ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದಿಂದ Tata ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. Tata ಕಾರುಗಳು ಹೆಚ್ಚಿನ ಸುರಕ್ಷತೆಗೆ ಜನಪ್ರಿಯವಾಗಿದ್ದು, ಇದರ ಬಿಲ್ಡ್ ಕ್ವಾಲಿಟಿಯು ಅತ್ತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ, Tata ಕಾರುಗಳಿನಲ್ಲಿ ಅಪಘಾತಗೊಂಡಾಗ ಮೃತಪಟ್ಟವರ ಸಂಖ್ಯೆಯು ಕಡಿಮೆಯಾಗಿದೆ.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಭೀಕರವಾದ ಅಪಘಾತ ಸಂಭವಿಸಿದರೂ ಪ್ರಯಾಣಿಸಿಕರು ಸೇಫ್ ಆಗಿರುವ ಹಲವು ಪ್ರಕರಣಗಳು ವರದಿಗಳಾಗಿವೆ, ಇದಕ್ಕೆ ಮತ್ತೊಂದು ಉದಾಹರಣೆ ಎಂದರೇ, ಇತ್ತೀಚೆಗೆ Tata ಹೆಕ್ಸಾದಲ್ಲಿ ಅಪಘಾತಕ್ಕೀಡಾದ ಪ್ರಸಿದ್ಧ ಗಜಲ್ ಗಾಯಕಿ ಇಮ್ತಿಯಾಸ್ ಬೇಗಂ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಜೀವ ಉಳಿಸಿದ ಟಾಟಾ ಮೋಟಾರ್ಸ್‌ಗೆ ಧನ್ಯವಾದ ಹೇಳಿದ್ದಾಳೆ. ಗಾಯಕಿ ಇಮ್ತಿಯಾಸ್ ಬೇಗಂ ಅವರು ಟೊಯೊಟಾ ಲಿವಾ ಕಾರನ್ನು ಹೊಂದಿದ್ದಾರೆ. ಆದರೆ ಈ ಕಾರನ್ನು ಅವರು ಸರ್ವಿಸ್ ಮಾಡಲು ನೀಡಿದ್ದಾರೆ.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಇದರಿಂದ ಸ್ನೇಹಿತನ ಟಾಟಾ ಹೆಕ್ಸಾ ಕಾರನ್ನು ಪಡೆದಿದ್ದಾರೆ, ಗಾಯಕಿ ಮತ್ತು ಆಕೆಯ ಮಗಳು ಕಾರ್ಯಕ್ರಮವೊಂದಕ್ಕೆ ಹೋಗಿ ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ. ಸರಿಸುಮಾರು ಮುಂಜಾನೆ 4 ಗಂಟೆಗೆ ಅಪಘಾತ ಸಂಭವಿಸಿದೆ. ಚಿತ್ರಗಳಿಂದ ನಾವು ನೋಡಬಹುದು ಹೆಕ್ಸಾದ ಹೊರಭಾಗದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಆದರೆ ಒಳಭಾಗದಲ್ಲಿ ಯಾವುದೇ ಹಾನಿಯಾಗಿಲ್ಲ.