಗ್ ಮಾಡಲಿದೆ ಎಂದು ಹೇಳಲಾಗಿದೆ. ಎಲ್ಲವೂ, ಅಂದುಕೊಂಡಂತೆ ನಡೆದರೆ, ಇನ್ನೂ ಕೆಲವೇ ದಿನಗಳಲ್ಲಿ ಎರಡು ವರ್ಷಗಳಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಲಿದೆ.
2021ರ ಡಿಸೆಂಬರ್ ತಿಂಗಳಲ್ಲಿ 8ನೇ ಮೈಲಿ ಸಮೀಪ ಈ ಮೇಲ್ಸೇತುವೆಯ ಪ್ಲಿಲರ್ 102 ಮತ್ತು 103ರ ನಡುವೆ ಬಿರುಕು ಕಂಡುಬಂದಿತ್ತು. ಆ ಕಾರಣಕ್ಕೆ, ಇಲ್ಲಿ ಎಲ್ಲ ವಿಧದ ವಾಹನ ಓಡಾಟವನ್ನು ನಿರ್ಬಂಧಿಸಲಾಯಿತ್ತು. ಆದರೆ, ಕೆಲವು ತಿಂಗಳ ಬಳಿಕ, ದ್ವಿಚಕ್ರ ವಾಹನ, ಕಾರು ಒಳಗೊಂಡಂತೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು. ಬಸ್ ಸೇರಿದಂತೆ ಭಾರೀ ವಾಹನಗಳಿಗೆ ನಿರ್ಬಂಧವನ್ನು ಹಾಗೆಯೇ ಮುಂದುವರಿಸಲಾಯಿತು.
ಇದರಿಂದ ವಾರಾಂತ್ಯದ ದಿನ ಹಾಗೂ ಹಬ್ಬಗಳ ಋತುವಿನಲ್ಲಿ ಮೇಲ್ಸೇತುವೆ ಕೆಳಗೆ, ಗಂಟೆಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲ್ಕು ಕಿಲೋಮೀಟರ್ ಉದ್ದದ ಬೆಂಗಳೂರು ತುಮಕೂರು ಮೇಲ್ಸೇತುವೆಯಲ್ಲಿ ಕೇಬಲ್ ಅಳವಡಿಕೆ ಬಳಿಕ, ಬಸ್ ಸೇರಿದಂತೆ ಭಾರೀ ಗಾತ್ರದ ವಾಹನ ಸಂಚಾರಕ್ಕೆ ಅವಕಾಶ ನೀಡುವುದರಿಂದ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ಅರ್ಧ ಕರ್ನಾಟಕದ 14 ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.
ಈ ಕಾಮಗಾರಿ ಮುಗಿಯವರೆಗೂ ರೂ.30 ಕೋಟಿ ವೆಚ್ಚವಾಗಬಹುದು ಎನ್ನಲಾಗಿದೆ. ತುಮಕೂರು - ಬೆಂಗಳೂರು ಮಧ್ಯೆ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರದ ಅಭಿವೃದ್ಧಿಗೆ ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂ.844 ಕೋಟಿ ವೆಚ್ಚದಲ್ಲಿ ನೆಲಮಂಗಲ - ತುಮಕೂರು ನಡುವೆ 44.04 ಕಿಲೋಮೀಟರ್ ಉದ್ದದ ದಶಪಥ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications