ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ಇತ್ತೀಚಿನ ದಿನಗಳಲ್ಲಿ, ಚಿಕ್ಕ ಮಕ್ಕಳು ಸಹ ಕಾರ್, ಬೈಕ್ ಚಾಲನೆ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಪೋಷಕರಿಗೆ ತಿಳಿಸದೆ ವಾಹನಗಳನ್ನು ಹೊರತೆಗೆಯುತ್ತಾರೆ. ಇತ್ತೀಚೆಗೆ 5 ವರ್ಷದ ಬಾಲಕನೊಬ್ಬ ಮರ್ಸಿಡಿಸ್ ಕಾರ್ ಅನ್ನು ಚಾಲನೆ ಮಾಡಿಕೊಂಡು ಲ್ಯಾಂಬೊರ್ಗಿನಿ ಕಾರು ಖರೀದಿಸಲು ತೆರಳಿದ್ದ.

ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. ಉತಾಹ್ ನಗರದ ಹೆದ್ದಾರಿಯಲ್ಲಿದ್ದ ಪೊಲೀಸರು ರಸ್ತೆಯ ಎಡಭಾಗದಲ್ಲಿ ಮರ್ಸಿಡಿಸ್ ಕಾರು ಚಲಿಸುತ್ತಿರುವುದನ್ನು ನೋಡಿದಾಗ ಅನುಮಾನ ಬಂದಿದೆ. ಈ ಕಾರಣಕ್ಕೆ ಸೈರನ್ ಮಾಡಿದ್ದಾರೆ.

ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ಸೈರನ್ ನಂತರ ಆ ಬಾಲಕನು ಕಾರನ್ನು ನಿಲ್ಲಿಸಿದ್ದಾನೆ. ಪೊಲೀಸರು ಹಾಗೂ ಆ ಬಾಲಕನ ನಡುವೆ ಮಾತುಕತೆ ನಡೆದಿದೆ. ಈ ಮಾತುಕತೆಯ ವೀಡಿಯೊವನ್ನು ಬಿಡುಗಡೆಗೊಳಿಸಲಾಗಿದೆ. ಈ ವೀಡಿಯೊ ಯೂಟ್ಯೂಬ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ಈ ಮಾತುಕತೆಯಲ್ಲಿ ಪೊಲೀಸರು ಬಾಲಕನಿಗೆ ನಿನಗೆ ಐದು ವರ್ಷವಾಗಿದೆಯೇ ಎಂದು ಕೇಳಿದ್ದಾರೆ. ಇದರ ಜೊತೆಗೆ ಕಾರನ್ನು ಚಾಲನೆ ಮಾಡಲು ಎಲ್ಲಿ ಕಲಿತೆ, ಕಾರು ಚಾಲನೆಯನ್ನು ಯಾರು ಕಲಿಸಿದರು ಎಂದೆಲ್ಲ ಆ ಬಾಲಕನನ್ನು ಕೇಳಿದ್ದಾರೆ.

ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ಅಪ್ರಾಪ್ತ ವಯಸ್ಸಿನ ಕಾರಣಕ್ಕೆ ಪೊಲೀಸರು ಬಾಲಕನ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ. ಆ ಬಾಲಕನು ಲ್ಯಾಂಬೊರ್ಗಿನಿ ಕಾರು ಖರೀದಿಸಲು ತಾಯಿಯೊಂದಿಗೆ ಜಗಳವಾಡುತ್ತಿದೆ. ತನ್ನ ತಾಯಿ ನಿರಾಕರಿಸಿದ ಕಾರಣ ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ಹೋಗುತ್ತಿರುವುದಾಗಿ ತಿಳಿಸಿದ್ದಾನೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ಆ ಬಾಲಕನು ಮರ್ಸಿಡಿಸ್ ಕಾರಿನಲ್ಲಿ ಕ್ಯಾಲಿಫೋರ್ನಿಯಾಗೆ ಹೋಗುತ್ತಿದ್ದನು ಎಂದು ಪೊಲೀಸರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಆ ಬಾಲಕ ಕ್ಯಾಲಿಫೋರ್ನಿಯಾದಲ್ಲಿ ತನಗಾಗಿ ಕಾರು ಖರೀದಿಸಲು ಮುಂದಾಗಿದ್ದ. ಆದರೆ ಆತನ ಬಳಿ ಕೇವಲ 3 ಡಾಲರ್ ಇತ್ತೆಂದು ಪೊಲೀಸರು ಹೇಳಿದ್ದಾರೆ.

ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ನಂತರ ಪೊಲೀಸರು ಆ ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿ ಅವನ ಪೋಷಕರಿಗೆ ಒಪ್ಪಿಸಿದ್ದಾರೆ. ಈಗ ಬಿಡುಗಡೆಯಾಗಿರುವ ಮತ್ತೊಂದು ವೀಡಿಯೊದಲ್ಲಿ ಆ ಬಾಲಕನು ತನ್ನ ಕನಸಿನ ಲ್ಯಾಂಬೊರ್ಗಿನಿ ಕಾರ್ ಅನ್ನು ಚಾಲನೆ ಮಾಡುತ್ತಿದ್ದಾನೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ಲ್ಯಾಂಬೊರ್ಗಿನಿ ಸೂಪರ್ ಕಾರುಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿವೆ. ಈ ಕಾರು ಮಕ್ಕಳನ್ನು ಸಹ ಆಕರ್ಷಿಸಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಐದು ವರ್ಷದ ಬಾಲಕನು ಕಾರನ್ನು ಚಾಲನೆ ಮಾಡುವುದು ಸಣ್ಣ ವಿಷಯವಲ್ಲ.

ಲ್ಯಾಂಬೊರ್ಗಿನಿ ಕಾರು ಖರೀದಿಸಲು ಮರ್ಸಿಡಿಸ್ ಕಾರಿನಲ್ಲಿ ತೆರಳಿದ ಪುಟ್ಟ ಪೋರ..!

ಅಮೆರಿಕಾವೇ ಆಗಲಿ, ಭಾರತವೇ ಆಗಲಿ, ಅಪ್ರಾಪ್ತ ವಯಸ್ಕರು ಸಾರ್ವಜನಿಕ ರಸ್ತೆಯಲ್ಲಿ ಕಾರುಗಳನ್ನು ಚಾಲನೆ ಮಾಡುವಂತಿಲ್ಲ. ಈ ವಯಸ್ಸಿನ ಮಕ್ಕಳು ಸೈಕಲ್ ಸವಾರಿ ಮಾಡಿಕೊಂಡಿದ್ದರೆ ಒಳಿತು.

Most Read Articles

Kannada
English summary
5 year old boy in USA drives mothers Mercedes to purchase new Lamborghini caught by cops. Read in Kannada.
Story first published: Thursday, May 7, 2020, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X