ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಈ ಅವಧಿಯಲ್ಲಿ ಬಹುತೇಕ ಎಲ್ಲಾ ರೀತಿಯ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಯಿತು.

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಕಷ್ಟ ಪಡುವಾಗ ಕೆಲವರು ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿದರು. ತಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಿದರು. ಹೀಗೆ ಲಾಕ್‌ಡೌನ್‌ ಅವಧಿಯಲ್ಲಿ ಜನರಿಗೆ ನೆರವಾದರಲ್ಲಿ ಹಾಂಗ್‌ನಾವೊ ಕೊನ್ಯಾಕ್ ಸಹ ಸೇರಿದ್ದಾರೆ.

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

39 ವರ್ಷದ ಹಾಂಗ್‌ನಾವೊ ಕೊನ್ಯಾಕ್ ನಾಗಾಲ್ಯಾಂಡ್‌ನ ಮಾನ್ ಮೂಲದ ಸಮಾಜ ಸೇವಕ. ಲಾಕ್‌ಡೌನ್‌ ಅವಧಿಯಲ್ಲಿ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿತ್ತು. ಆದರೂ ಸಹ ಜನರು ವಾಹನಗಳ ಕೊರತೆಯಿಂದಾಗಿ ತೊಂದರೆಗಳನ್ನು ಎದುರಿಸಬೇಕಾಯಿತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ಇದರಿಂದಾಗಿ ಅನಾರೋಗ್ಯ ಪೀಡಿತರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೇ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಈ ಸಂಕಷ್ಟದ ಸಮಯದಲ್ಲಿ ಹಾಂಗ್‌ನಾವೊ 48 ಗರ್ಭಿಣಿಯರನ್ನು ತಮ್ಮ ಆಂಬ್ಯುಲೆನ್ಸ್‌ನಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ಜೊತೆಗೆ ತಾಯಿ ಮಗುವಿನ ಜೀವ ಉಳಿಸಿದ್ದಾರೆ. ಇದು ಮಾತ್ರವಲ್ಲದೇ ಹಾಂಗ್‌ನಾವೊ 100ಕ್ಕೂ ಹೆಚ್ಚು ರೋಗಿಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಗತ್ಯವಿರುವವರನ್ನು ಆಸ್ಪತ್ರೆಗೆ ಸಾಗಿಸಲು ಹಾಂಗ್‌ನಾವೊ ತಮ್ಮ ತಂದೆ ನೀಡಿದ್ದ ಮಹೀಂದ್ರಾ ಬೊಲೆರೊ ಕಾರನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ತಾನು ಮೊದಲು ತನ್ನ ನೆರೆಯ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದೆ ಎಂದು ಹಾಂಗ್‌ನಾವೊ ಹೇಳಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಆಂಬುಲೆನ್ಸ್ ಸಿಗದೇ ಆ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದರು. ಹಾಂಗ್‌ನಾವೊ ಅವರ ಗಮನಕ್ಕೆ ಬಂದ ನಂತರ ತಡ ಮಾಡದೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ಮಹಿಳೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾದ ಕಾರಣ ಆಕೆಗೆ ಸುರಕ್ಷಿತವಾಗಿ ಹೆರಿಗೆಯಾಗಿದೆ. ಇದಾದ ನಂತರ ಅವರ ಪರೋಪಕಾರವು ಚರ್ಚೆಯ ಕೇಂದ್ರ ಬಿಂದುವಾಯಿತು. ಕ್ರಮೇಣ ಅವರ ನೆರವಿನ ಕಥೆಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯವಾದವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ಮಾನ್ ಜಿಲ್ಲಾಡಳಿತವು ಅವರ ಈ ಕಾರ್ಯವನ್ನು ಶ್ಲಾಘಿಸಿ, ಆಂಬ್ಯುಲೆನ್ಸ್ ಸೇವೆಗಾಗಿ ಸಹಾಯವಾಣಿ ಸಂಖ್ಯೆಯನ್ನು ಸಹ ನೀಡಿದೆ. ಅವರು ಜನರಿಂದ ಯಾವುದೇ ಬಾಡಿಗೆ ತೆಗೆದುಕೊಳ್ಳುವುದಿಲ್ಲ. ಯಾರಿಂದಲೂ ಆರ್ಥಿಕ ನೆರವನ್ನೂ ಪಡೆಯುವುದಿಲ್ಲ ಎಂದು ಹಾಂಗ್‌ನಾವೊ ಹೇಳಿದ್ದಾರೆ.

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ಜನರ ಪ್ರಾರ್ಥನೆ ತನಗೆ ಸಾಕು ಎಂದು ಅವರು ಹೇಳುತ್ತಾರೆ. ಆಂಬ್ಯುಲೆನ್ಸ್ ಗೆ ಬಾಡಿಗೆ ನೀಡಲು ಹಣವಿಲ್ಲದ ಅನೇಕ ಜನರಿದ್ದಾರೆ. ಅವರಿಗೆ ಸಹಾಯ ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತಂದೆ ನೀಡಿದ್ದ ಕಾರನ್ನು ಜನ ಸೇವೆಗಾಗಿ ಆಂಬ್ಯುಲೆನ್ಸ್ ಆಗಿ ಬದಲಿಸಿದ ಸಮಾಜ ಸೇವಕ

ಪೆಟ್ರೋಲ್ ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಿದೆ ಎಂದು ಹಾಂಗ್‌ನಾವೊ ಹೇಳುತ್ತಾರೆ. ಕೆಲವೊಮ್ಮೆ ಪೆಟ್ರೋಲ್ ಬಂಕ್ ಗಳು ಅವರಿಗೆ ಉಚಿತವಾಗಿ ಪೆಟ್ರೋಲ್ ನೀಡುತ್ತವೆ. ಜನರ ಜೀವ ಉಳಿಸಲು ತನ್ನ ನೀಡಿದ್ದ ಕಾರನ್ನು ಬಳಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Most Read Articles

Kannada
English summary
Social worker from Nagaland converts his car into ambulance to help people. Read in Kannada.
Story first published: Wednesday, October 14, 2020, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X