ಪುಟ್ಟ ಹ್ಯುಂಡೈ ಐ20, ಡಿಕ್ಕಿ: ಮಕಾಡೆ ಬಿದ್ದ ಟಾಟಾ ನೆಕ್ಸಾನ್‌, ಎಲ್ಲ ಪ್ರಯಾಣಿಕರು ಸೇಫ್.. ವಿಡಿಯೋ

ಟಾಟಾ ನೆಕ್ಸಾನ್ (Tata Nexon) ಮತ್ತು ಹ್ಯುಂಡೈ ಐ20 (Hyundai i20) ನಡುವೆ ಅಪಘಾತ ಸಂಭವಿಸಿದೆ. ಆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟಕ್ಕೂ ಘಟನೆ ಹೇಗೆ ಸಂಭವಿಸಿತು, ಪ್ರಯಾಣಿಕರಿಗೆ ಏನಾಯಿತು ಎಂಬ ವಿವರಗಳು ಇಲ್ಲಿವೆ.

ಅಪಘಾತದ ಸಿಸಿಟಿವಿ ದೃಶ್ಯಾವಳಿಗಳಿರುವ ವಿಡಿಯೋವನ್ನು ರೋಹಿಲ್ ಖಾನ್ ಎಂಬುವವರೂ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ್ಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಕಿರಾತ್‌ಪುರ ಪಟ್ಟಣದ ರಸ್ತೆಯೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು ಖಾಲಿ ರಸ್ತೆ ಎಂಬಂತೆ ಭಾಸವಾಗುತ್ತದೆ.

ಪುಟ್ಟ ಹ್ಯುಂಡೈ ಐ20, ಟಾಟಾ ನೆಕ್ಸಾನ್‌ಗೆ ಡಿಕ್ಕಿ: ಮಕಾಡೆ ಬಿದ್ದ ನೆಕ್ಸಾನ್‌, ಎಲ್ಲ ಪ್ರಯಾಣಿಕರು ಸೇಫ್.. ವಿಡಿಯೋ ನೋಡಿ

ಟಾಟಾ ನೆಕ್ಸಾನ್ ನಿಯಮಿತ ವೇಗದಲ್ಲಿ ಹೋಗುತ್ತಿರುತ್ತದೆ. ಎದುರುಗಡೆಯಿಂದ ರಾಂಗ್ ಸೈಡ್‌ನಲ್ಲಿ ಬರುತ್ತಿದ್ದ ಹ್ಯುಂಡೈ ಐ20 ಕಾರನ್ನು ನೋಡಿದ ನೆಕ್ಸಾನ್ ಚಾಲಕ, ತನ್ನ ಕಾರನ್ನು ಬಲಭಾಗಕ್ಕೆ ತಿರುಗಿಸಿದಂತೆ ಕಾಣಿಸುತ್ತಿದೆ. ಇಲ್ಲವೇ.. ಡ್ರೈವರ್ ಆ ಕಡೆಯೇ ಹೋಗಲು ಕಾರನ್ನು ಬಲಗಡೆಗೆ ಓಡಿಸಿರಬಹುದು. ಅಷ್ಟರಲ್ಲಿ ವೇಗವಾಗಿ ಹ್ಯುಂಡೈ ಐ20, ನೆಕ್ಸಾನ್‌ ಒಂದು ಭಾಗಕ್ಕೆ (side) ಬಡಿದಿದೆ. ಪರಿಣಾಮ, ಕಾರು ಪಲ್ಟಿಯಾಗಿದೆ. ಸ್ಥಳೀಯರು ಸಹಾಯಕ್ಕೆ ಬರುತ್ತಿರುವುದನ್ನು ನೋಡಬಹುದು.

ಅಪಘಾತದಲ್ಲಿ ಯಾರಿಗೂ ಗಾಯಗಳಲಿಲ್ಲ. ಸುರಕ್ಷಿತವಾಗಿ ಅಪಾಯದಿಂದ ಪಾರಾಗಿದ್ದಾರೆ. ನೆಕ್ಸಾನ್‌ ಕಾರು ಪಲ್ಟಿಯಾದರೂ ಸ್ವಲ್ಪವೇ ಹಾನಿಯಾಗಿದೆ. ಇದನ್ನು ಫೋಟೋಗಳಲ್ಲಿ ಕಾಣಬಹುದು. ಆದರೆ, ಈ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ನೆನಪಿರಲಿ.. ಈ ರೀತಿಯ ಘಟನೆಗಳು ನಡೆದಾಗ ಸೀಟ್ ಬೆಲ್ಟ್ ಧರಿಸುವುದರಿಂದ ಸುಲಭವಾಗಿ ಎಸ್ಕೇಪ್ ಆಗಬಹುದು.

ಪುಟ್ಟ ಹ್ಯುಂಡೈ ಐ20, ಟಾಟಾ ನೆಕ್ಸಾನ್‌ಗೆ ಡಿಕ್ಕಿ: ಮಕಾಡೆ ಬಿದ್ದ ನೆಕ್ಸಾನ್‌, ಎಲ್ಲ ಪ್ರಯಾಣಿಕರು ಸೇಫ್.. ವಿಡಿಯೋ ನೋಡಿ

ಇಲ್ಲಿ, ಚಿಕ್ಕ ಕಾರು ಡಿಕ್ಕಿಯಾದರೂ ದೊಡ್ಡ ಎಸ್‌ಯುವಿ ಪಲ್ಟಿ ಏಕೆ ಆಗುತ್ತವೆ ಎಂಬುದನ್ನು ತಿಳಿಯೋಣ. ಈ ಹಿಂದೆ, ಟಾಟಾ ನ್ಯಾನೋ ಡಿಕ್ಕಿಯಾಗಿ ಮಹೀಂದ್ರಾ ಥಾರ್ ನಂತಹ ದೊಡ್ಡ ಕಾರುಗಳು ಪಲ್ಟಿಯಾಗುರುವುದನ್ನು ಕಂಡಿದ್ದೀವೆ. ಅದು, ನಾನಾ ಕಾರಣಗಳಿಗೆ ನಡೆದಿರಬಹುದು. ಆದರೆ, ಎಸ್‌ಯುವಿಗಳು ಎಷ್ಟೇ ಜನಪ್ರಿಯವಾಗಿದ್ದರೂ ಅವುಗಳನ್ನು ನಿಧಾನವಾದ ಮತ್ತು ಒರಟಾಗಿರುವ (rugged) ರಸ್ತೆಗಳಲ್ಲಿ ಚಲಿಸಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿರುತ್ತದೆ.

ಜೊತೆಗೆ ಸ್ಟ್ಯಾಂಡರ್ಡ್ ಹ್ಯಾಚ್‌ಬ್ಯಾಕ್‌ಗಳು ಮತ್ತು ಸೆಡಾನ್‌ಗಳಿಗೆ ಹೋಲಿಸಿದರೆ, ಎಸ್‌ಯುವಿಗಳು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ ಪಡೆದಿರಲಿವೆ. ಇದರಿಂದ (ರಸ್ತೆಯ ತಿರುವು) ಪಲ್ಟಿಯಾಗಿರುವ ಸಂಭವ ಹೆಚ್ಚಿರುತ್ತದೆ. ಅದರಿಂದಾಗಿ ಎಸ್‌ಯುವಿಗಳನ್ನು ವೇಗವಾಗಿ ಓಡಿಸುವಾಗ ಎಚ್ಚರಿಕೆ ವಹಿಸುವುದು ತುಂಬಾ ಅತ್ಯಗತ್ಯ. ಅಪಘಾತಕ್ಕೆ ತುತ್ತಾಗಿದ್ದ ಟಾಟಾ ನೆಕ್ಸಾನ್‌ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದಾಗಿದ್ದು, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿದೆ. ಆ ಕಾರಣಕ್ಕೆ ಕಾರಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಪ್ರಾಯಪಾಯದಿಂದ ಪಾರಾಗಿದ್ದಾರೆ.

ರಸ್ತೆ ಅಪಘಾತ ತಡೆಯುವುದು ಹೇಗೆ: ಸಂಚಾರಿ ನಿಯಮವನ್ನು ಪಾಲಿಸುವ ಮೂಲಕ ಅಪಘಾತವನ್ನು ತಪ್ಪಿಸಬಹುದು. ಹೆದ್ದಾರಿಯಲ್ಲಿ ನಿಗದಿತ ವೇಗಮಿತಿಯಲ್ಲಿ ವಾಹನಗಳನ್ನು ಚಲಾಯಿಸಬೇಕು. ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಕಾರುಗಳನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದನ್ನು ಮರೆಯದಿರಿ. ಫೋನ್ ನಲ್ಲಿ ಮಾತನಾಡಿಕೊಂಡ ಅಥವಾ ಮದ್ಯಪಾನ ಮಾಡಿ, ಎಂದಿಗೂ ವಾಹನಗಳನ್ನು ಓಡಿಸಬೇಡಿ. ಈ ಮೂಲಕ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 25, 2023, 15:29 [IST]
English summary
Small hyundai i20 hits tata nexon suv topples it passengers safe video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+