Accident: ಟ್ರಾಕ್ಟರ್, ಟ್ರಕ್‌ಗೆ ಡಿಕ್ಕಿಯಾದ 5 ಸ್ಟಾರ್ ಸೇಫ್ಟಿ ರೇಟಿಂಗ್‌ನ 'ಸ್ಕೋಡಾ ಸ್ಲಾವಿಯಾ'.. ಪ್ರಯಾಣಿಕರು ಸೇಫಾ?

ಭಾರತದ ರಸ್ತೆಗಳಲ್ಲಿ ಪ್ರತಿದಿನ ದಿನ ಒಂದಿಲ್ಲೊಂದು ಕಾರಣಗಳಿಗೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಯಾವುದೇ ವಾಹನ ಆಕ್ಸಿಡೆಂಟ್ ಗೆ ಒಳಗಾದಾಗಲೇ ಅದರ ನಿರ್ಮಾಣ ಗುಣಮಟ್ಟದ ಸತ್ಯಾಸತ್ಯತೆ ತಿಳಿಯುತ್ತದೆ. ಇತ್ತೀಚೆಗೆ ಗೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್‌ ಪಡೆದಿರುವ ಸ್ಕೋಡಾ ಸ್ಲಾವಿಯಾ ಟ್ರಾಕ್ಟರ್, ಟ್ರಕ್‌ಗೆ ಡಿಕ್ಕಿಯಾಗಿಯಾಗಿದ್ದು, ಮುಂದೇನಾಯ್ತು ತಿಳಿಯೋಣ.

ಭೀಕರ ಅಪಘಾತದ ವಿಡಿಯೋವನ್ನು ನಿಖಿಲ್ ರಾಣಾ ಎಂಬುವವರು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿದ್ದಾರೆ. ಅಲಹಾಬಾದ್ ಕಾನ್ಪುರ ಹೆದ್ದಾರಿಯಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಸ್ಕೋಡಾ ಸ್ಲಾವಿಯಾ, ಟೈರ್ ಬ್ಲಾಸ್ಟ್ ಆಗಿದ್ದ ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿದೆ. ಬಳಿಕ, ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರಕ್‌ನ ಹಿಂಭಾಗಕ್ಕೆ ಗುದ್ದಿದೆ. ಇಲ್ಲಿ ಯಾರ ತಪ್ಪೆಂದು ತನಿಖೆಯಿಂದ ಬಯಲಾಗಬೇಕಾಗಿದೆ.

Road Accident: ಟ್ರಾಕ್ಟರ್, ಟ್ರಕ್‌ಗೆ ಡಿಕ್ಕಿಯಾದ 5 ಸ್ಟಾರ್ ಸೇಫ್ಟಿ ರೇಟಿಂಗ್‌ನ ಸ್ಕೋಡಾ ಸ್ಲಾವಿಯಾ.. ಪ್ರಯಾಣಿಕರು ಸೇಫ್ ಆದ್

