Just In
Don't Miss!
- Movies
'ತಲೆದಂಡ' ಸಿನಿಮಾಕ್ಕೆ ಅನ್ಯಾಯ: ಮನವಿ ಮಾಡಿದ ಸಂಚಾರಿ ವಿಜಯ್
- News
ಅಂತಾರಾಷ್ಟ್ರೀಯ ಮಹಿಳಾ ದಿನ; ಸವಾಲುಗಳೇ ಮಹಿಳೆಯ ಸಾಧನೆಯ ಮೆಟ್ಟಿಲು: ಡಾ.ಹೇಮಾ
- Sports
ಸೌತಾಂಪ್ಟನ್ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
- Finance
ಚಿನ್ನದ ಬೆಲೆ ಏರಿಕೆ: ಮಾರ್ಚ್ 08ರ ಬೆಲೆ ಹೀಗಿದೆ
- Lifestyle
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇನ್ನು ಕೆಲವೇ ಗಂಟೆಗಳಲ್ಲಿ ಮಂಗಳ ಗ್ರಹದಲ್ಲಿ ಇಳಿಯಲಿದೆ ನಾಸಾ ರೋವರ್
ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾದ ನಾಸಾ ಆರು ಚಕ್ರಗಳ ರೋವರ್ ವಾಹನವನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಸಿದ್ದತೆ ನಡೆಸಿದೆ. ಮಂಗಳ ಗ್ರಹದ ಬಗ್ಗೆ ಅಧ್ಯಯನ ಮಾಡಿ ಸಂಶೋಧನೆ ನಡೆಸಲು ಈ ವಾಹನವನ್ನು ಕಳುಹಿಸಲಾಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಆರು ಚಕ್ರಗಳ ಈ ರೋವರ್ ವಾಹನವು ಮಂಗಳ ಗ್ರಹದ ಮೇಲ್ಮೈ ತಲುಪಲಿದೆ. ನಂತರ ಈ ವಾಹನವು ಮಂಗಳ ಗ್ರಹದ ಸುತ್ತಲೂ ಪ್ರದಕ್ಷಿಣೆ ಹಾಕಲಿದೆ. ಈ ರೋವರ್ ಸಂಶೋಧಕರಿಗೆ ಮಂಗಳ ಗ್ರಹದ ಫೋಟೋ ಹಾಗೂ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಕಳುಹಿಸಲಿದೆ.

ರಾಕೆಟ್ ಮೂಲಕ ಉಡಾಯಿಸಲ್ಪಟ್ಟ ಈ ರೋವರ್ ಏಳು ತಿಂಗಳ ಪ್ರಯಾಣದ ಬಳಿಕ ಮಂಗಳ ಗ್ರಹದಲ್ಲಿ ಇಳಿಯುತ್ತಿದೆ. ಈ ವಾಹನದ ಅಂತಿಮ ಪ್ರಯಾಣವು ತುಂಬಾ ಅಪಾಯಕಾರಿಯಾಗಿರುವ ಕಾರಣಕ್ಕೆ ನಾಸಾ ಸಂಶೋಧಕರು ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ರೋವರ್ ಮಂಗಳ ಗ್ರಹದಿಂದ ಕಳುಹಿಸುವ ಮಾಹಿತಿಯು ಕೇವಲ 11 ನಿಮಿಷಗಳಲ್ಲಿ ಭೂಮಿಯನ್ನು ತಲುಪಲಿದೆ. ರೇಡಿಯೋ ಫ್ರೀಕ್ವೆನ್ಸಿ ತರಂಗಗಳ ಮೂಲಕ ಮಾಹಿತಿಯನ್ನು ನಾಸಾಗೆ ಕಳುಹಿಸಲಿದೆ.

ಈ ವಾಹನವನ್ನು 2020ರ ಜುಲೈ ತಿಂಗಳಿನಲ್ಲಿ ಉಡಾಯಿಸಲಾಯಿತು. ಇಂದು ಅಥವಾ ನಾಳೆ ಈ ರೋವರ್ ಮಂಗಳ ಗ್ರಹದಲ್ಲಿ ಇಳಿಯುವ ನಿರೀಕ್ಷೆಗಳಿವೆ. ಈ ವಾಹನವನ್ನು ಸುರಕ್ಷಿತವಾಗಿ ಇಳಿಸಲು ಸಂಶೋಧಕರು ಶ್ರಮಿಸುತ್ತಿದ್ದಾರೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಗುರುತ್ವಾಕರ್ಷಣೆಯ ಕೊರತೆಯಿಂದಾಗಿ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಇಳಿಸುವುದು ಸವಾಲಿನ ಕೆಲಸವಾಗಿದೆ. ಆರು ಚಕ್ರಗಳ ಈ ರೋವರ್ ವಾಹನವುಟಾಪ್ ಎಂಡ್ ಮಾಸ್ಟ್‌ಕಾಮ್- ಝಡ್, ಪನೋರಾಮಿಕ್, ಸ್ಟಿರಿಯೊಸ್ಕೋಪಿಕ್ ಇಮೇಜಿಂಗ್ ಕ್ಯಾಮೆರಾವನ್ನು ಹೊಂದಿದೆ.

