ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ದೇಶದಲ್ಲಿ ಕರೋನಾ ವೈರಸ್ ಎರಡನೇ ಅಲೆಯ ಆರ್ಭಟ ನಿಧಾನವಾಗಿ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ದೇಶದ ವಿವಿಧ ರಾಜ್ಯಗಳಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ಹಂತ ಹಂತವಾಗಿ ತೆಗೆದು ಹಾಕಲಾಗಿದೆ.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡಿರುವುದರಿಂದ ಜನರು ಮೊದಲಿನಂತೆ ಓಡಾಡುತ್ತಿದ್ದಾರೆ. ಅದರಲ್ಲೂ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚುತ್ತಿದೆ. ಮಾರುತಿ ಎರ್ಟಿಗಾ ಕಾರಿನಲ್ಲಿ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಅನಿರೀಕ್ಷಿತ ಅತಿಥಿಯೊಬ್ಬರು ಎದುರಾಗಿದ್ದಾರೆ. ಯಾರು ಆ ಅತಿಥಿ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ರತನ್ ದೀಪ್ ಎಂಬ ಈ ವ್ಯಕ್ತಿ ಪ್ರವಾಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಹಾವೊಂದು ಕಾಣಿಸಿಕೊಂಡಿದೆ. ಈ ಬಗ್ಗೆ ಎಬಿಪಿ ನ್ಯೂಸ್ ಟಿವಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ರತನ್ ದೀಪ್ ತಮ್ಮ ಎರ್ಟಿಗಾ ಕಾರಿನಲ್ಲಿ ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ಕಾರಿನ ಮುಂಭಾಗದ ವಿಂಡ್‌ಶೀಲ್ಡ್ ಮೇಲೆ ಹಾವೊಂದು ಹರಿದಾಡಿದೆ.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ರತನ್ ದೀಪ್ ಭಯದಿಂದ ಕಾರನ್ನು ನಿಲ್ಲಿಸಿದ್ದಾರೆ. ಆದರೆ ಹೆದ್ದಾರಿಯಲ್ಲಿ ಯಾರೂ ಇರದ ಕಾರಣ ಕಾರ್ ಅನ್ನು ಚಾಲನೆ ಮಾಡಿಕೊಂಡು ಸಾಗಲು ನಿರ್ಧರಿಸಿದ್ದಾರೆ. ಹಾವು ಸುಮಾರು ಎರಡು ಕಿ.ಮೀವರೆಗೂ ಮುಂಭಾಗದ ವಿಂಡ್‌ಶೀಲ್ಡ್ ಮೇಲೆ ಹರಿದಾಡಿದೆ.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ಎರಡು ಕಿ.ಮೀ ಸಾಗಿ ಸರ್ವೀಸ್ ಸೆಂಟರ್'ನಲ್ಲಿ ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ಕಾರು ನಿಂತ ನಂತರ ಹಾವು ಕಾರಿನ ಕೆಳಗೆ ಸಾಗಿದೆ. ಆಗ ಅಲ್ಲಿದ್ದವರೊಬ್ಬರು ಹಾವನ್ನು ಸೆರೆ ಹಿಡಿದಿದ್ದಾರೆ.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ಈಗ ದೇಶಾದ್ಯಂತ ಮಳೆಗಾಲ ಆರಂಭವಾಗಿದೆ. ಮಹಾರಾಷ್ಟ್ರವು ಇದರಿಂದ ಹೊರತಾಗಿಲ್ಲ. ಮಳೆಗಾಲದಲ್ಲಿ ಹಾವುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿರುತ್ತವೆ. ಈ ಅವಧಿಯಲ್ಲಿ ಹಾವುಗಳು ಬೆಚ್ಚಗಿನ ಪ್ರದೇಶವನ್ನು ಹುಡುಕುತ್ತವೆ.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ಈ ಕಾರಣಕ್ಕೆ ಬೆಚ್ಚಗಿನ ಅನುಭವ ನೀಡುವ ವಾಹನಗಳ ಎಂಜಿನ್ ಭಾಗಕ್ಕೆ ಪ್ರವೇಶಿಸುತ್ತವೆ. ಹಲವು ದಿನಗಳ ನಂತರ ವಾಹನವನ್ನು ಹೊರ ತೆಗೆಯುವಾಗ ಆ ವಾಹನವನ್ನು ಕೂಲಂಕುಷವಾಗಿ ಪರಿಶೀಲಿಸುವುದು ಒಳ್ಳೆಯದು.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ರತನ್ ದೀಪ್'ರವರ ಕಾರಿನಲ್ಲಿಯೂ ಎಂಜಿನ್ ಪ್ರದೇಶದಲ್ಲಿ ಅಡಗಿದ್ದ ಹಾವು ಕಾರು ಚಲಿಸುತ್ತಿದ್ದಾಗ ಕಾರಿನ ವಿಂಡ್‌ಶೀಲ್ಡ್ ಮೇಲೆ ಬಂದಿದೆ. ರತನ್ ದೀಪ್'ರವರು ಕಾರು ನಿಲ್ಲಿಸುತ್ತಿದ್ದಂತೆ ಕಾರಿನ ಕೆಳಕ್ಕೆ ನುಸುಳಿದೆ.

ಏಕಾಏಕಿ ಹಾವುಗಳನ್ನು ಕಂಡ ತಕ್ಷಣ ಭಯವಾಗುವುದು ಸಹಜ. ಹಾವು ಕಾರಿನ ಮೇಲೆ ಹರಿದಾಡುವಾಗ ಅದು ಎತ್ತ ಸಾಗುತ್ತದೆ ಎಂಬುದರ ಮೇಲೆ ಗಮನ ಹರಿಸುವುದು ಒಳ್ಳೆಯದು. ಏಕೆಂದರೆ ಹಾವುಗಳು ಮತ್ತೆ ಬರುವ ಸಾಧ್ಯತೆಗಳಿರುತ್ತವೆ.

ಚಲಿಸುತ್ತಿದ್ದ ಕಾರಿನ ವಿಂಡ್‌ಶೀಲ್ಡ್ ಮೇಲೆ ಏಕಾಏಕಿ ಕಾಣಿಸಿಕೊಂಡ ಹಾವು

ರತನ್ ದೀಪ್ ಚಾಣಾಕ್ಷತನದಿಂದ ತಮ್ಮ ಕಾರನ್ನು ಸರ್ವೀಸ್ ಸೆಂಟರಿಗೆ ಕೊಂಡೊಯ್ದಿದ್ದಾರೆ. ಸರ್ವೀಸ್ ಸೆಂಟರ್'ನಲ್ಲಿದ್ದವರು ಹಾವನ್ನು ಹಿಡಿಯುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Snake moves on Maruti Ertiga windshield. Read in Kannada.
Story first published: Monday, July 19, 2021, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X