ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವ ನೆಪದಲ್ಲಿ ಬೆಂಗಳೂರು ಟೆಕ್ಕಿಯ ಬರ್ಬರ ಕೊಲೆ
ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಮಗದೊಂದು ಬರ್ಬರ ಕೊಲೆ ಕೃತ್ಯ ಬಯಲಾಗಿದೆ. ಸೆಕೆಂಡ್ ಹ್ಯಾಂಡ್ ಖರೀದಿಸುವ ನೆಪದಲ್ಲಿ ವ್ಯಕ್ತಿಯೋರ್ವನನ್ನು ಅಪಾರ್ಟ್ ಮೆಂಟ್ ನಲ್ಲಿ ಕೊಲೆ ಮಾಡಿರುವ ಘಟನೆಯು ನಗರದಿಂದ ವರದಿಯಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸೋಹನ್ ಹಲ್ದಾರ್ ಎಂಬ ಟೆಕ್ ಉದ್ಯಮಿ ತಮ್ಮ ಕೆಟಿಎಂ ಡ್ಯೂಕ್ 390 ಬೈಕ್ ಮಾರಾಟಕ್ಕೆ ಸಂಬಂಧಪಟ್ಟಂತೆ ಜಾಹೀರಾತುವೊಂದನ್ನು ಸೆಕೆಂಡ್ ಟು ನನ್ ಎಂಬ ಫೇಸ್ ಬುಕ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದರು.

ಬೈಕ್ ವಿವರಗಳನ್ನು ಒದಗಿಸಿದ ಸೋಹನ್ ತಮ್ಮ ಮೊಬೈಲ್ ನಂಬರನ್ನು ಹಂಚಿಕೊಂಡಿದ್ದರು. ಇದಾದ ಬೆನ್ನಲ್ಲೇ ಬೈಕ್ ಖರೀದಿಸಲು ಉತ್ಸುಕತೆಯನ್ನು ವ್ಯಕ್ತವ್ಯಪಡಿಸಿ ಅನಾಮಿಕನೋರ್ವನಿಂದ ಕರೆ ಬಂದಿತ್ತು.

ಕಾರ್ತಿಕ್ ಎಂ ದೌಲತ್ ಹಾಗೂ ವೃತ್ತಿಯಲ್ಲಿ ಎಂಜಿನಿಯರ್ ಎಂದು ಹೆಸರಿಸಿಕೊಂಡಿರುವ ಆರೋಪಿ ಆಗಸ್ಟ್ 01 ಹಾಗೂ 03ರಂದು ಬೈಕ್ ಖರೀದಿಸುವ ನೆಪದಲ್ಲಿ ವಹಿವಾಟು ಬಗ್ಗೆ ಚರ್ಚಿಸಲು ಸೋಹನ್ ಗೆ ಕರೆ ಮಾಡಿದ್ದರು.

ಇದನ್ನೇ ನಂಬಿದ್ದ ಸೋಹನ್ ತಮ್ಮ ಅಪಾರ್ಟ್ ಮೆಂಟ್ ಗೆ ಬರುವಂತೆ ಸೂಚಿಸಿದ್ದರು. ಈ ಸ್ನೇಹ ಮಿಲನದ ವೇಳೆ ವಹಿವಾಟಿನ ಬಗ್ಗೆ ಚರ್ಚಿಸುವಾಗ ಇಬ್ಬರು ಅಪಾರ್ಟ್ ಮೆಂಟ್ ನಲ್ಲಿ ಮದ್ಯ ಪಾನ ಮಾಡಲು ನಿರ್ಧರಿಸಿದ್ದರು.

ಇದೇ ಅವಕಾಶವನ್ನು ಸದುಪಯೋಗಿಸಿಕೊಂಡ ಸೋಹನ್, ಕಾರ್ತಿಕ್ ಗೆ ಮದ್ಯದಲ್ಲಿ ಮಿಶ್ರ ಮಿಶ್ರಣದ ಪಾನೀಯವನ್ನು ನೀಡಿದ್ದರು. ಬಳಿಕ ಉಳಿಸಿಗಟ್ಟಿಸಿ ಕೊಲೆ ಮಾಡಿದ್ದರು.

ಅಲ್ಲಿಂದ ಬಳಿಕ ಆರೋಪಿ ಸೋಹನ್ ಮೋಟಾರ್ ಸೈಕಲ್, ಹೆಲ್ಮೆಟ್ ಹಾಗೂ ದುಡ್ಡನ್ನು ದೋಚಿಕೊಂಡು ಸ್ಥಳದಿಂದ ಪಾರಾರಿಯಾಗಿದ್ದನು. ಸೋಹನ್ ಎಎಂಟಿ ಕಾರ್ಡ್ ನಿಂದಲೂ 27,000 ರುಪಾಯಿಗಳನ್ನು ದೋಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ತನಿಖೆ ತೀವ್ರಗೊಳಿಸಿದ ಪೊಲೀಸರು ಸೋಹನ್ ಮೊಬೈಲ್ ಫೋನ್ ಟ್ರೇಸ್ ಮಾಡುವ ಮೂಲಕ ರಾಜಾಜಿ ನಗರ ಮೂಲದ ಆರೋಪಿ ಕಾರ್ತಿಕ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಹನ್ ಅಪಾರ್ಟ್ ಮೆಂಟ್ ನಲ್ಲಿ ಆಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳಲ್ಲೂ ಕಾರ್ತಿಕ್ ಸೋಹನ್ ಬೈಕ್ ಅಪಹರಿಸುವ ದೃಶ್ಯಗಳು ಕಂಡುಬಂದಿದೆ. ಬಳಿಕ ನಡೆಸಿರುವ ತನಿಖೆಯಲ್ಲಿ ಕಾರ್ತಿಕ್ ಇನ್ನು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಒಟ್ಟಿನಲ್ಲಿ ಈ ಪ್ರಕರಣವು ಹಲವಾರು ಪಾಠಗಳನ್ನು ಕಲಿಸಿಕೊಡುತ್ತಿದೆ. ಸೆಕೆಂಡ್ ಹ್ಯಾಂಡ್ ವಾಹನ ಮಾರಾಟದ ವೇಳೆ ಯಾವುದೇ ಕಾರಣಕ್ಕೂ ಅಪರಿಚಿತರ ಜೊತೆಗೆ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳದಿರಿ.

ಜೊತೆ ಜೊತೆ ಮನೆಗೆ ಕರೆದು ವ್ಯವಹಾರ ಮುಗಿಸುವ ಸಾಹಸಕ್ಕೆ ಮುಂದಾಗದಿರಿ. ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಡೀಲ್ ಬಗ್ಗೆ ಚರ್ಚೆ ನಡೆಯಲಿ. ಹಾಗೆಯೇ ಡೀಲ್ ವೇಳೆ ಒಬ್ಬಂಟಿಯಾಗಿ ತೆರಳದೇ ಸ್ನೇಹಿತರನ್ನು ಜೊತೆಗೆ ಕರೆದೊಯ್ದಿರಿ.


Click it and Unblock the Notifications