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಗಾಯಕಿ ಕಾರ್ಯಕ್ರಮದಿಂದ ಹಿಂತಿರುಗುವಾಗ ಕೇರಳದ ಚೆರ್ತಾಳ ಬಳಿ ಆಕೆ ಲಾರಿಯನ್ನು ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಲಾರಿ ಓವರ್ ಟೇಕ್ ಮಾಡುವ ವೇಳೆ ಲಾರಿ ಕೂಡ ವೇಗವಾಗಿ ಚಲಿಸಿತು. ಇದೇ ಸಂದರ್ಭದಲ್ಲಿ ಭಾರೀ ಮಳೆಯಾಗುತ್ತಿತ್ತು. ಇದರಿಂದ ಬ್ರೇಕ್ ಒದ್ದಾಗ ಟೈರ್ ಸ್ಲೀಪ್ ಆಗಿ ನಿಯಂತ್ರಣ ತಪ್ಪಿದೆ.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಇದರಿಂದ ನಿಂತಿದ್ದ ಲಾರಿಗೆ ಹೋಗಿ ಟಾಟಾ ಹೆಕ್ಸಾ ಕಾರು ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ನಂತರ ಟಾಟಾ ಹೆಕ್ಸಾ ಒಂದೆರಡು ಬಾರಿ ತಿರುಗಿತು ಮತ್ತು ಆದರೂ ಕಾರು ನಿಲ್ಲದೇ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಾಯಕಿ ಲಾರಿ ಓವರ್ ಟೇಕ್ ಮಾಡಲು ಭಾರೀ ವೇಗದಲ್ಲಿ ಮುನ್ನುಗಿರಬಹುದು.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಮಳೆಯಲ್ಲಿ ಭಾರೀ ವೇಗವಾಗಿ ಹೋಗುವಗ ಬ್ರೇಕ್ ಮಾಡಿದ್ದರೆ ಕಾರು ನಿಯಂತ್ರಣಕ್ಕೆ ಸಿಗುವುದಿಲ್ಲ. ಒಟ್ಟಿನಲ್ಲಿ ಗಾಯಕಿ ಮತ್ತು ಅವರ ಮಗಳು ಸೇಫ್ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಟಾಟಾ ಹೆಕ್ಸಾ ಮಾದರಿಯ ಬಿಲ್ಡ್ ಕ್ವಾಲಿಟಿ ಮತ್ತು ಸುರಕ್ಷತಾ ಫೀಚರ್ಸ್ ಗಳಾಗಿವೆ. ಇದಕ್ಕಾಗಿ ಗಾಯಕಿ ಅವಳು ಕೃತಜ್ಞಳಾಗಿದ್ದಳು.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಇನ್ನು ಕಾರುಗಳು ಎಷ್ಟು ಸುರಕ್ಷತಾವಾಗಿದೆ ಎಂಬುದನ್ನು ತಿಳಿಯಲು ಕ್ರ್ಯಾಶ್ ಟೆಸ್ಟ್ ನಡೆಸುತ್ತಾರೆ. ಅದರ ರೇಟಿಂಗ್ ಮೇಲೆ ಕಾರು ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿಯುತ್ತದೆ. ಆದರೆ ಟಾಟಾ ಕಂಪನಿಯು ಹೆಕ್ಸಾವನ್ನು ಕ್ರ್ಯಾಶ್-ಟೆಸ್ಟ್ ಮಾಡಿಲ್ಲ. ಆದರೆ ಹೆಕ್ಸಾವನ್ನು ಆಧರಿಸಿದ ಏರಿಯಾ ಎಸ್‍ಯುವಿಯು ಯುರೋಪ್ ಕ್ರಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ಅನ್ನು ಪಡೆದುಕೊಂಡಿದೆ,

