ಹತಾಶೆಗೊಂಡ ಸ್ಕೋಡಾ ಒಕ್ಟಾವಿಯಾ ಕಾರಿನ ಮಾಲೀಕ ಏನು ಮಾಡಿದ ನೋಡಿ !!

Written By:

ಕಾರಿನ ಸಮಸ್ಯೆ ಪರಿಹರಿಸಲು ಕಂಪನಿ ವಿಫಲವಾಗಿದೆ ಎಂದು ಆಕ್ರೋಶಗೊಂಡ ಕಾರಿನ ಮಾಲೀಕನೊಬ್ಬ ಕಾರನ್ನು ಎರಡು ಕತ್ತೆಗಳ ಕುತ್ತಿಗೆಗೆ ಕಟ್ಟಿ ಎಳೆದು ತನ್ನ ಪ್ರತಿಭಟನೆಯನ್ನು ತೋರ್ಪಡಿಸಿದ್ದಾರೆ.

ಹತಾಶೆಗೊಂಡ ಸ್ಕೋಡಾ ಒಕ್ಟಾವಿಯಾ ಕಾರಿನ ಮಾಲೀಕ ಏನು ಮಾಡಿದ ನೋಡಿ !!

ಪಂಜಾಬ್ ರಾಜ್ಯದ ಲೂಧಿಯಾನ ಎಂಬ ನಗರದಲ್ಲಿ ಈ ಘಟನೆ ನೆಡೆದಿದ್ದು, ಹೆಚ್ಚು ಜನರು ಸೇರುವ ಪ್ರದೇಶವಾದ ಮಾರುಕಟ್ಟೆಯಲ್ಲಿ ಎಲ್ಲರ ಮುಂದೆ ತನ್ನ ನವೀನ ರೀತಿಯ ಪ್ರತಿಭಟನೆ ನೆಡೆಸಿ ಎಲ್ಲರ ಗಮನ ಸೆಳೆಯುವಲ್ಲಿ ಸಫಲವಾಗಿದ್ದಾರೆ.

ಹತಾಶೆಗೊಂಡ ಸ್ಕೋಡಾ ಒಕ್ಟಾವಿಯಾ ಕಾರಿನ ಮಾಲೀಕ ಏನು ಮಾಡಿದ ನೋಡಿ !!

ಬಲ್ಲ ಮೂಲಗಳ ಪ್ರಕಾರ ಹಲವು ಬಾರಿ ಕಾರಿನ ತೊಂದರೆ ಸರಿಪಡಿಸುವ ನಿಟ್ಟಿನಲ್ಲಿ ಕಂಪನಿಯ ಮುಖ್ಯ ಕಚೇರಿ ಇಂದ ಹಿಡಿದು ಝೋನಲ್ ಕಚೇರಿಯ ಕದ ತಟ್ಟಿ ಸುಸ್ತಾದ ಕಾರಿನ ಮಾಲೀಕ ಕೊನೆಗೆ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ.

ಹತಾಶೆಗೊಂಡ ಸ್ಕೋಡಾ ಒಕ್ಟಾವಿಯಾ ಕಾರಿನ ಮಾಲೀಕ ಏನು ಮಾಡಿದ ನೋಡಿ !!

ಎಲ್ಲಾ ವರ್ಗಕ್ಕೆ ಸರಿ ಹೊಂದುವಂತ ಬಲಿಷ್ಠ ಕಾರುಗಳ ಸರಪಳಿ ಹೊಂದಿರುವ ಸ್ಕೋಡಾ ಕಂಪನಿ ಕಾರು ಮಾರಾಟ ಮಾಡಿದ ನಂತರ ತನ್ನ ಗ್ರಾಹಕರನ್ನು ಮರೆತುಬಿಡುತ್ತದೆ ಎಂಬ ಅಪವಾದ ಮೊದಲಿನಿಂದಲೂ ಕೇಳಿಬರುತ್ತಿದೆ.

ಹತಾಶೆಗೊಂಡ ಸ್ಕೋಡಾ ಒಕ್ಟಾವಿಯಾ ಕಾರಿನ ಮಾಲೀಕ ಏನು ಮಾಡಿದ ನೋಡಿ !!

ಅದಕ್ಕೆ ಪುಷ್ಟಿ ನೀಡುವಂತಹ ಘಟನೆ ಲೂಧಿಯಾನದಲ್ಲಿ ನೆಡೆದಿದ್ದು, ಈ ರೀತಿಯ ಘಟನೆ ಸ್ಕೋಡಾ ಕಂಪನಿಯಲ್ಲಿ ಮೊದಲೇನಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯ.

ಹತಾಶೆಗೊಂಡ ಸ್ಕೋಡಾ ಒಕ್ಟಾವಿಯಾ ಕಾರಿನ ಮಾಲೀಕ ಏನು ಮಾಡಿದ ನೋಡಿ !!

ವೃತ್ತಿಯೋಗ್ಯವಲ್ಲದ ಸೇವೆಯನ್ನು ಸ್ಕೋಡಾ ಕಂಪನಿ ನೀಡುತ್ತಿರುವ ಬಗ್ಗೆ ಹೆಚ್ಚಿನ ಜನರಲ್ಲಿ ಅಸಮಧಾನವಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಂಪನಿ ಸರಿ ಸುಮಾರು ರೂ. 100 ಕೋಟಿಗಳನ್ನು ಈ ರೀತಿಯ ತೊಂದರೆಗಳ ಸರಿಪಡಿಸಲು ಹೂಡಿಕೆ ಮಾಡಿದೆ.

ಹತಾಶೆಗೊಂಡ ಸ್ಕೋಡಾ ಒಕ್ಟಾವಿಯಾ ಕಾರಿನ ಮಾಲೀಕ ಏನು ಮಾಡಿದ ನೋಡಿ !!

ಡಿಜಿಟಲೀಕರಣ ಮತ್ತು ಬ್ರಾಂಡ್ ಮೌಲ್ಯ ಕಾಪಾಡಿಕೊಳ್ಳುವ ವಿಚಾರವಾಗಿ ಕಂಪನಿಯು ಗ್ರಾಹಕರೊಂದಿಗೆ ನಿಕಟ ಸಂಪರ್ಕ ಹೊಂದಲು ನಿರ್ಧರಿಸಲಾಗಿದ್ದು ಈಗಾಗಲೇ ಮೈಸ್ಕೋಡಾ ತಂತ್ರಾಂಶ ಬಿಡುಗಡೆಗೊಳಿಸಿದೆ.

Read more on ಸ್ಕೋಡಾ skoda
English summary
A Skoda Octavia was pulled by donkeys in India after an angry customer took this extreme measure for trouble he was facing.
Story first published: Wednesday, March 8, 2017, 18:49 [IST]
Please Wait while comments are loading...

Latest Photos