ಈ ಕ್ಯಾಮರಾ ಮೂಲಕ ನಿಖರವಾದ ಹಾಗೂ ಸ್ಪಷ್ಟವಾದ ಫೋಟೋಗಳನ್ನು ಪಡೆಯಲು ಸಾಧ್ಯವಾಗಲಿದೆ. ಇದರ ಜೊತೆಗೆ ಮಂಗಳ ಗ್ರಹದ ಭೂಪ್ರದೇಶವನ್ನು ಅನ್ವೇಷಿಸಲು ನಾಸಾ ಸಂಸ್ಥೆಯು ಕೆಲವು ಸಾಧನಗಳನ್ನು ಈ ವಾಹನದಲ್ಲಿ ಅಳವಡಿಸಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಸಾಧನಗಳ ಮೂಲಕ ಮಂಗಳದಲ್ಲಿರುವ ಖನಿಜ ಹಾಗೂ ರಾಸಾಯನಿಕ ಸಂಯೋಜನೆಗಳ ಮಾಹಿತಿಯನ್ನು ಅನ್ವೇಷಿಸಲು ಹಾಗೂ ರವಾನಿಸಲು ಸಾಧ್ಯವಾಗಲಿದೆ. ಈ ರೀತಿಯ ಸೂಪರ್ ಸಾಮರ್ಥ್ಯಗಳನ್ನು ಹೊಂದಿರುವ ಹಲವಾರು ಸಾಧನಗಳು ಈ ವಾಹನದಲ್ಲಿವೆ.

ಗ್ರಹದ ಮೇಲ್ಮೈಯನ್ನು ಕೊರೆಯುವ ಡ್ರಿಲ್ಲಿಂಗ್ ಸಾಧನಗಳನ್ನು ಸಹ ಈ ವಾಹನದಲ್ಲಿ ಅಳವಡಿಸಲಾಗಿದೆ. ಇದರಿಂದ ಅಗತ್ಯವಾದ ಮಣ್ಣು ಹಾಗೂ ಕಲ್ಲಿನ ಮಾದರಿಗಳನ್ನು ಸಂಗ್ರಹಿಸಲು ಸಾಧ್ಯವಾಗಲಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಹನದ ಕಾರ್ಯಾಚರಣೆಗಾಗಿ ಅಲಾಯ್ ವ್ಹೀಲ್'ಗಳನ್ನು ಬಳಸಲಾಗಿದೆ. ಈ ವಾಹನದಲ್ಲಿ ಸಾಂಪ್ರದಾಯಿಕ ವಾಹನಗಳಿಗಿಂತ ಹೆಚ್ಚಿನ ಪ್ರಮಾಣದ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ.

ಮಂಗಳ ಗ್ರಹದ ಮೇಲ್ಮೈಯರುವ ಒರಟು ರಸ್ತೆಯಲ್ಲಿ ಸಾಗಲು 10 ಅಡಿಗಳ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಈ ವಾಹನದಲ್ಲಿ ಸ್ಥಳಕ್ಕೆ ಅನುಗುಣವಾಗಿ ತನ್ನ ಜಾಗವನ್ನು ಕಡಿಮೆ ಮಾಡುವ ಹಾಗೂ ಹೆಚ್ಚಿಸುವ ಸೌಲಭ್ಯವನ್ನು ನೀಡಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇದರಿಂದ ಈ ವಾಹನಕ್ಕೆ ಎತ್ತರವನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಲು ಸಾಧ್ಯವಾಗಲಿದೆ. ಈ ರೋವರ್ ಡ್ಯುಯಲ್ ಸಸ್ಪೆಂಷನ್ ಹಾಗೂ ಎರಡು ಸೆಲ್ಫ್ ಚಾರ್ಜಿಂಗ್ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಹೊಂದಿದೆ.

ಈ ಬ್ಯಾಟರಿಗಳು ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಾದ ಪವರ್ ನೀಡಲು ನೆರವಾಗುತ್ತವೆ. ಈ ವಾಹನವು ಪ್ಲುಟೋನಿಯಂನ ರೇಡಿಯೋ ಆಕ್ಟಿವ್ ಡೀಕೆಯನ್ನು ಥರ್ಮಲ್ ಎನರ್ಜಿಯಾಗಿ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನಂತರ ಅದನ್ನು ತನ್ನದೇ ಆದ ಎಲೆಕ್ಟ್ರಿಕ್ ಎನರ್ಜಿಯಾಗಿ ಬದಲಿಸುತ್ತದೆ. ಈ ಎನರ್ಜಿಯು ಸಂಶೋಧನಾ ವಾಹನಕ್ಕೆ ಬೇಕಾದ ಬ್ಯಾಟರಿ ಹಾಗೂ ಪವರ್ ಅನ್ನು ಒದಗಿಸುತ್ತದೆ.