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಬಿಎಸ್-4 ಟಾಟಾ ಹೆಕ್ಸಾ ಎಸ್‍ಯುವಿಯು 2.2-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿತ್ತು. ಈ ಎಂಜಿನ್ ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಹೈ ಸ್ಪೆಕ್ ಮಾದರಿಯ ಎಂಜಿನ್ 154 ಬಿಹೆಚ್‌ಪಿ ಪವರ್ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಿದ್ದರೆ, ಲೋ ಸ್ಪೇಕ್ ಮಾದರಿಯು 140 ಬಿಹೆಚ್‌ಪಿ ಪವರ್ ಮತ್ತು 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಈ ಟಾಟಾ ಹೆಕ್ಸಾ ಎಸ್‌ಯುವಿಯನ್ನು ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಕಳೆದ ವರ್ಷ ಸ್ಥಗಿತಗೊಳಿಸಿದರು. ಆದರೆ ಟಾಟಾ ಮೋಟಾರ್ಸ್ ಕಂಪನಿಯು ಈಗ 2020ರ ಆಟೋ ಎಕ್ಸ್ ಪೋದಲ್ಲಿ ಹೆಕ್ಸಾ ಸಫಾರಿ ಎಡಿಷನ್ ಕಾರ್ ಅನ್ನು ಪ್ರದರ್ಶಿಸಿದ್ದರು. ಹೆಕ್ಸಾ ಸಫಾರಿ ಎಡಿಷನ್, ಸ್ಟಾಂಡರ್ಡ್ ಮಾದರಿಗೆ ಹೋಲಿಸಿದರೆ ಹೆಚ್ಚು ಬೋಲ್ಡ್ ಆದ ಲುಕ್ ಅನ್ನು ಹೊಂದಿದೆ. ಈ ಕಾರು ಸ್ಪೆಷಲ್ ಬ್ಯಾಡ್ಜಿಂಗ್‍ನ ಜೊತೆಗೆ ಬಿಳಿ ಬಣ್ಣದ ಇಂಟಿರಿಯರ್‍‍ಗಳನ್ನು ಹೊಂದಿದೆ.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಹೆಕ್ಸಾ ಸಫಾರಿ ಎಡಿಷನ್, ಸ್ಟಾಂಡರ್ಡ್ ಮಾದರಿಗೆ ಹೋಲಿಸಿದರೆ ಹೆಚ್ಚು ಬೋಲ್ಡ್ ಆದ ಲುಕ್ ಅನ್ನು ಹೊಂದಿದೆ. ಈ ಕಾರು ಸ್ಪೆಷಲ್ ಬ್ಯಾಡ್ಜಿಂಗ್‍ನ ಜೊತೆಗೆ ಬಿಳಿ ಬಣ್ಣದ ಇಂಟಿರಿಯರ್‍‍ಗಳನ್ನು ಹೊಂದಿದೆ. ಈ ಟ್ರಾನ್ಸ್ ಮಿಷನ್‍‍ಗಳನ್ನು ಅಪ್‍‍ಡೇಟ್‍‍ಗೊಳಿಸಲಾಗಿರುವ ಹೆಕ್ಸಾ ಕಾರಿನಲ್ಲಿಯೂ 4x4 ಡ್ರೈವ್‌ಟ್ರೇನ್‌ನೊಂದಿಗೆ ನೀಡಲಾಗುವುದು.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 10-ಸ್ಪೀಕರ್ ಮ್ಯೂಸಿಕ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಬಿಡಿ ಹೊಂದಿರುವ ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

ಭೀಕರ ಅಪಘಾತದಲ್ಲಿ ಪ್ರಾಣ ಉಳಿಸಿದ Tata ಕಾರಿಗೆ ಧನ್ಯವಾದ ಹೇಳಿದ ಗಾಯಕಿ

ಆದರೆ ಇನ್ನು ಟಾಟಾ ಮೋಟಾರ್ಸ್ BS6 ಹೆಕ್ಸಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿಲ್ಲ ಮತ್ತು ಇನ್ನೂ ಉತ್ಪಾದಕರಿಂದ ಯಾವುದೇ ಅಧಿಕೃತ ಘೋಷಣೆಯಿಲ್ಲ. ಒಟ್ಟಿನಲ್ಲಿ ಟಾಟಾ ಕಾರುಗಳು ಉತ್ತಮ ಬಿಲ್ಡ್ ಕ್ವಾಲಿಟ್ ಯನ್ನು ಹೊಂದಿದೆ ಎಂಬುದು ಮತ್ತೆ ಸಾಬೀತಾಗಿದೆ.

Source: Imthiyas Beegum

Most Read Articles

Kannada
English summary
Singer imthiyas beegum thanked to tata motors for hexa suv solid build quality details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X