ಈ ಮಟ್ಟಿಗೆ ಅಪಘಾತವಾದರೂ ಸ್ಕೋಡಾ ಸ್ಲಾವಿಯಾ ಚಾಲಕ ಹಾಗೂ ಸಹ ಪ್ರಯಾಣಿಕ ಸೀಟ್ ಬೆಲ್ಟ್ ಹಾಕಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿಯಾಗಿದ್ದರಿಂದ ಕಾರಿನ ಸೈಡ್ ನ ಒಂದು ಭಾಗ ಹಾಗೂ ರೂಫ್ ಗೆ ಹಾನಿಯಾಗಿದೆ. ಅಷ್ಟು ಬಿಟ್ಟರೆ ಯಾವುದೇ ರೀತಿಯಲ್ಲಿ ಡ್ಯಾಮೇಜ್ ಆಗಿಲ್ಲ. ಜೊತೆಗೆ ವಿಡಿಯೋದಲ್ಲಿ ಆಕ್ಸಿಡೆಂಟ್ ನಂತರ, ಟ್ರಕ್‌ನ ಹಿಂಭಾಗದಿಂದ ಕಾರನ್ನು ಮತ್ತೆ ಚಾಲಕ ಓಡಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ಕೋಡಾ ಸ್ಲಾವಿಯಾ, ಗೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್‌ ಪಡೆಯುವ ಮೂಲಕ ಅತ್ಯಂತ ಸುರಕ್ಷಿತ ಸೆಡಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.71 ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿದ್ದು, ಸೈಡ್ ಇಂಪ್ಯಾಕ್ಟ್ ಟೆಸ್ಟ್ ನಲ್ಲಿ 'OK' ರೇಟಿಂಗ್ ಪಡೆದುಕೊಂಡಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 42 ಅಂಕಗಳನ್ನು ಪಡೆಯುವ ಮೂಲಕ ಅಲ್ಲಿಯೂ 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಸ್ಕೋಡಾ ಸ್ಲಾವಿಯಾ ಯಾವೆಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, ಈ ಕಾರು, 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ISOFIX ಚೈಲ್ಡ್-ಸೀಟ್ ಆಂಕಾರೇಜ್ಸ್, ಹಿಲ್ ಹೋಲ್ಡ್ ಅಸಿಸ್ಟ್ ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಇರಲಿ ಎಚ್ಚರಿಕೆ: ಹೆದ್ದಾರಿ ಸೇರಿದಂತೆ ಸಣ್ಣ ಪುಟ್ಟ ರಸ್ತೆಯಲ್ಲಿ ವಾಹನಗಳನ್ನು ಸರಿಯಾದ ಲೈನ್ ನಲ್ಲಿ ಚಲಾಯಿಸುವ ಅಭ್ಯಾಸವನ್ನು ರೂಡಿಸಿಕೊಳ್ಳಿ. ನಿಗದಿಪಡಿಸಿರುವ ವೇಗದ ಮಿತಿಯಲ್ಲಿ ವಾಹನಗಳ ಚಲಾಯಿಸಿ, ಮೊಬೈಲ್ ಅಥವಾ ಏರ್ ಫೋನ್ ನಲ್ಲಿ ಮಾತನಾಡಿಕೊಂಡು ವಾಹನಗಳನ್ನು ಓಡಿಸಬೇಡಿ. ಮದ್ಯಪಾನ ಮಾಡಬೇಡಿ. ಜೊತೆಗೆ ಸೀಟ್ ಬೆಲ್ಟ್ ಅಥವಾ ಹೆಲ್ಮೆಟ್ ಧರಿಸಿರಿ.

ಒಟ್ಟಾರೆ, ಈ ಘಟನೆಯನ್ನು ಗಮನಿಸಿದಾಗ ಇದು ಯಾರ ತಪ್ಪೆಂದು ತನಿಖೆಯಿಂದ ಗೊತ್ತಾಗಬೇಕಾಗಿದೆ. ಆದರೂ, ಸ್ಕೋಡಾ ಸ್ಲಾವಿಯಾ ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿದ್ದರಿಂದ ಪ್ರಯಾಣಿಕರು ಸುಲಭವಾಗಿ ಪಾರಾಗಿದ್ದಾರೆ. ಏನೇ ಆಗಲಿ ಹೆದ್ದಾರಿಯಲ್ಲಿ ವಾಹನ ಚಲಾಯಿಸುವಾಗ ಅತಿ ವೇಗದ ಚಾಲನೆ ಅಪಾಯಕಾರಿಯಾಗಿದ್ದು, ಸೀಮಿತ ವೇಗದಲ್ಲಿ ವಾಹನಗಳನ್ನು ಓಡಿಸುವ ಮೂಲಕ ನಿಮ್ಮ ಜಾಗ್ರತೆಯಲ್ಲಿ ನೀವಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, April 22, 2023, 11:45 [IST]
English summary
Skoda slavia car crashes tractor truck details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+